Dalai Lama:13 ವರ್ಷಗಳ ಬಳಿಕ 3 ದಿನಗಳ ಭೇಟಿಗಾಗಿ ಸಿಕ್ಕಿಂಗೆ ಆಗಮಿಸಿದ ದಲೈ ಲಾಮಾ
Team Udayavani, Dec 11, 2023, 3:44 PM IST
ಗ್ಯಾಂಗ್ಟಕ್: ಟಿಬೆಟ್‌ನ ಆಧ್ಯಾತ್ಮಿಕ ಗುರು 14 ನೇ ದಲೈಲಾಮಾ ಟೆಂಜಿನ್ ಗ್ಯಾಟ್ಸೊ ಅವರು 13 ವರ್ಷಗಳ ನಂತರ ಮೂರು ದಿನಗಳ ಭೇಟಿಗಾಗಿ ಸೋಮವಾರ ಬೆಳಿಗ್ಗೆ ಸಿಕ್ಕಿಂಗೆ ಆಗಮಿಸಿದರು.
ಪೂರ್ವ ಸಿಕ್ಕಿಂನ ಲಿಬಿಂಗ್ ಮಿಲಿಟರಿ ಹೆಲಿಪ್ಯಾಡ್‌ನಲ್ಲಿ ದಲೈ ಲಾಮಾ ಬೆಳಿಗ್ಗೆ 10.30 ರ ಸುಮಾರಿಗೆ ಬಂದಿಳಿದ ಅವರನ್ನು ಮುಖ್ಯಮಂತ್ರಿ ಪ್ರೇಮ್ ಸಿಂಗ್ ತಮಾಂಗ್, ಸಂಪುಟ ಸಚಿವರು ಮತ್ತು ಇತರ ಗಣ್ಯರು ಅವರನ್ನು ಸ್ವಾಗತಿಸಿದರು. ಅದಾದ ಬಳಿಕ ದಲೈಲಾಮಾ ಅವರನ್ನು ಹೆಲಿಪ್ಯಾಡ್ ಬಳಿಯ ವಿಸಿ ಗಂಜು ಲಾಮಾ ಗೇಟ್‌ನಿಂದ ರಾಷ್ಟ್ರೀಯ ಹೆದ್ದಾರಿ 10 ರ ಎರಡೂ ಬದಿಗಳಲ್ಲಿ ಹೆಚ್ಚಿನ ಸಂಖ್ಯೆಯ ಭಕ್ತರು ಸರತಿ ಸಾಲಿನಲ್ಲಿ ನಿಂತಿದ್ದರು
ಸಿಕ್ಕಿಂ ಗವರ್ನರ್ ಲಕ್ಷ್ಮಣ್ ಪ್ರಸಾದ್ ಆಚಾರ್ಯ ಅವರು ಇಂದು ಹೋಟೆಲ್‌ನಲ್ಲಿ ದಲೈಲಾಮಾ ಅವರನ್ನು ಭೇಟಿಯಾಗಲಿದ್ದಾರೆ. ದಲೈ ಲಾಮಾ ಅವರು ಡಿಸೆಂಬರ್ 12 ರಂದು ರಾಜಧಾನಿ ಗ್ಯಾಂಗ್‌ಟಾಕ್‌ನ ಪಾಲ್ಜೋರ್ ಕ್ರೀಡಾಂಗಣದಲ್ಲಿ ಧಾರ್ಮಿಕ ಪ್ರವಚನ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು ಡಿಸೆಂಬರ್ 14 ರಂದು ಸಿಕ್ಕಿಂನಿಂದ ಹಿಂತಿರುಗಲಿದ್ದಾರೆ.
ದಲೈ ಲಾಮಾ ಅವರು ಈ ವರ್ಷದ ಅಕ್ಟೋಬರ್‌ನಲ್ಲಿ ಸಿಕ್ಕಿಂಗೆ ಭೇಟಿ ನೀಡಬೇಕಾಗಿತ್ತು ಅದಕ್ಕಾಗಿ ಸಿಕ್ಕಿಂ ಸರ್ಕಾರ ಸಂಪೂರ್ಣ ಸಿದ್ಧತೆಗಳನ್ನು ಮಾಡಿತ್ತು, ಆದರೆ ಅಕ್ಟೋಬರ್ 3 ಮತ್ತು 4 ರ ರಾತ್ರಿ ತೀಸ್ತಾ ಪ್ರವಾಹದಿಂದಾಗಿ ಅವರ ಕಾರ್ಯಕ್ರಮವನ್ನು ಮುಂದೂಡಲಾಯಿತು.
ದಲೈ ಲಾಮಾ ಅವರು 2010 ರಲ್ಲಿ ಸಿಕ್ಕಿಂಗೆ ಕೊನೆಯ ಬಾರಿಗೆ ಭೇಟಿ ನೀಡಿದ್ದರು ಆ ಬಳಿಕ ಹದಿಮೂರು ವರ್ಷಗಳ ಬಳಿಕ ಭೇಟಿ ನೀಡಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಸುಪ್ರೀಂ ತೀರ್ಪಿನಿಂದ ಕಾಂಗ್ರೆಸ್ ಗೆ ಮುಖಭಂಗವಾಗಿದೆ: ಪ್ರಮೋದ್ ಮುತಾಲಿಕ್
It is an immense honor and a profound privilege to extend my warmest welcome to His Holiness the 14th Dalai Lama at Libing Helipad, Gangtok.
The presence of His Holiness brings a radiant light of wisdom, compassion, and peace to our land, enriching our hearts and minds with His… pic.twitter.com/zNGN0bekDN
— Prem Singh Tamang (Golay) (@PSTamangGolay) December 11, 2023
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Yasin Malik ವಿಚಾರಣೆಗೆ ತಿಹಾರ್ ಜೈಲಿನಲ್ಲೇ ಕೋರ್ಟ್ ರೂಂ: ಸುಪ್ರೀಂ
Train ಜನಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ
Himachal Pradesh;ನಷ್ಟದಲ್ಲಿರುವ ಹೊಟೇಲ್ ಮುಚ್ಚಲು ಹೈಕೋರ್ಟ್ ಆದೇಶ
Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್ ಘೋಷಣೆ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.