ದಲೈ ಲಾಮಾ ಮತ್ತು ದಾಡಿ ಪ್ರೇಮ!
Team Udayavani, Aug 15, 2017, 6:20 AM IST
ಮುಂಬಯಿ: ಟಿಬೆಟಿಯನ್ ಧರ್ಮಗುರು ದಲೈ ಲಾಮಾ ಸದಾ ಹಸನ್ಮುಖೀ. ತಮ್ಮನ್ನು ಭೇಟಿಯಾಗಲು ಬಂದವರನ್ನು ಪ್ರೀತಿಯಿಂದ ಆಲಿಂಗಿಸಿಕೊಂಡು ಮಾತನಾಡಿಸುವ ಅವರ ಗುಣ ಜಗತ್ಪ್ರಸಿದ್ಧ. ಆದರೆ ದಲೈ ಲಾಮಾರ ಇನ್ನೊಂದು ಗುಣದ ಪರಿಚಯ ಜಗತ್ತಿಗೆ ಅಷ್ಟಾಗಿ ಇಲ್ಲ. ಅವರಿಗೆ ದಾಡಿ ಕಂಡರೆ ವಿಪರೀತ ಪ್ರೀತಿ! ಗಡ್ಡ ಬಿಟ್ಟವರು ಯಾರೇ ಇರಲಿ, ಅವರು ಚಿಕ್ಕ ಮಕ್ಕಳಂತೆ ನಗುತ್ತಾ ದಾಡಿ ಎಳೆದೇ ಬಿಡುತ್ತಾರೆ.
ಮುಂಬಯಿಯಲ್ಲಿ ರವಿವಾರ ನಡೆದ ಶಾಂತಿ ಮತ್ತು ಸಾಮರಸ್ಯ ಸಮಾವೇಶದಲ್ಲೂ ದಲೈ ಲಾಮಾರ ದಾಡಿ ಪ್ರೇಮ ಮತ್ತೂಮ್ಮೆ ಜಾಹೀರಾಯಿತು. ತಮ್ಮ ಪಕ್ಕ ಕುಳಿತ ಯೋಗಗುರು ಬಾಬಾ ರಾಮ್ದೇವ್ ಅವರ ದಾಡಿ ಜಗ್ಗಿದ್ದಾರೆ ಈ ಬೌದ್ಧ ಗುರು. ರಾಮ್ದೇವ್ ಅವರಿಗೆ ದಲೈ ಲಾಮಾ ಹೀಗೆ ಮಾಡಿದ್ದು ಈ ಮೊದಲೇನೂ ಅಲ್ಲವಾದ್ದರಿಂದ, ಅವರೂ ಈ ಪ್ರೀತಿಯನ್ನು ಮತ್ತೂಮ್ಮೆ ಖುಷಿಯಿಂದಲೇ ಸ್ವೀಕರಿಸಿದ್ದಾರೆ.
ಅಷ್ಟೇ ಅಲ್ಲ,ಸ್ವಲ್ಪ ಹೊತ್ತು ಬಿಟ್ಟು ಬಾಬಾ ರಾಮ್ದೇವ್ ಅವರು ದಲೈ ಲಾಮಾ ಅವರ ಮಡಿಲಲ್ಲಿ ಮಗುವಿನಂತೆ ತಲೆ ಆನಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ದಲೈ ಲಾಮಾ ರಾಮ್ದೇವ್ ಅವರಿಗೆ ಕಚಗುಳಿ ಇಟ್ಟು ನಗಿಸಿದ್ದಾರೆ. ಇವರಿಬ್ಬರ ಇಂಥ ಆತ್ಮೀಯ ಕ್ಷಣಗಳನ್ನು ನೋಡಿದ ಪ್ರೇಕ್ಷಕರು ನಗೆಗಡಲಲ್ಲಿ ತೇಲಾಡಿದ್ದಾರೆ!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.