ಮಹಿಳೆಯರ ಕುರಿತ ಹೇಳಿಕೆ: ದಲಾಯಿ ಲಾಮಾ ವಿಷಾದ, ಕ್ಷಮೆ ಯಾಚನೆ
Team Udayavani, Jul 2, 2019, 7:53 PM IST
ಧರ್ಮಶಾಲಾ : ಬಿಬಿಸಿ ಸಂದರ್ಶನದಲ್ಲಿ ಮಹಿಳೆಯರ ಕುರಿತಾಗಿ ತಾನು ನೀಡಿದ್ದ ಹೇಳಿಕೆಗೆ ಬೌದ್ಧ ಧರ್ಮ ಗುರು ದಲಾಯಿ ಲಾಮಾ ವಿಷಾದ ವ್ಯಕ್ತಪಡಿಸಿದ್ದಾರೆ.
‘ನಿಮ್ಮ ಮುಂದಿನ ಅವತಾರವು ಮಹಿಳೆಯ ರೂಪದಲ್ಲಿ ಇದ್ದೀತೇ’ ಎಂಬ ಪ್ರಶ್ನೆಗೆ ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತ ದಲಾಯಿ ಲಾಮಾ ಅವರು ‘ಆಕೆ ನೋಡಲು ಸುಂದರಿಯಾಗಿರಬೇಕು’ ಎಂದು ಹಾಸ್ಯಭರಿತವಾಗಿ ಹೇಳಿದ್ದರು.
“ದಲಾಯಿ ಲಾಮಾ ಅವರು ಆ ರೀತಿ ಹೇಳಿರುವಲ್ಲಿ ಯಾವುದೇ ದುರಭಿಪ್ರಾಯ ಇದ್ದಿರಲಿಲ್ಲ; ಹಾಸ್ಯ ಭರಿತವಾಗಿ ಅವರು ಆ ಹೇಳಿಕೆ ನೀಡಿದ್ದರು. ಆದರೂ ಆ ಹೇಳಿಕೆ ಜನರ ಮನೋಭಾವನೆಯನ್ನು ನೋಯಿಸಿರುವುದಕ್ಕೆ ದಲಾಯಿ ಲಾಮಾ ವಿಷಾದ ವ್ಯಕ್ತಪಡಿಸಿ ಕ್ಷಮೆಯಾಚಿಸಿದ್ದಾರೆ’ ಎಂದು ದಲಾಯಿ ಲಾಮಾ ಅವರ ಇಲ್ಲಿನ ಕಾರ್ಯಾಲಯ ಹೊರಡಿಸಿರುವ ಹೇಳಿಕೆಯಲ್ಲಿ ತಿಳಿಸಿದೆ.
ಐರೋಪ್ಯ ದೇಶಗಳಲ್ಲಿ ಹೆಚ್ಚುತ್ತಿರುವ ಅಕ್ರಮ ವಲಸಿಗರ ಸಮಸ್ಯೆಯ ಬಗ್ಗೆ ದಲಾಯಿ ಲಾಮಾ ನೀಡಿದ್ದ ಹೇಳಿಕೆಯನ್ನು ತಪ್ಪಾಗಿ ತಿಳಿಯಲಾಗಿದೆಎಂದು ಕಾರ್ಯಾಲಯ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hydarabad: ಪುಷ್ಪ-2 ಚಿತ್ರದ ಪ್ರದರ್ಶನ ವೇಳೆ ಗಾಯಗೊಂಡಿದ್ದ ಬಾಲಕನ ಸ್ಥಿತಿ ಗಂಭೀರ
ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್
Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ
Mumbai: ಗೇಟ್ವೇ ಆಫ್ ಇಂಡಿಯಾ ಬಳಿ ಮುಳುಗಿದ 67 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು
Umar Khalid: ದೆಹಲಿ ಗಲಭೆ ಪ್ರಕರಣದ ಆರೋಪಿ ಉಮರ್ ಖಾಲಿದ್ಗೆ 7 ದಿನಗಳ ಮಧ್ಯಂತರ ಜಾಮೀನು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.