ಮುಸ್ಲಿಂ ಮಹಿಳೆಯರು ಐಬ್ರೊ,ಹೇರ್‌ಕಟ್ ಮಾಡಿಸ್ಬಾರ್ದು!;ಫತ್ವಾ
Team Udayavani, Oct 8, 2017, 1:52 PM IST
ಲಕ್ನೋ : ‘ಮುಸ್ಲಿಂ ಮಹಿಳೆಯರು ತಲೆಗೂದಲು ಕತ್ತರಿಸಿಕೊಳ್ಳಬಾರು, ಹುಬ್ಬುಗಳನ್ನು ಶೇಪ್ ಮಾಡಿಕೊಳ್ಳಬಾರದು’ ಎಂದು ಉತ್ತರಪ್ರದೇಶದ ದಿಯೋಬಂದ್‌ನ ಇಸ್ಲಾಂ ಉನ್ನತ ಶಿಕ್ಷಣ ಸಂಸ್ಥೆ ದಾರುಲ್ ಉಲೆಮಾ ಶನಿವಾರ ಫತ್ವಾ ಹೊರಡಿಸಿದೆ.
ಸಹರಣ್‌ಪುರದ ಮುಸ್ಲಿಂ ವ್ಯಕ್ತಿಯೊಬ್ಬ ‘ನನ್ನ ಪತ್ನಿ ಹುಬ್ಬು ಸರಿ ಮಾಡಿಕೊಳ್ಳುವುದು, ತಲೆ ಕೂದಲನ್ನು ಕತ್ತರಿಸಿಕೊಳ್ಳಬಹುದೇ? ಈ ಬಗ್ಗೆ ಇಸ್ಲಾಂ ಕಾನೂನು ಏನು ಹೇಳುತ್ತದೆ’ ಎಂದು ದಾರುಲ್ ಇಫ್ತಾ ವನ್ನು ಪ್ರಶ್ನಿಸಿದ್ದ.
ಪ್ರಶ್ನೆಗೆ ಉತ್ತರವಾಗಿ ದಾರುಲ್ ಇಫ್ತಾ ‘ಮಹಿಳೆಯರು ತಲೆಕೂದಲು ಕತ್ತರಿಸಿಕೊಳ್ಳುವುದು ಮತ್ತು ಹುಬ್ಬುಗಳನ್ನು ಆಕಾರ ಮಾಡಿಕೊಳ್ಳುವುದು ಇಸ್ಲಾಂ ವಿರೋಧಿ. ಹಾಗೆ ಮಾಡಿಕೊಂಡರೆ ಮುಸ್ಲಿಂ ಕಾನೂನನ್ನು ಉಲ್ಲಂಘನೆ ಮಾಡಿದಂತೆ.ಮುಸ್ಲಿಂ ಮಹಿಳೆಯರು ಬ್ಯೂಟಿ ಪಾರ್ಲರ್‌ಗಳಿಂದ ದೂರ ಉಳಿಯಬೇಕು. ಮೇಕಪ್ ಮಾಡಿಕೊಂಡು ಇತರ ಪುರುಷರನ್ನು ಆಕರ್ಷಿಸುವುದಕ್ಕೆ ಅವಕಾಶ ನೀಡಬಾರದು’ ಎಂದು ಅಭಿಪ್ರಾಯ ವ್ಯಕ್ತಪಡಿಸಿ ಫತ್ವಾ ಹೊರಡಿಸಿದೆ.
ಫತ್ವಾ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು,’ವಿಶ್ವವೇ ಬದಲಾಗುತ್ತಿದ್ದು, ಸೌದಿ ಅರೇಬಿಯಾ ದಲ್ಲೂ ಮಹಿಳೆಯರಿಗೆ ಡ್ರೈವಿಂಗ್‌ಗೆ ಅವಕಾಶ ನೀಡಲಾಗಿದೆ. ಈ ವೇಳೆಯಲ್ಲಿ ಫತ್ವಾ ಹೊರಡಿಸಿರುವುದು ಮುಸ್ಲಿಂ ಮತಪಂಡಿತರು ಮತ್ತು ಮೌಲ್ವಿಗಳಿಗೆ ಅವಮಾನ ಮಾಡಿದಂತಿದೆ’ ಎಂದು ತ್ರಿವಳಿ ತಲಾಕ್ ಸಂತ್ರಸ್ಥೆ ಸೋಫಿಯಾ ಅಹಮದ್ ಕಿಡಿಕಾರಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi pollution:ಪ್ರಾಣಿಗಳಲ್ಲಿ ಹೆಚ್ಚಿದ ಶ್ವಾಸ ಸಂಬಂಧಿ ಕಾಯಿಲೆ
BJP; ಅಭಿವೃದ್ಧಿ, ಉತ್ತಮ ಆಡಳಿತ ಗೆದ್ದೇ ಗೆಲ್ಲುತ್ತದೆ: ಜಯಕ್ಕೆ ಪ್ರಧಾನಿ ಬಣ್ಣನೆ
Adani; 2,200 ಕೋಟಿ ರೂ. ಲಂಚ: ಅಮೆರಿಕ ಸಮನ್ಸ್
Tour: ಮೂರು ದೇಶ ಪ್ರವಾಸ: ಪ್ರಧಾನಿ ಮೋದಿ 31 ದ್ವಿಪಕ್ಷೀಯ ಸಭೆಗಳು!
Assembly bypolls; 14 ರಾಜ್ಯಗಳ 48 ಸ್ಥಾನಗಳ ಗೆಲುವಿನ ವಿವರ ಇಲ್ಲಿದೆ: ಎನ್ಡಿಎ ಮೇಲುಗೈ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.