ಡಾಟಾ ಸಂರಕ್ಷಣೆ ಜೀವನ ಹಕ್ಕಿನ ಒಂದು ಭಾಗ: ಕೇಂದ್ರ
Team Udayavani, Jul 22, 2017, 7:55 AM IST
ಹೊಸದಿಲ್ಲಿ: ದೇಶದ ಜನರ ವೈಯಕ್ತಿಕ ವಿವರಗಳನ್ನು ಒಳಗೊಂಡ “ದತ್ತಾಂಶ’ಗಳು ಅವರ ಜೀವನದ ಹಕ್ಕಿನ ಒಂದು ಭಾಗವಾಗಿದ್ದು, ಇವುಗಳ ರಕ್ಷಣೆಗೆ ಅಗತ್ಯ ಕಾನೂನು ರೂಪಿಸುತ್ತೇವೆ ಎಂದು ಕೇಂದ್ರ ಸರಕಾರ ಸುಪ್ರೀಂಕೋರ್ಟ್‌ಗೆ ಹೇಳಿದೆ.
ವಾಟ್ಸ್‌ಆéಪ್‌ನ ಖಾಸಗಿ ನೀತಿ ಕುರಿತಂತೆ ವಿಚಾರಣೆ ನಡೆಸುತ್ತಿರುವ ನ್ಯಾ| ದೀಪಕ್ ಮಿಶ್ರಾ ನೇತೃತ್ವದ 5 ಜಡ್ಜ್ಗಳ ಸಂವಿಧಾನ ಪೀಠಕ್ಕೆ ಸರಕಾರ ಡಾಟಾ ಸಂರಕ್ಷಣೆಯ ಬಗ್ಗೆ ಹೇಳಿದೆ. ಮೂಲಭೂತ ಹಕ್ಕಿನಲ್ಲೇ ಮಾಹಿತಿ ಸಂರಕ್ಷಣೆಯೂ ಸೇರಿಕೊಂಡಿದೆ. ಇದಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳಲು ಸೂಕ್ತ ನಿಯಮಾವಳಿ ರೂಪಿಸುತ್ತೇವೆ ಎಂದು ಅರಿಕೆ ಮಾಡಿಕೊಂಡಿದೆ.
ಸೇವೆ ನೀಡುವಾಗ ಬಳಕೆದಾರರ ಮೇಲೆ ನಿಯಮ ಹೇರಕೂಡದು ಎಂದು ಸರಕಾರ ಹೇಳಿತು. ಇದಕ್ಕೆ ಪ್ರತಿಯಾಗಿ ನ್ಯಾ. ಮಿಶ್ರಾ ಅವರು, ಖಾಸಗಿ ವಿಚಾರ ಬೇರೆ, ಇದೇ ಬೇರೆ. ಆದರೆ ನನ್ನ ಮುಂದೆ ಆಯ್ಕೆಗಳಿವೆ, ನಿಮ್ಮಲ್ಲಿ ಸೌಲಭ್ಯವಿದೆ. ನೀವು ಸೌಲಭ್ಯ ನೀಡುವಾಗ ಯಾವುದೇ ಷರತ್ತು ಹಾಕಬಾರದಲ್ಲವೇ ಎಂದು ವಾಟ್ಸ್‌ಆ್ಯಪ್ ಪರ ವಕೀಲರನ್ನು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ವಕೀಲ ಸಿಬಲ್, ಕಕ್ಷಿದಾರ ಸಂಸ್ಥೆ ಮಾಹಿತಿ ಪಡೆದರೂ ಅದನ್ನು ಬೇರೆಯವರೊಂದಿಗೆ ಹಂಚಿಕೊಳ್ಳುತ್ತಿಲ್ಲ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mudhol: ಭೀಕರ ಅಪಘಾತ… ಕಾರು ಚಾಲಕ ಸ್ಥಳದಲ್ಲೇ ಮೃತ್ಯು
Bantwal: ಕಾಂಟ್ರಾಕ್ಟ್ ಕ್ಯಾರೇಜ್ ಬಸ್ ಪ್ರಯಾಣ ದರ ಏರಿಕೆ
Special Train ಮಕರ ಸಂಕ್ರಾಂತಿ: ಇಂದು ಬೆಂಗಳೂರಿನಿಂದ ಕರಾವಳಿಗೆ ವಿಶೇಷ ರೈಲು
Daily Horoscope: ಅನಿರೀಕ್ಷಿತ ಧನಾಗಮ, ಅವಿವಾಹಿತರಿಗೆ ಯೋಗ್ಯ ಸಂಗಾತಿ ಲಭ್ಯ
ಕಾಂಗ್ರೆಸ್ಗೆ ಬಿಸಿ ಊಟ: ಪರಂಗೆ ಹೈ ಬುಲಾವ್?ವಿವಾದ ಬೆನ್ನಲ್ಲೇ ದಿಲ್ಲಿಗೆ ಕರೆದ ಹೈಕಮಾಂಡ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.