26/11ರ ಮುಂಬಯಿ ದಾಳಿ ಸೂತ್ರಧಾರ ಡೇವಿಡ್ ಹೆಡ್ಲಿ ಸಾವು ?
Team Udayavani, Jul 24, 2018, 12:01 PM IST
ಹೊಸದಿಲ್ಲಿ : ದೃಢಪಡದ ವರದಿಗಳ ಪ್ರಕಾರ ಅಮೆರಿಕದ ಜೈಲಿನಲ್ಲಿ ಸಹ ಕೈದಿಗಳ ಮಾರಣಾಂತಿಕ ಹಲ್ಲೆಗೆ ಗುರಿಯಾಗಿದ್ದ 26/11ರ ಮುಂಬಯಿ ದಾಳಿಯ ಮಾಸ್ಟರ್ ಮೈಂಡ್ ಡೇವಿಡ್ ಕೋಲ್ಮನ್ ಹೆಡ್ಲಿ ಮೃತಪಟ್ಟಿದ್ದಾನೆ ಎಂದು ಹೇಳಲಾಗಿದೆ. ಆದರೆ ಅಧಿಕಾರಿಗಳು ಹೆಡ್ಲಿ ಸಾವಿನ ಬಗ್ಗೆ ತಮಗೇನೂ ಮಾಹಿತಿ ಇಲ್ಲ ಎಂದು ಹೇಳಿದ್ದಾರೆ.
ಜೈಲಿನಲ್ಲಿ ಮಾರಣಾಂತಿಕ ಹಲ್ಲೆಗೆ ಗುರಿಯಾದ ಬಳಿಕ ಜು.9ರಂದು ಹೆಡ್ಲಿ ಮೃತಪಟ್ಟನೆಂಬ ಮಾಹಿತಿಯನ್ನು ಉಲ್ಲೇಖೀಸಿ ವರದಿಗಳು ತಿಳಿಸಿವೆ.
ಡೇವಿಡ್ ಹೆಡ್ಲಿ ಮೇಲೆ ಕಳೆದ ಮೇ 19ರಂದು ಜೈಲಿನ ಸಹ ಕೈದಿಗಳು ಹಲ್ಲೆ ನಡೆಸಿದ್ದರು. ಈ ಸಹ ಕೈದಿಗಳು ಪೊಲೀಸರ ಮೇಲೆ ನಡೆಸಿದ್ದ ದಾಳಿಗೆ ಸಂಬಂಧಪಟ್ಟು 10 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದರು.
ಮಾಹಿತಿಗಳ ಪ್ರಕಾರ ಮಾರಣಾಂತಿಕ ಹಲ್ಲೆಗೆ ಗುರಿಯಾಗಿದ್ದ ಹೆಡ್ಲಿಯನ್ನು ವಿಮಾನದ ಮೂಲಕ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ದಾಖಲಾದ ಒಡನೆಯೇ ಆತನನ್ನು ಐಸಿಯು ಗೆ ಸೇರಿಸಲಾಗಿತ್ತು. ಆತನ ಸ್ಥಿತಿ ಗಂಭೀರವಾಗಿತ್ತು.
ಜುಲೈ 8ರಂದು ಹೆಡ್ಲಿ ಮೃತಪಟ್ಟನೆಂದು ವೈದ್ಯರು ಘೋಷಿಸಿದ್ದರು. ಅದೇ ವೇಳೆ ಆತನ ಸಾವಿನ ಕುರಿತ ತನಿಖೆ ಕೈಗೊಳ್ಳುವಂತೆ ಎಫ್ ಬಿ ಐಗೆ ಆದೇಶಿಸಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್
MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ
By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ
Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ
Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.