ಸೆನ್ಸೆಕ್ಸ್ ಜಿಗಿತಕ್ಕೆ ದಾವೋಸ್ ಪುಷ್ಟಿ
Team Udayavani, Jan 24, 2018, 6:35 AM IST
ಮುಂಬೈ: ಬಾಂಬೆ ಷೇರು ಪೇಟೆ ಸೂಚ್ಯಂಕ 36 ಸಾವಿರ ಮತ್ತು ನಿಫ್ಟಿ ಇದೇ ಮೊದಲ ಬಾರಿಗೆ 11 ಸಾವಿರದ ಗಡಿ ದಾಟಿ ಇತಿಹಾಸ ಬರೆದಿದೆ.
ದಾವೋಸ್‌ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ಶೃಂಗ (ಡಬ್ಲೂéಇಎಫ್)ದಲ್ಲಿ ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಭಾರತದ ಒಟ್ಟು ತಲಾ ಆದಾಯ (ಜಿಡಿಪಿ) ಶೇ.7.9ರ ದರದಲ್ಲಿ ಅಭಿವೃದ್ಧಿಯಾಗಲಿದೆ ಎಂದು ಮುನ್ಸೂಚನೆ ನೀಡಿರುವುದು ಈ ಬೆಳವಣಿಗೆಗೆ ಕಾರಣವಾಗಿದೆ. ಇದರ ಜತೆಗೆ ವಿಶ್ವದ ಇತರ ಷೇರು ಮಾರುಕಟ್ಟೆಗಳಲ್ಲಿನ ವಹಿವಾಟುಗಳೂ ಪೂರಕವಾಗಿರುವುದು ಕೂಡ ಸೆನ್ಸೆಕ್ಸ್ ಏರಿಕೆಗೆ ಒತ್ತು ನೀಡಿದವು. ಮಾಹಿತಿ ತಂತ್ರಜ್ಞಾನ ಮತ್ತು ಬ್ಯಾಂಕಿಂಗ್ ಕ್ಷೇತ್ರದ ಷೇರುಗಳು ಹೆಚ್ಚು ಬಿಕರಿಯಾಗಿವೆ.
ಸತತ ಐದನೇ ಬಾರಿಗೆ ಬಾಂಬೆ ಸ್ಟಾಕ್ ಎಕ್ಸ್ ಚೇಂಜ್‌ನಲ್ಲಿ ಮಂಗಳವಾರ ವಹಿವಾಟು ಮಧ್ಯಂತರದಲ್ಲಿ 36,170.83 ಕ್ಕೆ ತಲುಪಿತು. ದಿನದ ಅಂತ್ಯಕ್ಕೆ 36,139.98ರಲ್ಲಿ ಮುಕ್ತಾಯವಾಯಿತು. ಅಂದರೆ 341.97 ಅಂಕಗಳಷ್ಟು ಜಿಗಿತ ಕಂಡಿತು. ಸೋಮವಾರ ವಹಿವಾಟು 35,798.01ರಲ್ಲಿ ಮುಕ್ತಾಯ ವಾಗಿತ್ತು. ಅಂದರೆ 4 ಹಂತಗಳಲ್ಲಿ 1,026.96 ಅಂಕಗಳಷ್ಟು ಏರಿಕೆಯಾದಂತಾಗಿದೆ. ಜ.17ರಿಂದ 23ರ ಅವಧಿಯಲ್ಲಿ 35 ಸಾವಿರದಿಂದ 36 ಸಾವಿರಕ್ಕೆ ಸೂಚ್ಯಂಕ ಏರಿಕೆ ಕಂಡಿದೆ.
ಇದೇ ವೇಳೆ ನಿಫ್ಟಿ ಸೂಚ್ಯಂಕ ಕೂಡ ಮಧ್ಯಂತರ ವಹಿವಾಟಿನಲ್ಲಿ 11,092.90ಕ್ಕೆ ತಲುಪಿದ್ದು, ದಿನಾಂತ್ಯಕ್ಕೆ 117.50 ಅಂಕ ಏರಿಕೆ ದಾಖಲಿಸಿ, 11,083.70ರಲ್ಲಿ ಮುಕ್ತಾಯ ವಾಯಿತು. ಸೋಮವಾರ ಅದು 10,966. 20ರಲ್ಲಿ ಮುಕ್ತಾಯವಾಗಿತ್ತು. ಜ.17ರಿಂದ 23ರ ಅವಧಿಯಲ್ಲಿ ಸೂಚ್ಯಂಕ 35 ಸಾವಿರದಿಂದ 36 ಸಾವಿರಕ್ಕೆ ಏರಿಕೆಯಾಗಿದೆ. 2017 ಜು.26ರಿಂದ ಜ.23ರ ವರೆಗೆ ನಿಫ್ಟಿ ಸೂಚ್ಯಂಕ 10 ಸಾವಿರದಿಂದ 11 ಸಾವಿರಕ್ಕೆ ಜಿಗಿದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Ranaji Trophy: ಉತ್ತರ ಪ್ರದೇಶ ವಿರುದ್ಧ ಕರ್ನಾಟಕಕ್ಕೆ ಮುನ್ನಡೆ
Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್ ತೆರೆದೀರಿ ಜೋಕೆ!
Vitla:ಮಾಣಿ -ಮೈಸೂರು ರಾಜ್ಯ ಹೆದ್ದಾರಿಯಲ್ಲಿ ಲಾರಿ ಮೇಲೆ ಮರ ಬಿದ್ದು ರಸ್ತೆ ಸಂಪೂರ್ಣ ಬ್ಲಾಕ್
Self Treatment!: ಸ್ವಯಂ ಚಿಕಿತ್ಸೆಯ ಮೂಲಕ ಸ್ತನ ಕ್ಯಾನ್ಸರ್ ಗೆದ್ದ ವಿಜ್ಞಾನಿ!
Vivek Ramaswamy: ವಿವೇಕ್‌ಗೆ ಟ್ರಂಪ್ ಸರಕಾರದ ಕಾರ್ಯಕ್ಷಮತೆ ಇಲಾಖೆ ಹೊಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.