ಇಸ್ರೇಲ್ ಪ್ರಧಾನಿಗೆ ರಾಷ್ಟ್ರಪತಿ ಭವನದಲ್ಲಿ ಭವ್ಯ ಸ್ವಾಗತ
Team Udayavani, Jan 15, 2018, 11:22 AM IST
ಹೊಸದಿಲ್ಲಿ : ”ಭಾರತ-ಇಸ್ರೇಲ್ ನಡುವಿನ ಸ್ನೇಹ ಮತ್ತು ಬಾಂಧವ್ಯದ ಹೊಸ ಯುಗಾರಂಭಕ್ಕೆ ಈ ಮಹೋನ್ನತ ಕ್ಷಣಗಳು ಸಾಕ್ಷಿಯಾಗಿವೆ” ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಇಂದು ಸೋಮವಾರ ರಾಷ್ಟ್ರಪತಿ ಭವನದಲ್ಲಿ ರತ್ನಗಂಬಳಿಯ ಅದ್ದೂರಿ ಸ್ವಾಗತವನ್ನು ಪಡೆದ ಬಳಿಕ ಸಭಿಕರನ್ನು ಉದ್ದೇಶಿಸಿ ಹೇಳಿದರು.
“ಇದು ಆರಂಭವಾದದ್ದು ಪ್ರಧಾನಿ ನರೇಂದ್ರ ಮೋದಿ ಅವರ ಐತಿಹಾಸಿಕ ಇಸ್ರೇಲ್ ಭೇಟಿಯೊಂದಿಗೆ. ಆ ಭೇಟಿ ಅದ್ಭುತವಾದ ಹುಮ್ಮಸ್ಸು, ಹುರುಪನ್ನು ಉಭಯ ದೇಶಗಳ ಸ್ನೇಹ ಸಂಬಂಧದಲ್ಲಿ ತುಂಬಿದವು; ಈ ಕ್ಷಣಗಳು ನನಗೆ, ನನ್ನ ಪತ್ನಿಗೆ ಮತ್ತು ಇಸ್ರೇಲ್ ನ ಸಮಗ್ರ ಜನತೆಗೆ ಅತ್ಯಂತ ಸಂತಸದಾಯಕವಾಗಿವೆ’ ಎಂದು ನೆತನ್ಯಾಹು ಹೇಳಿದರು.
ನಿನ್ನೆ ಭಾನುವಾರ ಪ್ರಧಾನಿ ಮೋದಿ ಅವರು ಶಿಷ್ಟಾಚಾರಗಳನ್ನೆಲ್ಲ ಬದಿಗೊತ್ತಿ ಇಸ್ರೇಲ್ ಪ್ರಧಾನಿಯನ್ನು ದಿಲ್ಲಿ ವಿಮಾನ ನಿಲ್ದಾಣದಲ್ಲಿ ವೈಯಕ್ತಿಕವಾಗಿ ಆತ್ಮೀಯ ಅಪ್ಪುಗೆಯೊಂದಿಗೆ ಸ್ವಾಗತಿಸಿದ್ದರು.
ಈ ಆತ್ಮೀಯ ಅಪ್ಪುಗೆಯ ಸ್ವಾಗತಕ್ಕೆ ಅಚ್ಚರಿ ವ್ಯಕ್ತಪಡಿಸುತ್ತಾ ನೆತನ್ಯಾಹು ಅವರು ತಮ್ಮ ಟ್ವೀಟ್ ನಲ್ಲಿ “ವಿಮಾನ ನಿಲ್ದಾಣಕ್ಕೆ ಖುದ್ದು ಆಗಮಿಸಿದ ಅಪ್ಪುಗೆಯ ಸ್ವಾಗಡ ನೀಡಿದ ನನ್ನ ಉತ್ತಮ ಸ್ನೇಹಿತ, ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ; ನಾವಿಬ್ಬರೂ ಜತೆಗೂಡಿ ಉಭಯ ದೇಶಗಳ ನಡುವಿನ ಸ್ನೇಹ ಸಂಬಂಧವನ್ನು ಹೊಸ ಎತ್ತರಕ್ಕೆ ಒಯ್ಯೋಣ’ ಎಂದು ಹೇಳಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Video: ಮದುವೆ ಸಂಭ್ರಮದಲ್ಲಿದ್ದ ವರನಿಗೆ ಹೃದಯಾಘಾತ… ಆಸ್ಪತ್ರೆ ದಾರಿ ಮಧ್ಯೆ ಮೃತ್ಯು
Maharastra: ಕಾರಿನ ಮೇಲೆ ಕಲ್ಲು ತೂರಾಟ… ಮಾಜಿ ಸಚಿವ ಅನಿಲ್ ದೇಶಮುಖ್ ಹಣೆಗೆ ಗಾಯ
Assembly Election: ಮಹಾರಾಷ್ಟ್ರ ಕದನದಲ್ಲಿ ಘಟಾನುಘಟಿಗಳ ಭವಿಷ್ಯ ಪಣಕ್ಕೆ
Delhi Pollution: ಅಸ್ತಮಾ, ಶ್ವಾಸಕೋಶ ಕ್ಯಾನ್ಸರ್ ಭೀತಿ!
Election: ಮಹಾರಾಷ್ಟ್ರ, ಜಾರ್ಖಂಡ್ ಚುನಾವಣೆ ಪ್ರಚಾರಕ್ಕೆ ತೆರೆ: ನಾಳೆ ಮತದಾನ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.