![mohan bhagwat](https://www.udayavani.com/wp-content/uploads/2025/02/mohan-bhagwat-415x249.jpg)
![mohan bhagwat](https://www.udayavani.com/wp-content/uploads/2025/02/mohan-bhagwat-415x249.jpg)
Team Udayavani, Jan 2, 2024, 12:42 PM IST
ಮಹಾರಾಷ್ಟ್ರ: ಭಯೋತ್ಪಾದಕ ದಾವೂದ್ ಇಬ್ರಾಹಿಂನ ಬಾಲ್ಯದ ಮನೆ ಮತ್ತು ಆತನ ಕುಟುಂಬದ ಒಡೆತನಕ್ಕೆ ಸೇರಿದ ಇತರ ಮೂರು ಆಸ್ತಿಗಳನ್ನು ಹರಾಜು ಮಾಡಲಾಗುತ್ತದೆ ಎಂದು ಉನ್ನತ ಮೂಲಗಳು ಮಾಹಿತಿ ನೀಡಿವೆ.
ಸ್ಮಗ್ಲರ್ಸ್ ಮತ್ತು ಫಾರಿನ್ ಎಕ್ಸ್ಚೇಂಜ್ ಮ್ಯಾನಿಪ್ಯುಲೇಟರ್ಸ್ (ಆಸ್ತಿ ಮುಟ್ಟುಗೋಲು) ಕಾಯಿದೆ (SAFEMA) ಅಡಿಯಲ್ಲಿ ಅಧಿಕಾರಿಗಳು ಆಸ್ತಿಗಳನ್ನು ವಶಪಡಿಸಿಕೊಂಡಿದ್ದು ಇದೀಗ ಹರಾಜಿಗೆ ತಯಾರಿ ನಡೆಸುತ್ತಿದ್ದಾರೆ ಎನ್ನಲಾಗಿದೆ.
ಕಳೆದ ಒಂಬತ್ತು ವರ್ಷಗಳಲ್ಲಿ ದಾವೂದ್ ಹಾಗೂ ಆತನ ಕುಟುಂಬಕ್ಕೆ ಸೇರಿದ 11 ಆಸ್ತಿಗಳನ್ನು ಈಗಾಗಲೇ ಹರಾಜು ಮಾಡಲಾಗಿದ್ದು ಅದರಲ್ಲಿ ರೆಸ್ಟೋರೆಂಟ್ 4.53 ಕೋಟಿಗೆ ಹರಾಜಾಗಿದ್ದು, ಆರು ಫ್ಲಾಟ್‌ಗಳು 3.53 ಕೋಟಿಗೆ ಹಾಗೂ ಅತಿಥಿ ಗೃಹ 3.52 ಕೋಟಿಗೆ ಹರಾಜಾಗಿತ್ತು.
ಎಲ್ಲಿದೆ ಆಸ್ತಿ :
ದಾವೂದ್ ತಾಯಿ ಅಮಿನಾ ಬಿ ಹೆಸರಿನಲ್ಲಿ ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಖೇಡ್ ತಾಲೂಕಿನಲ್ಲಿರುವ ನಾಲ್ಕು ಆಸ್ತಿಗಳಿದ್ದು ಇದರಲ್ಲಿ ದಾವೂದ್ ಅವರ ಬಾಲ್ಯದ ಮನೆ ಜೊತೆಗೆ ಕೃಷಿ ಭೂಮಿ ಕೂಡ ಇದೆಯಂತೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಯಾವಾಗ ನಡೆಯಲಿದೆ:
ಜನವರಿ 5 ರಂದು ಮುಂಬೈನಲ್ಲಿ ಹರಾಜು ನಡೆಯಲಿದ್ದು ಹರಾಜಿನಲ್ಲಿ ಭಾಗವಹಿಸುವವರು ಬುಧವಾರದೊಳಗೆ ಅರ್ಜಿ ನಮೂನೆಯನ್ನು ಸಲ್ಲಿಸಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: GST: 806 ಕೋಟಿ ರೂಪಾಯಿ ಬಾಕಿ ಪಾವತಿಸಿ: ಮಹಾರಾಷ್ಟ್ರ ಎಲ್ ಐಸಿಗೆ ಜಿಎಸ್ ಟಿ ನೋಟಿಸ್
You seem to have an Ad Blocker on.
To continue reading, please turn it off or whitelist Udayavani.