46 ಲಕ್ಷ ರೂ. ಮೌಲ್ಯದ ಡ್ರಗ್ಸ್ ಜಪ್ತಿಮಾಡಿದ ದಯಾ ನಾಯಕ್ ತಂಡ
Team Udayavani, May 3, 2019, 10:55 AM IST
ಮುಂಬಯಿ: ಪೊಲೀಸ್ ಇನ್ಸ್‌ಪೆಕ್ಟರ್ ದಯಾ ನಾಯಕ್ ನೇತೃತ್ವದಲ್ಲಿ ಪೊಲೀಸರ ತಂಡವು ಬುಧವಾರ 46 ಲಕ್ಷ ರೂ. ಮೌಲ್ಯದ ನಿಷೇಧಿತ ಮಾದಕ ಪದಾರ್ಥ ಗಳೊಂದಿಗೆ ಅದಕ್ಕೆ ಸಂಬಂಧಿಸಿದ ಮೂವರನ್ನು ಬಂಧಿಸಿದ್ದಾರೆ.
ಖಾರ್ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ದಯಾ ನಾಯಕ್ ಅವರಿಗೆ ಬುಧವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಆರೇ ಕಾಲೊನಿಯಲ್ಲಿರುವ ತಾಬೇಲಾ ಗೋದಾಮು ಒಂದರಲ್ಲಿ ನಿಷೇಧಿತ ಕ್ಲೋರಲ್ ಹೈಡ್ರೇಟ್ ಡ್ರಗ್ಸ್ ಅನ್ನು ಸಂಗ್ರಹಿಸಿಟ್ಟಿರುವ ಬಗ್ಗೆ ಮಾಹಿತಿ ಸಿಕ್ಕಿತು. ತನದಂತರ ವಲಯ 9ರ ಡಿಸಿಪಿ ಪರಂಜೀತ್ ದಹಿಯಾ, ವಲಯ 12ರ ಡಿಸಿಪಿ ವಿನಯಕುಮಾರ್ ರಾಥೋಡ್ ಅವರ ಮಾರ್ಗದರ್ಶನ ಮತ್ತು ನಿರ್ದೇಶನದ ಮೇರೆಗೆ ಪೊಲೀಸ್ ಇನ್ಸ್‌ಪೆಕ್ಟರ್ ದಯಾ ನಾಯಕ್ ಮತ್ತು ಸಿಬಂದಿಗಳು ಆರೇ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್‌ಗಳಾದ ಹಿರೇಮs…, ಪಾಟೀಲ್, ಪಿಎಸ್‌ಐ ವಾಡೀಕರ್ ಮತ್ತಿತರ ಸಿಬಂದಿಗಳ ಜತೆಗೂಡಿ ತಾಬೇಲಾ ಗೋದಾಮಿನ ಮೇಲೆ ಜಂಟಿಯಾಗಿ ದಾಳಿ ನಡೆಸಿದರು. ದಾಳಿ ವೇಳೆ ಸ್ಥಳದಿಂದ 43,68,000 ರೂ. ಮೌಲ್ಯದ 2,184 ಕೆ.ಜಿ. ನಿಷೇಧಿತ ಕ್ಲೋರಲ್ ಹೈಡ್ರೇಟ್ ಡ್ರಗ್ ಅನ್ನು ವಶಪಡಿಸಿಕೊಳ್ಳಲಾಯಿತು.
ಜಪ್ತಿಗೆ ಸಂಬಂಧಿಸಿದಂತೆ ತಾಬೇಲಾ ಗೋದಾಮಿನ ಮಾಲಕ ಬುನಿಯಾದ್ ಅಹ್ಮದ್ ಅನ್ಸಾರಿಯ ವಿಚಾರಣೆ ನಡೆಸಿದಾಗ ಆತ ವೆಂಕಯ್ಯ ರಮಣಯ್ಯ ಕಬುìಜಾ ಎಂಬಾತ ತನ್ನ ಗೋದಾಮಿನಲ್ಲಿ ಈ ಡ್ರಗ್ಸ್‌ಗಳನ್ನು ಇಟ್ಟಿರುವ ಬಗ್ಗೆ ಮಾಹಿತಿಯನ್ನು ಬಹಿರಂಗಪಡಿಸಿದ. ತದನಂತರ, ಪೊಲೀಸರು ರಮಣಯ್ಯನ ನಿವಾಸಕ್ಕೆ ದಾಳಿ ನಡೆಸಿದಾಗ ಅಲ್ಲಿ ಮತ್ತೆ 1,12,000 ರೂ. ಮೌಲ್ಯದ 56 ಕೆ.ಜಿ. ಕ್ಲೋರಲ್ ಹೈಡ್ರೇಟ್ , 1,400 ರೂ. ಮೌಲ್ಯದ ಅಮೋನಿಯಂ ಸಲ್ಫೆàಟ್, 27,000 ರೂ. ಮೌಲ್ಯದ ಸೋಡಿಯಂ ಸಚ್ಚರಿನ್ ಮತ್ತು ಸಿಟ್ರಿಕ್ ಆ್ಯಸಿಡ್, 35 ಲೀಟರ್ ಶೇಂಧಿ ಮತ್ತಿತರ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.
ಸ್ಥಳದಿಂದ ರಮಣಯ್ಯನ ಜತೆಗೆ ಆತನ ಸಹಚರ ರಾಜೇಂದ್ರ ವೆಂಕಣ್ ಭುಸ್ರುಪು(28) ಎಂಬಾತನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಜಪ್ತಿಗೆ ಸಂಬಂಧಿಸಿದಂತೆ ಬಂಧಿತ ಮೂವರ ವಿರುದ್ಧ ಆರೇ ಕಾಲೋನಿ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸಿಕೊಂಡು ಹೆಚ್ಚುವರಿ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Supreme Court; CJI ಡಿ.ವೈ.ಚಂದ್ರಚೂಡ್ ಅವರಿಗೆ ಭಾವನಾತ್ಮಕ ವಿದಾಯ
NSE, BSE; ಷೇರು ಮಾರುಕಟ್ಟೆಗೆ ನವೆಂಬರ್ 20 ರಂದು ರಜೆ ಘೋಷಣೆ
Proposes: ಪುರುಷ ಟೈಲರ್ ಮಹಿಳೆಯರ ಬಟ್ಟೆ ಅಳತೆ ತೆಗೆದುಕೊಳ್ಳುವಂತಿಲ್ಲ: ಮಹಿಳಾ ಆಯೋಗ
Supreme Court; ಆದಾಯ ಮೀರಿದ ಆಸ್ತಿ ಪ್ರಕರಣ: ರಾಜ್ಯ ಸರಕಾರ, ಡಿ.ಕೆ.ಶಿವಕುಮಾರ್ ಗೆ ನೋಟಿಸ್
Hotel Room: ಹೋಟೆಲ್ ಕೊಠಡಿಯಲ್ಲೇ ವೈದ್ಯನ ನಿಗೂಢ ಸಾ*ವು… ಸ್ಥಳದಲ್ಲಿ ಡೆತ್ ನೋಟ್ ಪತ್ತೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.