ಡೋಕ್‌ಲಾಂ ಬಿಕ್ಟಟ್ಟು : ಭಾರತ-ಚೀನ ನೇರ ಮಾತುಕತೆಗೆ ಮೆನನ್ ಸಲಹೆ
Team Udayavani, Jul 15, 2017, 3:52 PM IST
ಹೊಸದಿಲ್ಲಿ : ಸಿಕ್ಕಿಂ ಗಡಿಯಲ್ಲಿ ಉದ್ಭವಿಸಿರುವ ಡೋಕ್‌ಲಾಂ ಬಿಕ್ಕಟ್ಟನ್ನು ನಿವಾರಿಸುವ ನಿಟ್ಟಿನಲ್ಲಿ ಭಾರತ ನೇರವಾಗಿ ಚೀನದೊಂದಿಗೆ ವ್ಯವಹರಿಸಬೇಕು; ವಿವಾದಿತ ವಿಷಯದಲ್ಲಿ ಯಾವುದೇ ಅಂತಿಮ ಹೇಳಿಕೆ ಇಲ್ಲವೇ ನಿರ್ಧಾರ ಬರುವ ತನಕ, ಅನಿರ್ದಿಷ್ಟಾವದಿಗೆ ಇಲ್ಲವೇ ಕಾಲಮಿತಿಗೆ ಒಳಪಟ್ಟಂತೆ ಶಾಂತಿಯಿಂದ ಸಹಬಾಳ್ವೆಯನ್ನು ನಡೆಸಲು ಉಭಯ ದೇಶಗಳು ರಾಜತಾಂತ್ರಿಕ ಮಾರ್ಗದಲ್ಲಿ ಮಾತುಕತೆಯನ್ನು ನಡೆಸಬೇಕು ಎಂದು ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಶಿವಶಂಕರ್ ಮೆನನ್ ಹೇಳಿದ್ದಾರೆ.
ಡೋಕ್‌ಲಾಂ ನಂತಹ ಗಡಿ ಬಿಕ್ಕಟ್ಟನ್ನು ಪರಿಹರಿಸುವಲ್ಲಿ ವಿಶ್ವದಿಂದ ಯಾವುದೇ ಪಾಠ ಕಲಿತುಕೊಳ್ಳುವುದರಲ್ಲಿ ಅರ್ಥವಿಲ್ಲ; ಮಾತ್ರವಲ್ಲ ಉಭಯತರಿಗೆ ಇದು ಪರಸ್ಪರರ ಮನಸ್ಸನ್ನು ಓದುವ ಸಂದರ್ಭವೂ ಅಲ್ಲ; ಹಾಗಾಗಿ ನೇರ ಮಾತುಕತೆಯ ಮೂಲಕವೇ ಉಭಯ ದೇಶಗಳು ಈ ಸಮಸ್ಯೆಯನ್ನು ಬಗೆ ಹರಿಸಿಕೊಳ್ಳಬೇಕು ಎಂದು ಮೆನನ್ ಹೇಳಿದರು.
ಡೋಕ್‌ಲಾಮ್ ನಲ್ಲಿ ಏರ್ಪಟ್ಟಿರುವ ಭಾರತ – ಚೀನ ಸೇನಾ ಮುಖಾಮುಖೀಯು ಈ ಜುಲೈನಲ್ಲಿ ಎರಡನೇ ತಿಂಗಳಿಗೆ ಕಾಲಿಟ್ಟಿದೆ. ಎರಡೂ ದೇಶಗಳು ತಮ್ಮ ಸೇನೆಯನ್ನು ಗಡಿಯಿಂದ ಹಿಂದಕ್ಕೆ ಕರೆಸಿಕೊಳ್ಳಲು ನಿರಾಕರಿಸಿವೆ. ಪರಿಣಾಮವಾಗಿ ಗಡಿ ಬಿಕ್ಕಟ್ಟು ದಿನೇ ದಿನೇ ತೀವ್ರಗೊಳ್ಳುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Saif Ali Khan ಪ್ರಕರಣ: ಶಂಕಿತ ಆರೋಪಿ ಛತ್ತೀಸ್ಘಡದಲ್ಲಿ ರೈಲ್ವೆ ಪೊಲೀಸರ ಬಲೆಗೆ?
Court Verdict: ಕೋಲ್ಕತ್ತಾ ವೈದ್ಯೆ ಅತ್ಯಾಚಾರ-ಕೊಲೆ ಪ್ರಕರಣ… ಆರೋಪಿ ಸಂಜಯ್ ರಾಯ್ ದೋಷಿ
Suffocation: ಚಳಿಗೆಂದು ಹಾಕಿದ ಬೆಂಕಿ… ಬೆಳಗಾಗುವಷ್ಟರಲ್ಲಿ ದಂಪತಿಯ ಜೀವವೇ ಹೋಗಿತ್ತು…
IMF; ಜಗತ್ತಿಗೆ ಆರ್ಥಿಕ ಹಿಂಜರಿತ ಉಂಟಾದರೂ, ಭಾರತಕ್ಕೆ ಅಪಾಯ ಇಲ್ಲ
Russia ಸೇನೆಯಲ್ಲಿದ್ದ 16 ಭಾರತೀಯರು ನಾಪತ್ತೆ, 12 ಜನ ಸಾವು: ಕೇಂದ್ರ
MUST WATCH
ಹೊಸ ಸೇರ್ಪಡೆ
BCCI 10-point ಆದೇಶ ಸಮಸ್ಯೆ; ಮೀಸಲಾತಿ ಹೊಂದಿದ್ದೇವೆ ಎಂದು ರೋಹಿತ್ ಸುಳಿವು
Ranji Trophy; ಸೌರಾಷ್ಟ್ರ ವಿರುದ್ಧ ರಣಜಿ ಪಂದ್ಯದಿಂದ ಹೊರಗುಳಿದ ಕೊಹ್ಲಿ
ವಿಜಯೇಂದ್ರ ಪೂರ್ಣಾವಧಿ ಬಿಜೆಪಿ ಅಧ್ಯಕ್ಷರಾಗಿರ್ತಾರೆನ್ನುವ ವಿಶ್ವಾಸವಿದೆಯಾ?: ಎಂ.ಬಿ.ಪಾಟೀಲ್
Puthige Matha: ವಿಶ್ವ ಗೀತಾ ಪರ್ಯಾಯಕ್ಕೆ ಇಂದಿಗೆ ವರ್ಷ ಪೂರ್ಣ
Saif Ali Khan ಪ್ರಕರಣ: ಶಂಕಿತ ಆರೋಪಿ ಛತ್ತೀಸ್ಘಡದಲ್ಲಿ ರೈಲ್ವೆ ಪೊಲೀಸರ ಬಲೆಗೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.