ಸೊಳ್ಳೆ ಕಚ್ಚಿ ಸತ್ತರೂ ವಿಮೆ ಪರಿಹಾರ ಕೊಡಬೇಕು!
Team Udayavani, Jan 2, 2017, 12:17 PM IST
ನವದೆಹಲಿ: ವಾಹನಗಳ ಡಿಕ್ಕಿ, ಅಗ್ನಿ ಆಕಸ್ಮಿಕ, ಹಾವು ಕಡಿತ ಇವೇ ಮೊದಲಾದವುಗಳು ಮಾತ್ರವೇ ಆ್ಯಕ್ಸಿಡೆಂಡ್ ಎಂದು ನಂಬಿದ್ದರೆ ಇಲ್ಲಿ ಕೇಳಿ, ಸೊಳ್ಳೆ ಕಡಿತ ಮತ್ತು ಅದರಿಂದ ಆಗುವ ಸಾವು ಕೂಡಾ ಆ್ಯಕ್ಸಿಡೆಂಡ್‌ಗೆ ಸಮ ಎಂದು ರಾಷ್ಟ್ರೀಯ ಗ್ರಾಹಕ ವ್ಯಾಜ್ಯಗಳ ಮೇಲ್ಮನವಿ ಆಯೋಗ ತೀರ್ಪು ನೀಡಿದೆ. ಅಷ್ಟು ಮಾತ್ರವಲ್ಲ ಸೊಳ್ಳೆ ಕಡಿತದಿಂದ ಸಾವನ್ನಪ್ಪಿದರೆ, ಅದಕ್ಕೆ ವಿಮಾ ಕಂಪನಿಗಳು ವಿಮಾ ಮೊತ್ತವನ್ನು ಪಾವತಿಸಬೇಕು ಎಂದು ಆದೇಶಿಸಿದೆ.
ಇದು ವಿಮೆ ನೀಡುವ ವೇಳೆ ನಯವಾಗಿ ಮಾತನಾಡಿ, ಬಳಿಕ ಪರಿಹಾರ ನೀಡಬೇಕಾದ ಸಂದರ್ಭದಲ್ಲಿ ಸದಾ ತಪ್ಪಿಸಿಕೊಳ್ಳುವ ವಿಮಾ ಕಂಪನಿಗಳಿಗೆ ಭರ್ಜರಿ ಶಾಕ್ ನೀಡಿದೆ.
ಏನಿದು ಪ್ರಕರಣ: ಪಶ್ಚಿಮ ಬಂಗಾಳದ ಮೌಸಮಿ ಭಟ್ಟಾಚಾರ್ಯ ಎನ್ನುವವರ ಪತಿ ದೇಬಶೀಶ್ 2012ರಲ್ಲಿ ಮಲೇರಿಯಾದಿಂದ ಸಾವನ್ನಪ್ಪಿದ್ದರು. ಹೀಗೆ ಸಾವನ್ನಪ್ಪುವ ಮುನ್ನ ಅವರು ಗೃಹ ಸಾಲ ಪಡೆದಿದ್ದರು ಮತ್ತು
ಯಾವುದೇ ತುರ್ತು ಸಂದರ್ಭದಲ್ಲಿ ಎದುರಾಗಬಹುದಾದ ಅನಾಹುತ ತಪ್ಪಿಸಲು ಗೃಹ ಸಾಲಕ್ಕೆ ವಿಮೆಯನ್ನು ಪಡೆದುಕೊಂಡಿದ್ದರು.
ಈ ಹಿನ್ನೆಲೆಯಲ್ಲಿ ತಮ್ಮ ಪತಿಯ ಸಾವಿನ ಬಳಿಕ ಮೌಸಮಿ ಅವರು ವಿಮಾ ಕಂಪನಿಗೆ ತಮ್ಮ ಪತಿ ಪಾವತಿಸಬೇಕಾದ ಗೃಹ ಸಾಲದ ಕಂತುಗಳನ್ನು ಪಾವತಿಸುವಂತೆ ಕೋರಿದ್ದರು. ಆದರೆ ಈ ಬೇಡಿಕೆಯನ್ನು ವಿಮಾ ಕಂಪನಿ ತಿರಸ್ಕರಿಸಿತ್ತು.
ಈ ಹಿನ್ನೆಲೆಯಲ್ಲಿ ಮೌಸಮಿ ಜಿಲ್ಲಾ ಗ್ರಾಹಕ ನ್ಯಾಯಾಲಯದ ಮೊರೆ ಹೋಗಿದ್ದರು. ಅಲ್ಲಿ ವಾದ ಮಂಡಿಸಿದ್ದ ವಿಮಾ ಕಂಪನಿ, ದೇಬಶೀಶ್ ಅವರು ಸೊಳ್ಳೆ ಕಡಿತದಿಂದಾಗಿ ಮಲೇರಿಯಾಕ್ಕೆ ತುತ್ತಾಗಿ ಸಾವನ್ನಪ್ಪಿದ್ದಾರೆ. ಹೀಗಾಗಿ ಇದು ಆ್ಯಕ್ಸಿಡೆಂಡ್ ಆಗುವುದಿಲ್ಲ. ಹೀಗಾಗಿ ವಿಮೆ ನೀಡು ವುದು ಸಾಧ್ಯವಿಲ್ಲ ಎಂದಿತ್ತು. ಆದರೆ ಈ ವಾದ ತಿರಸ್ಕರಿಸಿದ್ದ ಆಯೋಗ ಮೌಸಮಿ ಪರವಾಗಿ ತೀರ್ಪು ನೀಡಿತ್ತು. ಈ ಹಿನ್ನೆಲೆಯಲ್ಲಿ ವಿಮಾ ಕಂಪನಿ ರಾಜ್ಯ ಗ್ರಾಹಕದ ಆಯೋಗದ ಮೆಟ್ಟಿಲೇರಿ ತ್ತಾದರೂ, ಅಲ್ಲಿಯೂ ಸೋಲಾಗಿತ್ತು. ಹೀಗಾಗಿ ಅಂತಿಮ ಕ್ರಮವಾಗಿ ರಾಷ್ಟ್ರೀಯ ಗ್ರಾಹಕ ವ್ಯಾಜ್ಯ
ಗಳ ಮೇಲ್ಮನವಿ ಆಯೋಗಕ್ಕೆ ಪ್ರಕರಣವನ್ನು ಒಯ್ದಿತ್ತು. ಅಲ್ಲಿ ಈ ಪ್ರಕರಣದ ವಿಚಾರಣೆ ನಡೆಸಿದ
ನ್ಯಾ. ವಿ.ಕೆ.ಜೈನ್, “ಸೊಳ್ಳೆ ಕಡಿತದಿಂದ ಉಂಟಾ ಗುವ ಸಾವು ಅಪಘಾತವಲ್ಲ ಎಂದು ಒಪ್ಪಿಕೊಳ್ಳದೇ ಇರುವುದು ಕಷ್ಟ.
ಎಷ್ಟೇ ಮುನ್ನೆಚ್ಚರಿಕೆ ವಹಿಸಿದರೂ ಸೊಳ್ಳೆಗಳು ಯಾರೂ ಊಹಿಸಿದ ರೀತಿಯಲ್ಲಿ ಮತ್ತು ಅನಿರೀಕ್ಷಿತವಾಗಿ
ಕಡಿಯುತ್ತವೆ. ವಿಮಾ ಕಂಪನಿಯ ವೆಬ್ ಸೈಟ್‌ನಲ್ಲಿರುವ ಮಾಹಿತಿಯ ಪ್ರಕಾರ, ಹಾವು ಕಡಿತ, ಹುಳಕು, ನಾಯಿ ಕಡಿತ
ಮತ್ತಿತರ ಘಟನೆಗಳನ್ನು ವಿಮೆಯ ಅಡಿಯಲ್ಲಿ ಸೇರಿಸಲಾಗಿದೆ.ಆದರೆ, ಆಕಸ್ಮಿಕವಾಗಿ ಸೊಳ್ಳೆ ಕಡಿಯುವುದರಿಂದ ಮಲೇರಿಯಾ ತಗುಲಿ ಸಾವನ್ನಪ್ಪುದನ್ನು ಆಘಾತ ಎಂದು ಪರಿಗಣಿಸದೇ ಇರುವುದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಆಯೋಗ ಹೇಳಿದೆ. ಜೊತೆಗೆ ಸೊಳ್ಳೆ ಕಡಿತದಿಂದಾದ ಸಾವು ಕೂಡ ವಿಮೆ ಅರ್ಹ ಎಂದು ಹೇಳಿ ಮಹತ್ವದ ತೀರ್ಪು ನೀಡಿದೆ.
ಕೋರ್ಟ್ ಹೇಳಿದ್ದು…
ಎಷ್ಟೇ ಮುನ್ನೆಚ್ಚರಿಕೆ ವಹಿಸಿದರೂ ಸೊಳ್ಳೆಗಳು ಯಾರೂ ಊಹಿಸಿದ ರೀತಿಯಲ್ಲಿ ಮತ್ತು ಅನಿರೀಕ್ಷಿತವಾಗಿ ಕಡಿಯುತ್ತವೆ.
ವಿಮಾ ಕಂಪನಿಯ ವೆಬ್ ಸೈಟ್‌ನಲ್ಲಿರುವ ಮಾಹಿತಿಯ ಪ್ರಕಾರ, ಹಾವು ಕಡಿತ, ಹುಳಕು, ನಾಯಿ ಕಡಿತ ಮತ್ತಿತರ
ಘಟನೆಗಳನ್ನು ವಿಮೆಯ ಅಡಿಯಲ್ಲಿ ಸೇರಿಸಲಾಗಿದೆ. ಆದರೆ, ಆಕಸ್ಮಿಕವಾಗಿ ಸೊಳ್ಳೆ ಕಡಿಯುವುದರಿಂದ ಮಲೇರಿಯಾ
ತಗುಲಿ ಸಾವನ್ನಪ್ಪುದನ್ನು ಆಘಾತ ಎಂದು ಪರಿಗಣಿಸದೇ ಇರುವುದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
SC: ಬಿಯಾಂತ್ ಹಂತಕ ಬಲ್ವಂತ್ ಕ್ಷಮಾದಾನ ಅರ್ಜಿ ಶೀಘ್ರ ಇತ್ಯರ್ಥಕ್ಕೆ ಸುಪ್ರೀಂ ಸೂಚನೆ
Chennai: ತೆರಿಗೆಯಲ್ಲಿ ಶೇ.50 ಪಾಲಿಗೆ ತಮಿಳ್ನಾಡು ಮತ್ತೆ ಆಗ್ರಹ
Punjab Farmers: ಡಿ.6ರಂದು ರೈತ ಸಂಘಟನೆಗಳಿಂದ ದೆಹಲಿ ಚಲೋ
Kerala: ಆ್ಯಂಬುಲೆನ್ಸ್ ಓಡಾಟಕ್ಕೆ ಅಡ್ಡಿ: ಕಾರು ಮಾಲೀಕನ ಲೈಸೆನ್ಸ್ ರದ್ದು!
Anmol Bishnoi: ಅಮೆರಿಕದಲ್ಲಿ ಲಾರೆನ್ಸ್ ಬಿಷ್ಣೋಯ್ ಸಹೋದರ ಅನ್ಮೋಲ್ ಬಿಷ್ಣೋಯ್ ಬಂಧನ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.