ಮಹಾರಾಷ್ಟ್ರಆಸ್ಪತ್ರೆಯಲ್ಲಿ 4 ಶಿಶುಗಳ ಶಂಕಿತ ಸಾವು; ನರ್ಸ್ ಆರೆಸ್ಟ್
Team Udayavani, May 31, 2017, 3:59 PM IST
ಮುಂಬಯಿ : ನಾಲ್ಕು ಶಿಶುಗಳ ಶಂಕಾಸ್ಪದ ಸಾವಿನ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಅಮರಾವತಿ ಆಸ್ಪತ್ರೆಯ 30ರ ಹರೆಯದ ನರ್ಸ್ ವಿದ್ಯಾ ಥೋರಟ್ ಎಂಬಾಕೆಯನ್ನು ಕರ್ತವ್ಯ ನಿರ್ಲಕ್ಷ್ಯದ ಆರೋಪದ ಮೇಲೆ ಪೊಲೀಸರು ಬಂಧಿಸಿದ್ದಾರೆ.
ಇದೇ ಆರೋಪದ ಮೇಲೆ ಇದೇ ಆಸ್ಪತ್ರೆಯ ಡಾಕ್ಟರ್ ಭೂಷಣ್ ಕಟ್ಟಾ ಎಂಬವರನ್ನು ಪೊಲೀಸರು ನಿನ್ನೆ ಬಂಧಿಸಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಕಳೆದ ವಾರ, ಅವಧಿಗೆ ಮೊದಲೇ ಜನಿಸಿದ್ದ ನಾಲ್ಕು ಶಿಶುಗಳನ್ನು ಆಸ್ಪತ್ರೆಯ ಎನ್‌ಐಸಿಯು ಘಟಕದಲ್ಲಿ incubator ನಲ್ಲಿ ಇರಿಸಲಾಗಿತ್ತು. ಈ ನಾಲ್ಕೂ ಶಿಶುಗಳು ಸೋಮವಾರ ನಸುಕಿನ ವೇಳೆ ಮೃತಪಟ್ಟಿದ್ದವು. ನಸ್ ಥೋರಟ್ ಈ ಶಿಶುಗಳಿಗೆ ತಪ್ಪು ಇಂಜೆಕ್ಷನ್ ನೀಡಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸ್ಥಳೀಯ ಶಾಸಕ ರವಿ ರಾಣಾ ಅವರು ಮೃತ ಶಿಶುಗಳ ಕುಟುಂಬದವರಿಗೆ ತಲಾ 25 ಲಕ್ಷ ರೂ. ಪರಿಹಾರ ನೀಡಬೇಕೆಂದು ಆಗ್ರಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
By Election: ಯೋಗೇಶ್ವರ್ ನಿಂದಿಸಿದ್ದ ಡಿ.ಕೆ.ಸುರೇಶ್ ಆಡಿಯೋ ಎಚ್‌ಡಿಕೆ ಬಿಡುಗಡೆ
By Election: ನಾಗೇಂದ್ರ, ಜಮೀರ್, ಡಿಕೆಶಿ ಮೇಲೆ ಚುನಾವಣಾ ಆಯೋಗ ಕಣ್ಣಿಡಲಿ: ಡಿವಿಎಸ್
Waqf: ಮುಸ್ಲಿಮರ ಗುರಿ ಮಾಡುವುದು ಬಿಟ್ಟರೆ ಬಿಜೆಪಿಗೆ ಬೇರೇನೂ ಇಲ್ಲ: ಸಚಿವ ದಿನೇಶ್
Maharashtra: ಸ್ತ್ರೀಯರಿಗೆ ಮಾಸಿಕ 3000, ರೈತರ ಸಾಲ ಮನ್ನಾ: ಎಂವಿಎ
Jet Airways ಆಸ್ತಿ ಮಾರಾಟಕ್ಕೆ ಸುಪ್ರೀಂ ಕೋರ್ಟ್ ಅನುಮತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.