ರಿಲಯನ್ಸ್ 2ಜಿ ಕರೆ ಡಿ.1ರಿಂದ ಸ್ಥಗಿತ
Team Udayavani, Nov 5, 2017, 6:15 AM IST
ನವದೆಹಲಿ: ಅನಿಲ್ ಅಂಬಾನಿ ನೇತೃತ್ವದ ರಿಲಯನ್ಸ್ ಕಮ್ಯೂನಿಕೇಶನ್ 2ಜಿ ಕರೆ ಸೌಲಭ್ಯವನ್ನು ಡಿಸೆಂಬರ್ 1ರಿಂದ ಸ್ಥಗಿತಗೊಳಿಸಲು ನಿರ್ಧರಿಸಿದೆ. ಕೇವಲ 4ಜಿ ಸೇವೆಯನ್ನು ಒದಗಿಸಲಾಗುತ್ತದೆ ಎಂದು ಸಂಸ್ಥೆ ಘೋಷಿಸಿದೆ. 4ಜಿ ಸೇವೆಯನ್ನು ಬಳಸುವ ಪ್ರಸ್ತುತ ಗ್ರಾಹಕರು ರಿಲಯನ್ಸ್ ಸೇವೆ ಬಳಕೆ ಮುಂದುವರಿಸಬಹುದು. ಆದರೆ 2ಜಿ ಸೌಲಭ್ಯ ಬಳಕೆ ಮುಂದುವರಿಸಲಾಗದು. 2ಜಿ ಬಯಸುವವರು ಇತರ ನೆಟ್‌ವರ್ಕ್ ಪೂರೈಕೆದಾರ ಸಂಸ್ಥೆಗೆ ಬದಲಾಯಿಸಿ ಕೊಳ್ಳಬಹುದು.
ರಿಲಯನ್ಸ್ ಕಮ್ಯೂನಿಕೇಶನ್ಸ್ ಯಾವುದೇ ಗ್ರಾಹಕರ ಪೋರ್ಟ್ ಅರ್ಜಿಯನ್ನು ತಿರಸ್ಕರಿಸುವು ದಿಲ್ಲ. ಇತರ ನೆಟ್‌ವರ್ಕ್‌ಗಳಿಗೂ ರಿಲಯನ್ಸ್ ಗ್ರಾಹಕರ ಅರ್ಜಿಯನ್ನು ಅನುಮೋದಿಸುವಂತೆ ಕಂಪನಿ ಸೂಚಿಸಿದೆ. ಸದ್ಯ 2ಜಿ ಮತ್ತು 4ಜಿ ಸೇವೆಗಳನ್ನು ಸಂಸ್ಥೆ ಒದಗಿಸುತ್ತಿತ್ತು. 46 ಸಾವಿರ ಕೋಟಿ ರೂ. ನಷ್ಟದಲ್ಲಿರುವ ಕಂಪನಿ ಇತ್ತೀಚೆಗೆ, ಏರ್‌ಸೆಲ್ ಖರೀದಿ ಪ್ರಯತ್ನ ನಡೆಸಿತ್ತು. ಆದರೆ ಅದು ಯಶಸ್ವಿಯಾಗಿರಲಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್
Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ
Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ
Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ
Dharmasthala; ಗ್ರಾಮಾಭಿವೃದ್ಧಿ ಯೋಜನೆ ಜನರ ನಾಡಿಮಿಡಿತ: ನಿರ್ಮಲಾ ಸೀತಾರಾಮನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.