ಕೋವಿಡ್ ಸೋಂಕಿತರ ಸಾವು ಇಳಿಕೆ
Team Udayavani, Dec 27, 2020, 12:40 AM IST
ಹೊಸದಿಲ್ಲಿ: ರೂಪಾಂತರಿ ಕೋವಿಡ್ ಕಾರ್ಮೋಡದ ನಡುವೆ ಭಾರತದ ಪಾಲಿಗೆ ಸಮಾಧಾನಕರ ಸುದ್ದಿಯೊಂ ದಿದೆ. ದೇಶದಲ್ಲಿ ಸೋಂಕಿತರ ಮರಣ ಪ್ರಮಾಣ ಭಾರೀ ತಗ್ಗಿದ್ದು, 6 ತಿಂಗಳುಗಳ ಬಳಿ ಇದೇ ಮೊದಲ ಬಾರಿಗೆ ಕಳೆದ 24 ಗಂಟೆಗಳಲ್ಲಿ 251 ಮಂದಿ ಸಾವನ್ನಪ್ಪಿದ್ದಾರೆ!
ಸೋಂಕಿತರ ಪ್ರಮಾಣದಲ್ಲೂ ಕುಸಿತ ವಾಗಿದ್ದು, ಶನಿವಾರ ಕೇವಲ 22,273 ಮಂದಿಗೆ ಪಾಸಿಟಿವ್ ದೃಢಪಟ್ಟಿದೆ. ರಾಷ್ಟ್ರೀಯ ಚೇತರಿಕೆ ಪ್ರಮಾಣ ಶೇ.95. 78ರಷ್ಟಿದ್ದು, ಮರಣ ಪ್ರಮಾಣ ಶೇ.1.45 ರಷ್ಟಿದೆ ಎಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
ಮೊದಲು ಒಪ್ಪಿಗೆ?: ಬೇರೆಲ್ಲ ಲಸಿಕೆಗಿಂತ ಮೊದಲು ಆಕ್ಸ್‌ಫರ್ಡ್- ಅಸ್ಟ್ರಾಜೆನೆಕಾ ಲಸಿಕೆಗೆ ಭಾರತದಲ್ಲಿ ತುರ್ತು ಬಳಕೆಗೆ ಅನುಮತಿ ಸಿಗುವ ಸಾಧ್ಯತೆ ಅಧಿಕವಿದೆ. ಯುಕೆ ಡ್ರಗ್ ಮಂಡಳಿ ಒಪ್ಪಿಗೆ ನೀಡಿದ ಕೂಡಲೇ ಸಿಡಿಎಸ್‌ಸಿಒ ತಜ್ಞರ ಸಮಿತಿ ಈ ಬಗ್ಗೆ ಸಭೆ ಕರೆಯಲಿದೆ. ಇದೇ ವೇಳೆ ಜಪಾನ್ ಬಳಿಕ ಫ್ರಾನ್ಸ್, ಸ್ಪೇನ್‌ನಲ್ಲಿಯೂ ರೂಪಾಂತರಿ ಕೊರೊನಾ ಸೋಂಕು ದೃಢ ಪಟ್ಟಿದೆ. ಮತ್ತೂಂದು ಬೆಳವಣಿಗೆಯಲ್ಲಿ ಪೋಲಂಡ್, ಜರ್ಮನಿಯಲ್ಲಿ ರವಿವಾರ ದಿಂದ ಸಾರ್ವಜನಿಕರಿಗೆ ಲಸಿಕೆ ಹಾಕ ಲಾಗುತ್ತದೆ.
150 ಯೋಧರಿಗೆ ಪಾಸಿಟಿವ್
ದೇಶದ ವಿವಿಧೆಡೆಯಿಂದ ಹೊಸ
ದಿಲ್ಲಿಗೆ ಆಗಮಿಸಿದ 2 ಸಾವಿರ ಯೋಧರ ಪೈಕಿ 150 ಮಂದಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ನೆಗೆಟಿವ್ ಬಂದವರನ್ನು “ಸೇಫ್ ಬಬಲ್’ ನಿರ್ಮಿಸಿ, ವಸತಿ ಕಲ್ಪಿಸಲಾಗಿದೆ.
ದಿಲ್ಲಿ ಪೊಲೀಸರಿಗೆ ಶೀಘ್ರ ಲಸಿಕೆ
ಶೀಘ್ರದಲ್ಲೇ ದಿಲ್ಲಿ ಪೊಲೀಸರಿಗೆ ಲಸಿಕೆ ಸಿಗುವ ಸಾಧ್ಯತೆ ಇದೆ. ಶನಿವಾರ ಜಿಲ್ಲಾ ಎಸ್‌ಪಿಗಳಿಗೆ ಈ ಸಂಬಂಧ ಆದೇಶ ಹೋಗಿದ್ದು, ಲಸಿಕೆ ನೀಡುವ ದಿನ, ಸಮಯ ಮತ್ತು ಸ್ಥಳದ ಬಗ್ಗೆ ಎಸ್‌ಎಂಎಸ್ ಮೂಲಕ ಮಾಹಿತಿ ನೀಡಲಾಗುತ್ತದೆ ಎಂದು ಹೇಳಿದೆ. ಹೀಗಾಗಿ ಜ. 3ರೊಳಗೆ ಪೊಲೀಸರು ಪಿಐಎಸ್ ಮತ್ತು ಇನ್‌ಸ್ಟ್ರಾಡಿಪಿ ವ್ಯವಸ್ಥೆಯೊಳಗೆ ಮಾಹಿತಿ ಅಪ್ ಲೋಡ್ ಮಾಡುವಂತೆ ಸೂಚಿಸಲಾಗಿದೆ.
ಬೆಲ್ಜಿಯಂನಲ್ಲಿ ಲಸಿಕೆ ವಿತರಣೆಗೆ ಸಿದ್ಧತೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tamil Nadu: ಗೋ ಮಾಂಸ ತಿನ್ನೋದು ಸರಿ ಎಂದಾದರೆ ಮೂತ್ರ ಯಾಕೆ ಬೇಡ: ಬಿಜೆಪಿ
Delhi Polls: ದಿಲ್ಲಿ ವಿಧಾನಸಭೆಯ 70 ಸ್ಥಾನಕ್ಕೆ ಬರೋಬ್ಬರಿ 699 ಅಭ್ಯರ್ಥಿಗಳು ಸ್ಪರ್ಧೆ!
Supreme Court: ಟೆಕಿ ಅತುಲ್ ಪುತ್ರನನ್ನು ಅಜ್ಜಿ ಸುಪರ್ದಿಗೆ ನೀಡಲು ಸುಪ್ರೀಂ ನಕಾರ
NRI: ಸಂಸತ್ತಿನಲ್ಲಿ ಎನ್‌ಆರ್‌ಐ ಪ್ರಾತಿನಿಧ್ಯ: ಸ್ಥಾಯಿ ಸಮಿತಿ ಸಭೇಲಿ ಚರ್ಚೆ
Dog’s Revenge: ತನಗೆ ಡಿಕ್ಕಿ ಹೊಡೆದ ಕಾರಿನ ಮೇಲೆ ಸೇಡು ತೀರಿಸಿಕೊಂಡ ಶ್ವಾನ…