ವಿದೇಶದಲ್ಲಿ ಓದುವ ಭಾರತೀಯರ ಸಂಖ್ಯೆ ಇಳಿಕೆ
ಕೇಂದ್ರ ಮಾನವ ಸಂಪನ್ಮೂಲದ ಮಾಹಿತಿ ಬಹಿರಂಗ
Team Udayavani, Nov 29, 2019, 7:47 PM IST
ಸಾಂದರ್ಭಿಕ ಚಿತ್ರ.
ಮಣಿಪಾಲ: ವಿದೇಶದಲ್ಲಿ ಓದುವ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆ ಇಳಿಕೆಯಾಗಿದೆ. ವಿದ್ಯಾರ್ಥಿಗಳ ಈ ಅನುಪಾತದ ಇಳಿಕೆಗೆ ಹಲವು ಕಾರಣಗಳನ್ನು ವಿವರಿಸಲಾಗುತ್ತಿದೆ. ಅಲ್ಲಿನ ಮೂಲ ಸೌಕರ್ಯಗಳು ಮತ್ತು ವಾತಾವರಣಗಳು ಇದಕ್ಕೆ ಕಾರಣವಾಗಿರಬಹುದು ಎಂದು ಹೇಳಲಾಗುತ್ತಿದೆ. ಈ ಕುರಿತಂತೆ ಕೇಂದ್ರ ಮಾನವ ಸಂಪನ್ಮೂಲದ ಸಚಿವಾಲಯ ಈ ಮಾಹಿತಿಯನ್ನು ಬಹಿರಂಗಪಡಿಸಿದೆ. ಹಾಗಾದರೆ ಎಷ್ಟು ಇಳಿಕೆಯಾಯಿತು? ಎಲ್ಲಿ ಇಳಿಕೆಯಾಯಿತು ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
1.6 ಲಕ್ಷ ಇಳಿಕೆ
2017 - 18 ಮತ್ತು 2018-19ನೇ ಶೈಕ್ಷಣಿಕ ವರ್ಷಕ್ಕೆ ಹೋಲಿಸಿದರೆ ವಿದೇಶದಲ್ಲಿ ವ್ಯಾಸಾಂಗ ಮಾಡುವ ಭಾರತೀಯ ಸಂಖ್ಯೆಯಲ್ಲಿ ಶೇ. 21 ಇಳಿಕೆಯಾಗಿದೆ. ಅಂದರೆ ಸುಮಾರು 1.66 ಲಕ್ಷ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿದೆ.
ಅಮೆರಿಕದಲ್ಲಿ ಕಡಿಮೆ
ವಿಶೇಷವಾಗಿ ಅಮೆರಿಕಕ್ಕೆ ತೆರಳಿ ವ್ಯಾಸಾಂಗ ಮಾಡುವ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಭಾರಿ ಇಳಿಕೆಯಾಗಿದೆ. ಅಮೆರಿಕದಲ್ಲಿ ಆಡಳಿತಕ್ಕೆ ಬರುವ ನೂತನ ಸರಕಾರಗಳ ಕೆಲವು ನಿರ್ಧಾರಗಳು ಅಲ್ಲಿಗೆ ತೆರಳುವ ವಿದ್ಯಾರ್ಥಿಗಳು ಹಾಗೂ ಪ್ರವಾಸಿಗರ ಮೇಲೆ ಪರಿಣಾಮ ಬೀರುತ್ತದೆ. ಇಲ್ಲಿಯೂ ಅದೇ ಕಾರಣ ಎಂದು ಹೇಳಲಾಗುತ್ತಿದೆ.
2.38 ಲಕ್ಷ ಕಡಿಮೆ
ಇತರ ರಾಷ್ಟ್ರಗಳಿಗೆ ಹೋಲಿಸಿದರೆ ಅಮೆರಿಕದಲ್ಲಿ ವ್ಯಾಸಾಂಗ ಮಾಡುವ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಗಣನೀಯ ಇಳಿಕೆಯಾಗಿದೆ. 2017 - 18ನೇ ಸಾಲಿನಲ್ಲಿ 4,47,836 ವಿದ್ಯಾರ್ಥಿಗಳು ಅಮೆರಿಕದಲ್ಲಿದ್ದರು. ಆದರೆ 2018-19ರ ಶೈಕ್ಷಣಿಕ ವರ್ಷದಲ್ಲಿ 2,09,063 ವಿದ್ಯಾರ್ಥಿಗಳು ಮಾತ್ರ ಉನ್ನತ ವ್ಯಾಸಾಂಗಕ್ಕಾಗಿ ಅಮೆರಿಕ ತೆರಳಿದ್ದಾರೆ.
ಇಳಿಕೆಗೆ ಕಾರಣ ಏನು?
ವಿಶೇಷವಾಗಿ ಅಮೆರಿಕದಲ್ಲಿ ಡೊನಾಲ್ಡ್ ಟ್ರಂಪ್ ನೇತೃತ್ವದ ಹೊಸ ಸರಕಾರ ಅಸಿತ್ವಕ್ಕೆ ಬಂದ ಬಳಿಕ ಕಠಿನ ನಿಯಮಗಳನ್ನು ಜಾರಿಗೆ ತರಲಾಗಿದೆ. ಇದು ಪರೋಕ್ಷವಾಗಿ ಅಲ್ಲಿ ಓದುವ ವಿದೇಶಿ ವಿದ್ಯಾರ್ಥಿಗಳ ಮೇಲೆಯೂ ಪರಿಣಾಮ ಬೀರುತ್ತದೆ. ಅಮೆರಿಕ ವಿಸಾ ನಿಯಾಮವಳಿಗಳನ್ನು ಬಿಗಿ ಮಾಡಿದ್ದು ಇದು ಆ ದೇಶದಲ್ಲಿ ಓದುವ ವಿದ್ಯಾರ್ಥಿ ಸಮುದಾಯಕ್ಕೆ ಹೊರೆಯಾಗುತ್ತಿದೆ.
ಬೇರೆ ಕಡೆ ಸಮಸ್ಯೆ ಇಲ್ಲ
ವರದಿಯ ಪ್ರಕಾರ ಅಮೆರಿಕದಲ್ಲಿ ಮಾತ್ರ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಇಳಿಕೆ ಕಂಡುಬರುತ್ತಿದೆ. ಉಳಿದ ರಾಷ್ಟ್ರಗಳಲ್ಲಿ ಯಾವುದೇ ತೊಂದರೆಗಳು ಇಲ್ಲ. ಪ್ರಮುಖವಾಗಿ ಆಸ್ಟ್ರೇಲಿಯಾ, ರಷ್ಯಾ, ಕೆನಡ, ಮಲೇಷಿಯಾ, ಇಂಗ್ಲೆಂಡ್, ಚೀನದಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿಲ್ಲ. 2017-18ರಲ್ಲಿ 93,832 ಇದ್ದು, 2018-19ರಲ್ಲಿ 1,23,851 ವಿದ್ಯಾರ್ಥಿಗಳು ಆಸ್ಟ್ರೇಲಿಯಾಕ್ಕೆ ತೆರಳಿದ್ದಾರೆ. ಕೆನಡದಲ್ಲಿ 1,67,060 ವಿದ್ಯಾರ್ಥಿಗಳು ಈ ಹಿಂದೆ ಓದುತ್ತಿದ್ದು, 2018- 19ರ ಶೈಕ್ಷಣಿಕ ವರ್ಷದಲ್ಲಿ 1,72,600 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.
ವಿದ್ಯಾರ್ಥಿಗಳ ಸಮಸ್ಯೆಗಳು
ಮಾನವ ಸಂಪನ್ಮೂಲ ಸಚಿವಾಲಯ ರಾಜ್ಯಸಭೆಗೆ ನೀಡಿದ ಮಾಹಿತಿ ಪ್ರಕಾರ, ಭಾರತೀಯ ವಿದ್ಯಾರ್ಥಿಗಳು ವಿದೇಶದಲ್ಲಿ ಕಿರುಕುಳವನ್ನು ಅನುಭವಿಸುತ್ತಿದ್ದಾರೆ. ಕೆಲವು ಶಿಕ್ಷಣ ಸಂಸ್ಥೆಗಳು ಶುಲ್ಕವನ್ನು ಹೆಚ್ಚಳ ಮಾಡುತ್ತಿದ್ದು ವಿದ್ಯಾರ್ಥಿಗಳಿಗೆ ಹೊರೆಯಾಗುತ್ತಿದೆ. ಕೆಲವು ದೇಶದಲ್ಲಿ ಚುನಾವಣೆ ಬಳಿಕ ಹೊಸ ಸರಕಾರಗಳು ಬಂದಾಗ ಅವರ ಕೆಲವು ನಿಯಮಗಳು ಬದಲಾಗುತ್ತದೆ. ಇಂತಹ ಸಂದರ್ಭ ವಿದ್ಯಾರ್ಥಿಗಳು ಸಮಸ್ಯೆಗೆ ಒಳಗಾಗುತ್ತಾರೆ.
ಗ್ರಾಫಿಕ್ಸ್
ದೇಶಗಳು 2017-18 2018-19
ಅಮೆರಿಕ 4,37,836 2,09,063
ಕೆನಡ 1,67,060 1,72,600
ಆಸ್ಟ್ರೇಲಿಯಾ 93,832 1,23,851
ರಷ್ಯಾ 11,250 15,600
ಚೀನ 4,466 4,675
ಮಲೇಷಿಯಾ 1,869 2,263
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP;’ಬಟೆಂಗೆ ತೊ ಕಟೆಂಗೆ’ ಹೇಳಿಕೆಗೆ ಬೆಂಬಲವಿಲ್ಲ ಎಂದ ಅಜಿತ್ ಪವಾರ್
J-K: ಭೀಕರ ಅಪಘಾ*ತದಲ್ಲಿ SUV ಚಲಾಯಿಸುತ್ತಿದ್ದ 17 ರ ಹುಡುಗರಿಬ್ಬರು ಮೃ*ತ್ಯು
Maharashtra Election: ಅಮಿತ್ ಶಾ ಅವರ ಬ್ಯಾಗ್ ಪರೀಕ್ಷಿಸಿದ ಚುನಾವಣಾ ಅಧಿಕಾರಿಗಳು
Anmol Buffalo:1500 ಕೆಜಿ ತೂಗುವ ಈ ಕೋಣದ ಬೆಲೆ ಬರೋಬ್ಬರಿ 23 ಕೋಟಿ ರೂ!
Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್ ಗೆ 10 ಕೋಟಿ ರೂಪಾಯಿ ಪಂಗನಾಮ!
MUST WATCH
ಹೊಸ ಸೇರ್ಪಡೆ
Karkala: ದ್ವೇಷ ಭಾವನೆ ಕೆರಳಿಸುವ ಆರೋಪ; ದೂರು ದಾಖಲು
PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ
Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್.ಅಶೋಕ್
50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ
‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.