Ayodhya: ರಾಮಮಂದಿರದಲ್ಲಿ ಐತಿಹಾಸಿಕ ದೀಪಾವಳಿ: ಮೊದಲ ದೀಪಾವಳಿಗೆ ಅಯೋಧ್ಯೆ ಸಾಕ್ಷಿ
Team Udayavani, Oct 31, 2024, 7:00 AM IST
ಅಯೋಧ್ಯೆ: ಪವಿತ್ರ ರಾಮಮಂದಿರ ಉದ್ಘಾಟನೆಯ ಮೊದಲ ದೀಪಾವಳಿಗೆ ಅಯೋಧ್ಯೆ ಸಾಕ್ಷಿಯಾಗಿದೆ. ಇಲ್ಲಿನ ಸರಯೂ ನದಿ ದಡದಲ್ಲಿ 25 ಲಕ್ಷಕ್ಕೂ ಅಧಿಕ ಹಣತೆಗಳನ್ನು ಬೆಳಗಲಾಗಿದ್ದು, 2 ಗಿನ್ನೆಸ್ ವಿಶ್ವದಾಖಲೆಗಳು ನಿರ್ಮಾಣವಾಗಿವೆ.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಇಡೀ ಕಾರ್ಯಕ್ರಮದ ಮುಂದಾಳತ್ವ ವಹಿಸಿದ್ದು, ದೀಪಾರಾಧನೆಯಲ್ಲಿ ರಾಜ್ಯದ ಎಲ್ಲಾ ಕ್ಯಾಬಿನೆಟ್ ಸಚಿವರು ಭಾಗಿಯಾಗಿದ್ದರು. ಯೋಗಿ ಮೊದಲ ದೀಪ ಹಚ್ಚುವ ಮೂಲಕ ದೀಪೋತ್ಸವಕ್ಕೆ ಚಾಲನೆ ನೀಡಿದರು. ಸರಯೂ ತಟದಲ್ಲಿ ನಡೆಯುವ ದೀಪಾರತಿ ಮತ್ತು ದೀಪೋತ್ಸವ ನೋಡಲು ಇಡೀ ಅಯೋಧ್ಯೆಯ ಜನರು ನೆರೆದಿದ್ದು, ಎಲ್ಲೆಡೆ ರಾಮನ ಜಪ ಕೇಳಿಬರುತ್ತಿತ್ತು.
ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಯೋಗಿ, ಕಾಶಿ ಮತ್ತು ಮಥುರಾಗಳು ಸಹ ಅಯೋಧ್ಯೆಯಂತೆ ಪ್ರಕಾಶಿಸಬೇಕು. ಅಯೋಧ್ಯೆಯಲ್ಲಿ ನಡೆದಿರುವುದು ಡಬಲ್ ಎಂಜಿನ್ ಸರ್ಕಾರದ ಅಭಿವೃದ್ಧಿ ಎಂದು ಹೇಳಿದರು.
ಡ್ರೋನ್ ಶೋ: ದೀಪಾವಳಿಯ ಹಿನ್ನೆಲೆಯಲ್ಲಿ ಅಯೋಧ್ಯೆಯಲ್ಲಿ ಡ್ರೋನ್ ಶೋವನ್ನು ಸಹ ಆಯೋಜಿಸಲಾಗಿತ್ತು. ಡ್ರೋನ್ ಶೋನಲ್ಲಿ ರಾಮಾಯಣದ ಕಥೆಗಳನ್ನು ಪ್ರಸ್ತುತಪಡಿಸಲಾಗಿತ್ತು. ಅಯೋಧ್ಯೆಯಲ್ಲಿ ರಕ್ಷಣೆಗಾಗಿ 10000 ಮಂದಿ ಸಿಬ್ಬಂದಿಯನ್ನು ನೇಮಕ ಮಾಡಲಾಗಿತ್ತು.
ಒಂದೇ ಬಾರಿ ಬೆಳಗಿನ 25 ಲಕ್ಷಕ್ಕೂ ಅಧಿಕ ಹಣತೆ
ಅಯೋಧ್ಯೆಯಲ್ಲಿ ನಡೆದ ದೀಪೋತ್ಸವದಲ್ಲಿ 2 ವಿಶ್ವ ದಾಖಲೆಗಳು ನಿರ್ಮಾಣವಾಗಿವೆ. ಅತಿ ಹೆಚ್ಚು ಜನರು ಒಂದೇ ಬಾರಿ ಆರತಿ ಎತ್ತಿದ್ದು ಮತ್ತು ಒಂದೇ ಪ್ರದೇಶದಲ್ಲಿ 25,12,585 ಎಣ್ಣೆ ದೀಪಗಳನ್ನು ಬೆಳಗಿದ್ದು ವಿಶ್ವದಾಖಲೆ ಪಟ್ಟಿಗೆ ಸೇರ್ಪಡೆಯಾಗಿದೆ. ದೀಪೋತ್ಸವಕ್ಕೆ ಆಗಮಿಸಿದ್ದ ಗಿನ್ನೆಸ್ ಸಂಸ್ಥೆಯ ಅಧಿಕಾರಿಗಳು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಿಗೆ ಪ್ರಮಾಣಪತ್ರವನ್ನು ನೀಡಿದ್ದಾರೆ.
ಅಮೆರಿಕದ ವಿಶ್ವ ವ್ಯಾಪಾರ ಕೇಂದ್ರದಲ್ಲೂ ದೀಪಾವಳಿ
ಭಾರತದಲ್ಲಿ ದೀಪಾವಳಿ ಹಬ್ಬದ ಆಚರಣೆಯ ಹಿನ್ನೆಲೆಯಲ್ಲಿ ಅಮೆರಿಕ, ಆಸ್ಟ್ರೇಲಿಯಾ ಸೇರಿದಂತೆ ಹಲವು ದೇಶಗಳಲ್ಲಿ ಸಂಭ್ರಮಾಚರಣೆ ನಡೆಸಲಾಗಿದೆ. ಅಮೆರಿಕದ ನ್ಯೂಯಾರ್ಕ್‌ನಲ್ಲಿರುವ ವಿಶ್ವ ವ್ಯಾಪಾರ ಕೇಂದ್ರದ ಇಡೀ ಕಟ್ಟಡವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಿದ್ದು, ಇದರ ಮೇಲೆ ಹಣತೆಯ ಚಿತ್ರ ಮೂಡಿಸುವ ಮೂಲಕ ಭಾರತೀಯರಿಗೆ ದೀಪಾವಳಿ ಹಬ್ಬದ ಪ್ರಯುಕ್ತ ಶುಭ ಕೋರಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
2 ದಿನದ ಹಿಂದೆ ನಾಪತ್ತೆಯಾಗಿದ್ದ ಮಹಿಳೆಯ ದೇಹದ ಭಾಗಗಳು ಪ್ಲಾಸ್ಟಿಕ್ ಚೀಲದಲ್ಲಿ ಪತ್ತೆ
ಈ ದೀಪಾವಳಿ ಎಲ್ಲರ ಜೀವನದಲ್ಲೂ ಸಂತೋಷ ಸಮೃದ್ಧಿ ತರಲಿ… ದೇಶದ ಜನತೆಗೆ ಪ್ರಧಾನಿ ಶುಭಾಶಯ
Telangana: ಇನ್ನು ಒಂದು ವರ್ಷ ಮೆಯನೀಸ್ ಬಳಕೆ ಮಾಡುವಂತಿಲ್ಲ; ಆದೇಶ
Richest Candidate: ಮಹಾ ಚುನಾವಣೆ… ಬಿಜೆಪಿಯ ಪರಾಗ್ ಶಾ ಶ್ರೀಮಂತ ಅಭ್ಯರ್ಥಿ
ಭಾರತ, ಚೀನಾ ಸೇನಾ ಹಿಂಪಡೆತ ಪೂರ್ಣ: ದೀಪಾವಳಿ ದಿನ ಸಿಹಿ ಹಂಚಿಕೊಳ್ಳಲಿರುವ ಸೈನಿಕರು
MUST WATCH
ಹೊಸ ಸೇರ್ಪಡೆ
Vineeth Kumar: ನ.1 ರಂದು “90 ಎಮ್ ಎಲ್” ತುಳು ಸಿನಿಮಾಕ್ಕೆ ಮುಹೂರ್ತ
ಉದಯವಾಣಿ “ಚಿಣ್ಣರ ಬಣ್ಣ 2024′: ನ.2-3ರಂದು ಎರಡನೇ ಹಂತದ ಸ್ಪರ್ಧೆ
Udayavani ರೇಷ್ಮೆ ಜತೆ ದೀಪಾವಳಿ ಸ್ಪರ್ಧೆ: ನೀವೂ ಪಾಲ್ಗೊಳ್ಳಿ
2 ದಿನದ ಹಿಂದೆ ನಾಪತ್ತೆಯಾಗಿದ್ದ ಮಹಿಳೆಯ ದೇಹದ ಭಾಗಗಳು ಪ್ಲಾಸ್ಟಿಕ್ ಚೀಲದಲ್ಲಿ ಪತ್ತೆ
ಈ ದೀಪಾವಳಿ ಎಲ್ಲರ ಜೀವನದಲ್ಲೂ ಸಂತೋಷ ಸಮೃದ್ಧಿ ತರಲಿ… ದೇಶದ ಜನತೆಗೆ ಪ್ರಧಾನಿ ಶುಭಾಶಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.