ಸದ್ಯದಲ್ಲೇ ದೀಪಿಕಾ ಮೇಣದ ಪ್ರತಿಮೆ
Team Udayavani, Jul 24, 2018, 6:00 AM IST
ಮುಂಬಯಿ: ಪ್ರತಿಷ್ಠಿತ ಮೇಡಂ ಟುಸ್ಸಾಂಡ್ಸ್ ಸಂಸ್ಥೆಯು ನಿರ್ಮಿಸುವ ಮೇಣದ ಪ್ರತಿಮೆಗಳ ಸಾಲಿಗೆ ಇದೀಗ ಬಾಲಿವುಡ್ ನಟಿ ದೀಪಿಕಾ ಪಡುಕೋಣೆಯ ಪ್ರತಿಮೆ ಸದ್ಯದಲ್ಲೇ ಸೇರ್ಪಡೆಗೊಳ್ಳಲಿದೆ. ಹೊಸದಾಗಿ ನಿರ್ಮಾಣಗೊಳ್ಳಲಿರುವ ಪ್ರತಿಮೆ ಲಂಡನ್ನಲ್ಲಿರುವ ಪ್ರಧಾನ ಸಂಗ್ರಹಾಲಯದ ಜತೆಗೆ ದೆಹಲಿಯಲ್ಲಿನ ಶಾಖಾ ಸಂಗ್ರಹಾಲಯದಲ್ಲೂ ಸ್ಥಾನ ಪಡೆಯಲಿರುವುದು ವಿಶೇಷ.
ಪ್ರತಿಮೆ ನಿರ್ಮಾಣಕ್ಕಾಗಿ ಸಂಸ್ಥೆಯ ಕಲಾವಿದ ತಜ್ಞರು ಲಂಡನ್ನಲ್ಲಿ ಸೋಮವಾರ, ದೀಪಿಕಾ ಪಡುಕೋಣೆಯವರನ್ನು ಭೇಟಿಯಾಗಿ ಸುಮಾರು 200ಕ್ಕೂ ಹೆಚ್ಚು ಅಳತೆ ಪಡೆದಿದ್ದು, ಅವರ ಫೋಟೋಗಳನ್ನೂ ಸೆರೆಹಿಡಿದಿದ್ದಾರೆ. 2019ರ ಆರಂಭದಲ್ಲಿ ಮೊದಲ ಪ್ರತಿಮೆ ಲಂಡನ್ನಲ್ಲಿ ಅನಾವರಣಗೊಳ್ಳಲಿದ್ದು, ಕೆಲ ತಿಂಗಳ ನಂತರ ದೆಹಲಿಯಲ್ಲಿ ಅನಾವರಣ ಆಗಲಿದೆ. ಏಂಜೆಲೀನಾ ಜ್ಯೂಲಿ, ಹೆಲೆನ್ ಮಿರೆನ್ರಂಥ ಖ್ಯಾತ ತಾರೆಯರ ಮೇಣದ ಪ್ರತಿಮೆಗಳ ಪಕ್ಕದಲ್ಲೇ ದೀಪಿಕಾಳ ಪ್ರತಿಮೆಯೂ ತಲೆಎತ್ತಲಿದೆ ಎಂದು ಹೇಳಲಾಗಿದೆ. ಈ ವಿಚಾರ ತಿಳಿದು ಪುಳಕಿತಳಾಗಿದ್ದೇನೆ ಎಂದು ದೀಪಿಕಾ ಟ್ವಿಟರ್ನಲ್ಲಿ ಬರೆದುಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
J&K Assembly polls; ಈಗ ಪಾಕಿಸ್ಥಾನವು ಮೋದಿಗೆ ಹೆದರುತ್ತಿದೆ: ಅಮಿತ್ ಶಾ ವಾಗ್ದಾಳಿ
Tirupati laddoo: ʼಅಯೋಧ್ಯೆ ರಾಮಮಂದಿರ ಪ್ರಾಣಪ್ರತಿಷ್ಠೆಯಲ್ಲಿ ಲಡ್ಡು ಪ್ರಸಾದ ಹಂಚಿದ್ದೆವುʼ
AtishiAAP; ದೆಹಲಿಯ ಮೂರನೇ ಮಹಿಳಾ ಸಿಎಂ ಆದ ಆತಿಷಿ
Rescue;ಅಪಘಾತಕ್ಕೀಡಾಗಿ ಫ್ಲೈಓವರ್ ಪಿಲ್ಲರ್ನಲ್ಲಿ ಸಿಲುಕಿಕೊಂಡ ಮಹಿಳೆ!!
Laddu ವಿವಾದ: ಮುಂದಿನ ಕ್ರಮದ ಬಗ್ಗೆ ಅರ್ಚಕರು, ತಜ್ಞರೊಂದಿಗೆ ಸಮಾಲೋಚನೆ: ಸಿಎಂ ನಾಯ್ಡು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.