ನೌಕಾ ಪಡೆಗೆ 21,000 ಕೋಟಿ ವೆಚ್ಚದ 111 ಕಾಪ್ಟರ್ ಖರೀದಿಗೆ ಒಪ್ಪಿಗೆ
Team Udayavani, Aug 25, 2018, 7:34 PM IST
ಹೊಸದಿಲ್ಲಿ : ಅತ್ಯಂತ ಮಹತ್ವದ ನಿರ್ಧಾರವೊಂದರಲ್ಲಿ ರಕ್ಷಣಾ ಸಚಿವಾಲಯವು ಭಾರತೀಯ ನೌಕಾ ಪಡೆಗೆ 21,000 ಕೋಟಿ ರೂ. ವೆಚ್ಚದಲ್ಲಿ 111 ಸೇವಾ-ಬಳಕೆಯ ಹೆಲಿಕಾಪ್ಟರ್ಗಳನ್ನು ಖರೀದಿಸುವ ಪ್ರಸ್ತಾವಕ್ಕೆ ಅನುಮೋದನೆ ನೀಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ 111 ಹೆಲಿಕಾಪ್ಟರ್ ಖರೀದಿ ಸೇರಿದಂತೆ ಸುಮಾರು 46,000 ಕೋಟಿ ರೂ.ವೆಚ್ಚದ ಪರಿಕರ ಖರೀದಿ ಪ್ರಸ್ತಾವಗಳಿಗೂ ರಕ್ಷಣಾ ಸಚಿವಾಲಯ ಒಪ್ಪಿಗೆ ನೀಡಿದೆ ಎಂದು ಅಧಿಕಾರಿಗಳು ತಿಳಿಸಿದರು .
ರಕ್ಷಣಾ ಪರಿಕರಗಳ ಖರೀದಿಗೆ ಸಂಬಂಧಿಸಿದಂತೆ ಅತ್ಯುನ್ನತ ನಿರ್ಧಾರದ ಡಿಫೆನ್ಸ್ ಅಕ್ವಿಸಿಶನ್ ಕೌನ್ಸಿಲ್ (ಡಿಎಸಿ) ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಡಿಎಸಿ ಅನುಮೋದಿಸಿರುವ ರಕ್ಷಣಾ ಪರಿಕರ ಖರೀದಿ ಪ್ರಸ್ತಾವಗಳಲ್ಲಿ 24,879 ಕೋಟಿ ರೂ. ವೆಚ್ಚದ ಇತರೇ ಪರಿಕರಗಳು ಮತ್ತು ದೇಶೀಯವಾಗಿ ವಿನ್ಯಾಸಗೊಂಡು ಅಭಿವೃದ್ಧಿಪಡಿಸಲಾದ 155 ಎಂಎಂ ಸಾಮರ್ಥ್ಯದ, 3,364 ಕೋಟಿ ರೂ ವೆಚ್ಚದ, ಅತ್ಯಾದುನಿಕ 150 ಆರ್ಟಿಲರಿ ಗನ್ ಸಿಸ್ಟಮ್ಗಳ ಖರೀದಿಯೂ ಸೇರಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Poll code violations ; ಖರ್ಗೆ, ನಡ್ಡಾ ಪ್ರತಿಕ್ರಿಯೆ ಕೇಳಿದ ಚುನಾವಣ ಆಯೋಗ
Rahul Gandhi ಭರವಸೆಗಳನ್ನು ನೀಡುತ್ತಾರೆ ಮತ್ತು ವಿದೇಶಕ್ಕೆ ಹಾರುತ್ತಾರೆ: ಶಾ ವಾಗ್ದಾಳಿ
PM Modi ಅವರು ಜೋ ಬೈಡೆನ್ ಅವರಂತೆ ನೆನಪಿನ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ: ರಾಹುಲ್ ಗಾಂಧಿ
Resign: ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸ್ಥಾನಕ್ಕೆ ಸುಖಬೀರ್ ಸಿಂಗ್ ಬಾದಲ್ ರಾಜೀನಾಮೆ
Maharashtra; ನಮ್ಮ ಮೈತ್ರಿ ಕೂಟ ಗೆದ್ದು ಮಹಾರಾಷ್ಟ್ರ ಉಳಿಸಲಿದೆ: ಡಿ.ಕೆ. ಶಿವಕುಮಾರ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.