9 ಮಕ್ಕಳ ಅಪಹರಣ, ರೇಪ್, ಹತ್ಯೆಗೈದ ಸರಣಿ ಹಂತಕ ಕೊನೆಗೂ ಸೆರೆ
Team Udayavani, Nov 22, 2018, 11:05 AM IST
ಹೊಸದಿಲ್ಲಿ : ಮೂರರಿಂದ ಏಳು ವರ್ಷ ಪ್ರಾಯದ ಹೆಣ್ಣು ಮಕ್ಕಳನ್ನು ಅಪಹರಿಸಿ, ಅತ್ಯಮಾನುಷವಾಗಿ ಹಿಂಸಿಸಿ, ಅತ್ಯಾಚಾರಗೈದು ಕೊಲೆ ಮಾಡುತ್ತಿದ್ದ 20ರ ಹರೆಯದ ಸುನೀಲ್ ಕುಮಾರ್ ಎಂಬ ಮಕ್ಕಳ ಸರಣಿ ಹಂತಕನನ್ನು ಬಂಧಿಸುವಲ್ಲಿ ದಿಲ್ಲಿ ಪೊಲೀಸರು ಕೊನೆಗೂ ಯಶಸ್ವಿಯಾಗಿದ್ದಾರೆ.
2016ರಿಂದ ಈ ತಾನು ಈ ರೀತಿಯಲ್ಲಿ ಕನಿಷ್ಠ 9 ಹೆಣ್ಣು ಮಕ್ಕಳನ್ನು ಅಪಹರಿಸಿ, ಹಿಂಸಿಸಿ ಅತ್ಯಾಚಾರಗೈದು ಕೊಲೆ ಮಾಡಿರುವುದಾಗಿ ಆರೋಪಿ ಸುನೀಲ್ ಕುಮಾರ್ ಒಪ್ಪಿಕೊಂಡಿರುವುದಾಗಿ ಗುರುಗ್ರಾಮ ಪೊಲೀಸ್ ಠಾಣೆ ಸಹಾಯಕ ಎಸ್ ಐ ಮತು ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿರುವ ಸುಭಾಷ್ ಬೊಕೇನ್ ತಿಳಿಸಿದ್ದಾರೆ.
ಸುನೀಲ್ ಕುಮಾರ್ ದಿಲ್ಲಿಯಲ್ಲಿ ನಾಲ್ಕು, ಗುರುಗ್ರಾಮದಲ್ಲಿ ಮೂರು, ಝಾನ್ಸಿ ಮತ್ತು ಗ್ವಾಲಿಯರ್ ನಲ್ಲಿ ತಲಾ ಒಬ್ಬರಂತೆ ಒಟ್ಟು 9 ಹೆಣ್ಣು ಮಕ್ಕಳನ್ನು ಅಪಹರಿಸಿ, ಕ್ರೂರವಾಗಿ ಹಿಂಸಿಸಿ, ಕೈಕಾಲು ಮುರಿದು, ಅತ್ಯಾಚಾರಗೈದು ಕೊಲೆ ಮಾಡಿರುವುದಾಗಿ ಬೊಕೇನ್ ಹೇಳಿದರು.
ಕಳೆದ ನ.11ರಂದು ಗುರುಗ್ರಾಮದಲ್ಲಿ ಮೂರು ವರ್ಷದ ಪ್ರಾಯದ ಬಾಲಕಿಗೆ ಈತ ಚಾಕೋಲೇಟ್ ಆಸೆ ತೋರಿಸಿ ಅಪಹರಿಸಿ, ಹಿಂಸಿಸಿ, ಅತ್ಯಾಚಾರಗೈದು ಕೊಂದಿರುವುದು ತಾಜಾ ಪ್ರಕರಣವಾಗಿದೆ.
ಈ ಬಾಲಕಿಯ ನಗ್ನ ಶವ ಸೆಕ್ಟರ್66ರ ಕೊಳೆಗೇರಿಯೊಂದರ ಕೋಣೆಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿರುವುದು ಪತ್ತೆಯಾಗಿತ್ತು.
ಈ ಘಟನೆಯನ್ನು ಅನುಸರಿಸಿ ಪೊಲೀಸರು ಆರೋಪಿಯನ್ನು ಹಿಡಿಯಲು ಮೂರು ರಾಜ್ಯಗಳಲ್ಲಿ ಶೋಧ ಕಾರ್ಯ ನಡೆಸಿ ಅಂತಿಮವಾಗಿ ಆತನನ್ನು ಆತನ ಹುಟ್ಟೂರಾದ ಝಾನ್ಸಿ ಜಿಲ್ಲೆಯ ಗ್ರಾಮದಲ್ಲಿ ಸೆರೆ ಹಿಡಿಯುವಲ್ಲಿ ಯಶಸ್ವಿಯಾದರು. ಈತ ತನ್ನ ತಾಯಿ ಮತ್ತು ಸಹೋದರಿಯನ್ನು ಕಾಣಲು ಗುರುಗ್ರಾಮಕ್ಕೆ ಬಂದು ಆ ಬಳಿಕ ಒಡನೆಯೇ ಹುಟ್ಟೂರಿಗೆ ಪಲಾಯನ ಮಾಡಿದ್ದ.
ಅಪರೂಪಕ್ಕೆ ಕೂಲಿ ಕಾರ್ಮಿಕನಾಗಿ ದುಡಿಯುತ್ತಾ ಸಮುದಾಯ ಭವನದಲ್ಲಿ ಊಟ ಮಾಡಿಕೊಂಡು ಪಾರ್ಕುಗಳಲ್ಲಿ ಮಲಗಿಕೊಂಡು ಕಾಲ ಕಳೆಯುತ್ತಾ 3ರಿಂದ 7 ವರ್ಷ ಪ್ರಾಯದ ಹೆಣ್ಣು ಮಕ್ಕಳನ್ನು ಹೊಂಚು ಹಾಕಿ ಅಪಹರಿಸಿ, ಇಟ್ಟಿಗೆಯಿಂದ ಅವರ ಕೈಕಾಲು ಮುರಿದು, ಬಾಯಿಗೆ ಪ್ಲಾಸ್ಟಿಕ್ ಬಿಗಿದ್ದು ಅತ್ಯಾಚಾರ ಮಾಡಿ ಬಳಿಕ ಕೊಂದು ಹಾಕುತ್ತಿದ್ದ ಸುನೀಲ್ ಕುಮಾರ್ ನನ್ನು ನ್ಯಾಯಾಲಯ 8 ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ. ಆತನ ಈ ಹಿಂದಿನ 9 ಅತ್ಯಾಚಾರ-ಕೊಲೆ ಕೇಸುಗಳನ್ನು ಪೊಲೀಸರು ತನಿಖೆ ಮಾಡುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Wayanad: ಪ್ರಿಯಾಂಕಾ ಗಾಂಧಿ ‘ಕೈ’ ಹಿಡಿಯಲಿದ್ದಾರಾ ಮತದಾರರು… 85,000 ಮತಗಳಿಂದ ಮುನ್ನಡೆ
Election Results: ಮಹಾರಾಷ್ಟ್ರ, ಝಾರ್ಖಂಡ್ ನಲ್ಲಿ ಮತ ಎಣಿಕೆ ಪ್ರಕ್ರಿಯೆ ಆರಂಭ
Govt Employees: 8ನೇ ವೇತನ ಆಯೋಗ ಶಿಫಾರಸು ಜಾರಿಯಾದರೆ ಕನಿಷ್ಠ ವೇತನ 51000 ರೂ.!
Winter Session: ಸಂಸತ್ ಅಧಿವೇಶನ ನಾಡಿದ್ದಿಂದ:”ವಕ್ಫ್’ ವಿಧೇಯಕ ಮಂಡನೆ?
Election Results: ಝಾರ್ಖಂಡ್, ಮಹಾರಾಷ್ಟ್ರದಲ್ಲಿ ಪಟ್ಟ ಯಾರಿಗೆ?
MUST WATCH
ಹೊಸ ಸೇರ್ಪಡೆ
Karnataka By Poll Results: ಮತಎಣಿಕೆ-ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರು “ಕೈ” ಮುನ್ನಡೆ
By Election: ನಿಖಿಲ್ ವಿರುದ್ದ ಮುನ್ನಡೆ ಸಾಧಿಸಿದ ಯೋಗೇಶ್ವರ್; ಕುತೂಹಲದತ್ತ ಚನ್ನಪಟ್ಟಣ
Karkala: ಶಾಲಾ ವಾಹನಕ್ಕೆ ಢಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಸಾವು
Zebra Movie Review: ಜೀಬ್ರಾ ಕ್ರಾಸ್‌ನಲ್ಲಿ ಕಣ್ಣಾ ಮುಚ್ಚಾಲೆ!
Wayanad: ಪ್ರಿಯಾಂಕಾ ಗಾಂಧಿ ‘ಕೈ’ ಹಿಡಿಯಲಿದ್ದಾರಾ ಮತದಾರರು… 85,000 ಮತಗಳಿಂದ ಮುನ್ನಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.