Pollution ದಿಲ್ಲಿಯಲ್ಲಿ ಆ್ಯಪ್ ಟ್ಯಾಕ್ಸಿಗಳಿಗೆ ನಿಷೇಧ: ಬೆಸ-ಸಮ ಸಂಚಾರ ನಿಯಮ ಮುಂದೂಡಿಕೆ
ಮಾಲಿನ್ಯ ನಿಯಂತ್ರಣಕ್ಕೆ ಮತ್ತೊಂದು ಕ್ರಮ
Team Udayavani, Nov 8, 2023, 8:29 PM IST
ನವದೆಹಲಿ: ದೆಹಲಿ ರಾಜ್ಯ ಮತ್ತು ರಾಷ್ಟ್ರ ರಾಜಧಾನಿ ನವದೆಹಲಿ ಪ್ರದೇಶದಲ್ಲಿ ವಾಯು ಗುಣಮಟ್ಟ (ಎಕ್ಯೂಐ) ಬುಧವಾರ ಮತ್ತೆ ನಿಯಂತ್ರಿತ ಮಟ್ಟ ಮೀರಿದೆ.
ಮಂಗಳವಾರದಿಂದ ಬುಧವಾರದ ಅವಧಿಯಲ್ಲಿ 426ಕ್ಕೆ ಏರಿಕೆಯಾಗಿದೆ. ಮಂಗಳವಾರ ಈ ಪ್ರಮಾಣ 395 ಆಗಿತ್ತು. ಈ ಎಲ್ಲ ಬೆಳವಣಿಗೆಗಳ ನಡುವೆ ದೆಹಲಿ ಸರ್ಕಾರ ಇತರ ರಾಜ್ಯಗಳಿಂದ ನವದೆಹಲಿಗೆ ಆ್ಯಪ್ ಆಧಾರಿತ ಟ್ಯಾಕ್ಸಿಗಳ ಪ್ರವೇಶ ನಿಷೇಧಿಸಿದೆ ಎಂದು ಪರಿಸರ ಸಚಿವ ಗೋಪಾಲ್ ರಾಯ್ ಹೇಳಿದ್ದಾರೆ.
ಇದಲ್ಲದೆ, ಬಹು ನಿರೀಕ್ಷಿತ ಬೆಸ-ಸಮ ಸಂಖ್ಯೆಗಳ ವಾಹನ ಸಂಚಾರ ನಿಯಮ ಜಾರಿಯನ್ನು ಸದ್ಯಕ್ಕೆ ತಡೆಹಿಡಿದಿರುವುದಾಗಿಯೂ ಅವರು ಹೇಳಿದ್ದಾರೆ. ಶುಕ್ರವಾರ ವಾಯು ಗುಣಮಟ್ಟದ ಬಗ್ಗೆ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ ನಡೆಯಲಿದೆ. ಆ ಸಂದರ್ಭದಲ್ಲಿ ನ್ಯಾಯಪೀಠ ಬೆಸ-ಸಮ ನಿಯಮ ಜಾರಿಯ ಬಗ್ಗೆ ಏನು ಸೂಚಿಸುತ್ತದೆಯೋ ಅದನ್ನು ಅನುಷ್ಠಾನ ಮಾಡಲಾಗುತ್ತದೆ. ನಿಯಮದ ಬಗ್ಗೆ ಹಾರ್ವರ್ಡ್ ಮತ್ತು ಷಿಚಾಗೋ ವಿವಿಗಳು ನಡೆಸಿದ ಎರಡು ಪ್ರತ್ಯೇಕ ಅಧ್ಯಯನಗಳನ್ನೂ ನ್ಯಾಯಪೀಠದ ಮುಂದೆ ಸಲ್ಲಿಸಲಾಗುತ್ತದೆ ಎಂದರು.
ಇಂದಿನಿಂದ ರಜೆ:
ವಾಯು ಮಾಲಿನ್ಯ ಕುಸಿತದ ಹಿನ್ನೆಲೆಯಲ್ಲಿ ಮುಂದಿನ ತಿಂಗಳು ಶಾಲೆಗಳಿಗೆ ನೀಡಬೇಕಾಗಿದ್ದ ಚಳಿಗಾಲದ ರಜೆಯನ್ನು ನ.9ರಿಂದ ನ.18ರ ವರೆಗೆ ನೀಡಲು ದೆಹಲಿ ಸರ್ಕಾರ ತೀರ್ಮಾನಿಸಿದೆ. ಇದೇ ವೇಳೆ, ಹರ್ಯಾಣದ ಹಿಸ್ಸಾರ್ ಜಿಲ್ಲಾಡಳಿತ ತಾಜ್ಯ, ನಿರುಪಯುಕ್ತ ವಸ್ತುಗಳನ್ನು ಸುಡುವುದರ ವಿರುದ್ಧ ನಿಷೇಧ ಹೇರಿ ಆದೇಶ ಹೊರಡಿಸಿದೆ.
ಬಂಗಾಳಕೊಲ್ಲಿಯ ವರೆಗೆ…
ವಾಯು ಗುಣಮಟ್ಟದ ಆತಂಕದ ನಡುವೆ ಅಮೆರಿಕದ ಬಾಹ್ಯಾಕಾಶ ಸಂಸ್ಥೆ, ನಾಸಾ ನೀಡಿದ ಹೊಸ ಫೋಟೋ ಮಾಹಿತಿಯ ಅನ್ವಯ ಪಾಕಿಸ್ತಾನದಿಂದ ಬಂಗಾಳದ ವರೆಗಿನ ಪ್ರದೇಶಗಳು ಸ್ಮಾಗ್ (ಹೊಗೆ ಮತ್ತು ಧೂಳು) ಹೊಂದಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Threat: ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ
Maharashtra poll ; ಕಣದಲ್ಲಿ ಉಳಿದಿದ್ದು 4,140 ಅಭ್ಯರ್ಥಿಗಳು
DMK ನಾಶವೇ ಹೊಸ ಪಕ್ಷದ ಉದ್ದೇಶ: ವಿಜಯ್ ವಿರುದ್ಧ ಸ್ಟಾಲಿನ್ ಕಿಡಿ
WhatsApp ನಲ್ಲಿ ಧರ್ಮ ಆಧರಿತ ಗುಂಪು: ಕೇರಳ ಐಎಎಸ್ ಅಧಿಕಾರಿ ದೂರು
Elephants; ಮಧ್ಯಪ್ರದೇಶ ಬಳಿಕ ಒಡಿಶಾದಲ್ಲಿ 7 ತಿಂಗಳಿನಲ್ಲಿ 50 ಆನೆಗಳ ಸಾವು
MUST WATCH
ಹೊಸ ಸೇರ್ಪಡೆ
MUDA Case: ಸಿಬಿಐ ತನಿಖೆ ಕೋರಿದ್ದ ಅರ್ಜಿ ವಿಚಾರಣೆ ನ.26ಕ್ಕೆ ಮುಂದೂಡಿದ ಹೈಕೋರ್ಟ್
Belagavi: ತಹಶೀಲ್ದಾರ್ ಕೊಠಡಿಯಲ್ಲೇ ಸಿಬ್ಬಂದಿ ನೇಣಿಗೆ ಶರಣು, ಸ್ಥಳದಲ್ಲಿ ಡೆತ್ ನೋಟ್ ಪತ್ತೆ
MUDA Case: ಲೋಕಾಯುಕ್ತ ನೋಟಿಸ್ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಿಎಂ
Mangaluru: ಪರಿಶಿಷ್ಟ ಜಾತಿ ಪಟ್ಟಿಗೆ ಮರುಸೇರ್ಪಡೆ ಆಗ್ರಹಿಸಿ ಕುಡುಬಿ ಸಮಾಜದವರಿಂದ ಜಾಥಾ
Canada: ಹಿಂದೂ ದೇಗುಲದ ಮೇಲೆ ದಾಳಿ-ಖಲಿಸ್ತಾನಿಗಳ ವಿರುದ್ಧ ಸಾವಿರಾರು ಭಾರತೀಯರ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.