10 ಸೂತ್ರ…11 ಜನರ ಸಾಮೂಹಿಕ ಸಾವಿನ ಹಿಂದಿನ ರಹಸ್ಯ ಬಯಲು?
Team Udayavani, Jul 2, 2018, 3:21 PM IST
ನವದೆಹಲಿ: ಆಘಾತಕಾರಿ ಬೆಳವಣಿಗೆಯಲ್ಲಿ ನವದೆಹಲಿಯ ಒಂದೇ ಕುಟುಂಬದ 11 ಮಂದಿಯ ಶವಗಳು ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಸಾಮೂಹಿಕ ಸಾವಿನ ಹಿಂದಿನ ರಹಸ್ಯ ಬಯಲಾಗಿದೆ ಎಂದು ನ್ಯೂಸ್ 18 ವರದಿ ಮಾಡಿದೆ.
ದೆಹಲಿಯ ಬಾಟಿಯ ಕುಟುಂಬದ ಸಾಮೂಹಿಕ ಸಾವಿನ ರಹಸ್ಯ ಬಯಲಾಗಿರುವುದು ಡೈರಿಯಿಂದಾಗಿ!. ಅತೀಯಾದ ದೈವಭಕ್ತಿಯಿಂದ 11 ಮಂದಿಯೂ ಮೋಕ್ಷ ಪಡೆಯಲು ಸಾವಿಗೆ ಶರಣಾಗಿರುವುದಾಗಿ ವರದಿ ತಿಳಿಸಿದೆ.
ಮೋಕ್ಷಕ್ಕಾಗಿ ಸಾಯಲು 10 ಸೂತ್ರಗಳನ್ನು ಡೈರಿಯಲ್ಲಿ ಬರೆಯಲಾಗಿದೆ. ಮಾನವನ ದೇಹ, ಬದುಕು ತಾತ್ಕಾಲಿಕ ಎಂದು ಕೂಡಾ ಉಲ್ಲೇಖಿಸಲಾಗಿದೆ.
ಸಾಮೂಹಿಕ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಜಿನೆಗಾದಿ ಬಾಬಾ ಅವರ ಪ್ರೇರಣೆಯಂತೆ ಸಾಮೂಹಿಕ ಆತ್ಮಹತ್ಯೆಗೆ ಶರಣಾಗಿದ್ದಾರಾ? ಅಥವಾ ಇದೊಂದು ವ್ಯವಸ್ಥಿತ ಕೊಲೆಯೇ ಎಂಬ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿರುವುದಾಗಿ ವರದಿ ತಿಳಿಸಿದೆ.
ಮೋಕ್ಷ ಪಡೆಯಲು ಡೈರಿಯಲ್ಲಿದ್ದ 10 ಸೂತ್ರಗಳು ಯಾವುದು ಗೊತ್ತಾ?
1)ಮೋಕ್ಷದ ಸಾವು ಪಡೆಯಲು ಭಾನುವಾರ ಇಲ್ಲವೇ ಗುರುವಾರ ಆಯ್ಕೆ ಮಾಡಿಕೊಳ್ಳಬೇಕು ಸೂಕ್ತ
2)ಸಾಯುವ ಮುನ್ನ ಬಾಯಿ, ಕಣ್ಣಿಗೆ ಸೀರೆ/ದುಪ್ಪಟ್ಟದಿಂದ ಗಟ್ಟಿಯಾಗಿ ಕಟ್ಟಬೇಕು.
3)ಏಳು ದಿನಗಳೇ ಮೊದಲೇ ಈ ವೃತವನ್ನು ಕಟ್ಟುನಿಟ್ಟಾಗಿ ಆಚರಿಸಬೇಕು
4)ಹತ್ಯೆ ಮಾಡುವಾಗ ವಯಸ್ಸಾದವರು ಇದ್ದರೆ ಅವರನ್ನು ಮಲಗಿಸಿ ಜೀವ ತೆಗೆಯಬೇಕು
5)ಮೋಕ್ಷಕ್ಕಾಗಿ ಹತ್ಯೆ ಮಾಡುವಾಗ ಬೆಳಕು ಹೆಚ್ಚು ಇರಬಾರದು.
6)ಮೋಕ್ಷದ ಹತ್ಯೆಗೆ ಬದ್ಧರಾಗಿರಬೇಕು
7)ಬಾಯಿಗೆ ಬಿಗಿಯಾಗಿ ಬಟ್ಟೆ ಕಟ್ಟಬೇಕು
8)ಎಲ್ಲರ ತಲೆಯಲ್ಲೂ ಇದೇ ಯೋಚನೆ ಇರಬೇಕು.
9)ಕೈಯನ್ನು ಕಟ್ಟಿದ ಮೇಲೆ ಬಟ್ಟೆ ಉಳಿದರೆ ಕಣ್ಣನ್ನೂ ಕಟ್ಟಬೇಕು.
10)ಮಧ್ಯರಾತ್ರಿ 12ರಿಂದ 1ಗಂಟೆಯೊಳಗೆ ಆಗಬೇಕು, ಹೋಮ, ಹವನ ಮಾಡಬೇಕು.
ಘಟನೆಯ ವಿವರ:
ಆಘಾತಕಾರಿ ಬೆಳವಣಿಗೆ ಯಲ್ಲಿ ನವದೆಹಲಿಯ ಒಂದೇ ಕುಟುಂಬದ 11 ಮಂದಿಯ ಶವಗಳು ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು. ಎಲ್ಲರ ಕೈಗಳನ್ನೂ ಹಿಂದಕ್ಕೆ ಕಟ್ಟಿರುವುದಲ್ಲದೇ, ಕಣ್ಣಿಗೂ ಬಟ್ಟೆ ಕಟ್ಟಲಾಗಿದೆ. ಮೊದಲಿಗೆ ಆತ್ಮಹತ್ಯೆ ಎಂದು ಹೇಳಿದ್ದ ದೆಹಲಿ ಪೊಲೀಸರು, ಇದೀಗ ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಮೃತರಲ್ಲಿ ನಾಲ್ವರು ಪುರುಷರು, ಮೂವರು ಮಹಿಳೆಯರು, ನಾಲ್ವರು ಬಾಲಕಿಯರು ಸೇರಿದ್ದಾರೆ. ಒಂಬತ್ತು ಮಂದಿ ಕಿಟಕಿ ಸರಳಿಗೆ ನೇಣು ಹಾಕಿ ಕೊಂಡಿರುವ ಸ್ಥಿತಿಯಲ್ಲಿ, ಒಬ್ಬ ಮಹಿಳೆ ಬಾಗಿಲಿನ ಚಿಲಕಕ್ಕೆ ನೇಣು ಬಿಗಿದು ಕೊಂಡಂತೆ ಹಾಗೂ ಒಬ್ಬ ಮಹಿಳೆಯ ಶವ ನೆಲದ ಮೇಲೆ ಪತ್ತೆಯಾಗಿತ್ತು.
ಇದು ಉತ್ತರ ದೆಹಲಿಯ ಸಂತ್ ನಗರದಲ್ಲಿನ ರಾಜಸ್ಥಾನಿ ಕುಟುಂಬವಾಗಿದ್ದು, ಕಿರಾಣಿ ಮತ್ತು ಪ್ಲೆವುಡ್ ಅಂಗಡಿ ನಡೆಸುತ್ತಿದೆ. ಜತೆಗೆ ಮನೆಯಲ್ಲಿ ಸದ್ಯದಲ್ಲೇ ವಿವಾಹ ಕಾರ್ಯಕ್ರಮವೊಂದನ್ನು ಆಯೋಜಿಸಲು ತಯಾರಿ ನಡೆದಿತ್ತು ಎಂದೂ ಮೂಲಗಳು ತಿಳಿಸಿದ್ದವು.
ಭಾನುವಾರ ಬೆಳಗ್ಗೆ 7.30ರ ವೇಳೆಗೆ ಈ ಘಟನೆ ಬೆಳಕಿಗೆ ಬಂದಿದೆ. ಬೆಳಗ್ಗೆ ಯಾರೂ ಮನೆಯಿಂದ ಹೊರಗೆ ಬರದ ಕಾರಣ ನೆರೆಮನೆಯವರು ಕಿಟಕಿ ಮೂಲಕ ನೋಡಿದಾಗ ವಿಚಾರ ಗೊತ್ತಾಗಿದೆ. ಸದ್ಯಕ್ಕೆ ಇದು ಆತ್ಮಹತ್ಯೆಯೇ ಅಥವಾ ಕೊಲೆಯೇ ಎಂಬ ಬಗ್ಗೆ ನಿರ್ಧಾರಕ್ಕೆ ಬರಲಾಗಿಲ್ಲ ಎಂದು ಪೊಲೀಸರು ಭಾನುವಾರ ತಿಳಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.