ಸರ್ಟಿಫಿಕೇಟ್ ಪಡೆಯದೆ ಕಾರ್ಯಕ್ರಮ ಪ್ರಸಾರ ಕೂಡದು: ನಮೋ ಟಿವಿಗೆ ದಿಲ್ಲಿ ಸಿಇಓ
Team Udayavani, Apr 13, 2019, 11:32 AM IST
ಹೊಸದಿಲ್ಲಿ : ನಮೋ ಟಿವಿಯಲ್ಲಿ ಪ್ರಸಾರವಾಗುವ ಎಲ್ಲ ಮುದ್ರಿತ ಕಾರ್ಯಕ್ರಮಗಳ ಪ್ರಸಾರಕ್ಕೆ ಮೊದಲು ಅವುಗಳಿಗೆ ಸರ್ಟಿಫಿಕೇಟ್ ಪಡೆಯತಕ್ಕದ್ದು ಎಂದು ಚುನಾವಣಾ ಆಯೋಗ ಅಪ್ಪಣೆ ಕೊಡಿಸಿರುವ ಎರಡು ದಿನಗಳ ತರುವಾಯ ದಿಲ್ಲಿ ಚುನಾವಣಾ ಸಂಸ್ಥೆ ನಮೋ ಟಿವಿಯಲ್ಲಿ ಯಾವುದೇ ಮುದ್ರಿತ ಕಾರ್ಯಕ್ರಮಗಳನ್ನು ಪ್ರಸಾರಿಸುವ ಮುನ್ನ ತನ್ನ ಸರ್ಟಿಫಿಕೇಟನ್ನು ಕಡ್ಡಾಯವಾಗಿ ಪಡೆದುಕೊಳ್ಳುವಂತೆ ಬಿಜೆಪಿಗೆ ಆದೇಶಿಸಿದೆ.
ದಿಲ್ಲಿಯ ಚುನಾವಣಾ ವಿಚಕ್ಷಣ ಸಮಿತಿಯಿಂದ ಈ ವರೆಗೆ ಸರ್ಟಿಫಿಕೇಟ್ ಪಡೆಯದಿರುವ ಎಲ್ಲ ಮುದ್ರಿತ ಕಾರ್ಯಕ್ರಮಗಳನ್ನು ತತ್‌ಕ್ಷಣವೇ ತೆಗೆದುಹಾಕಬೇಕು ಎಂದು ದಿಲ್ಲಿ ಚುನಾವಣಾ ಸಂಸ್ಥೆ ಬಿಜೆಪಿಗೆ ಕಟ್ಟುನಿಟ್ಟಾಗಿ ಹೇಳಿದೆ. ನಮೋ ಟಿವಿಯನ್ನು ಬಿಜೆಪಿ ಪ್ರವರ್ತಿಸುತ್ತಿರುವುದರಿಂದ ದಿಲ್ಲಿ ಸಿಇಓ ಆದೇಶಕ್ಕೆ ಅದು ಬದ್ಧವಾಗಿರಬೇಕಾಗಿದೆ.
ಚುನಾವಣಾ ಆಯೋಗದ ನಿರ್ದೇಶದ ಪ್ರಕಾರ ದಿಲ್ಲಿಯ ಮುಖ್ಯ ಚುನಾವಣಾಧಿಕಾರಿ ಬಿಜೆಪಿಗೆ ಪತ್ರ ಬರೆದು ಸರ್ಟಿಫಿಕೇಟ್ ಪಡೆದಿರದ ಎಲ್ಲ ಮುದ್ರಿತ ಕಾರ್ಯಕ್ರಮಗಳನ್ನು ತೆಗೆದು ಹಾಕಬೇಕೆಂದೂ ಇನ್ನು ಮುಂದೆ ಪ್ರಸಾರಿಸಲಾಗುವ ಎಲ್ಲ ಕಾರ್ಯಕ್ರಮಗಳಿಗೆ ಮುಂಚಿತವಾಗಿಯೇ ಸರ್ಟಿಫಿಕೇಟ್ ಪಡೆದುಕೊಳ್ಳಬೇಕೆಂದೂ ಸ್ಪಷ್ಟಪಡಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Srinagar; ಉಗ್ರ ವಿರೋಧಿ ಕಾರ್ಯಾಚರಣೆ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ ಬಿಸ್ಕೆಟ್‌ಗಳು
Sunday Market: ಶ್ರೀನಗರದ ಮಾರುಕಟ್ಟೆ ಬಳಿ ಉಗ್ರರಿಂದ ಗ್ರೆನೇಡ್ ದಾಳಿ… 10 ಮಂದಿಗೆ ಗಾಯ
Jharkhand Polls: ಪ್ರಣಾಳಿಕೆ ಬಿಡುಗಡೆ ಮಾಡಿದ ಬಿಜೆಪಿ… ಸೋರೆನ್ ಸರ್ಕಾರದ ವಿರುದ್ಧ ಕಿಡಿ
Tragedy: ಎಕ್ಸ್‌ಪ್ರೆಸ್ ರೈಲು ಡಿಕ್ಕಿ ಹೊಡೆದು ನಾಲ್ವರು ಪೌರ ಕಾರ್ಮಿಕರ ದುರಂತ ಅಂತ್ಯ
Threat: ಬಾಬಾ ಸಿದ್ದಿಕ್‌ನಂತೆ ನಿಮ್ಮನ್ನೂ ಕೊಲ್ಲುತ್ತೇನೆ… ಸಿಎಂ ಯೋಗಿಗೆ ಬೆದರಿಕೆ ಸಂದೇಶ
MUST WATCH
ಹೊಸ ಸೇರ್ಪಡೆ
Srinagar; ಉಗ್ರ ವಿರೋಧಿ ಕಾರ್ಯಾಚರಣೆ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ ಬಿಸ್ಕೆಟ್‌ಗಳು
Tollywood: ಲೋಕೇಶ್, ಪ್ರಶಾಂತ್ ವರ್ಮಾ ಸಿನಿಮ್ಯಾಟಿಕ್ ಯೂನಿವರ್ಸ್ ಗೆ ಪ್ರಭಾಸ್ ಎಂಟ್ರಿ?
UV Fusion: ಕುಟ್ಟಿ ತೆಯ್ಯಂ ಮಕ್ಕಳ ರೂಪದಲ್ಲಿ ಧೈವ
Sunday Market: ಶ್ರೀನಗರದ ಮಾರುಕಟ್ಟೆ ಬಳಿ ಉಗ್ರರಿಂದ ಗ್ರೆನೇಡ್ ದಾಳಿ… 10 ಮಂದಿಗೆ ಗಾಯ
UV Fusion: ಇತಿಹಾಸದಲ್ಲಿ ಮರೆಯಾದ ಭೈರಾದೇವಿಯ ಸಾಮ್ರಾಜ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.