Delhi; ಕೇಜ್ರಿವಾಲ್ ಗಾಗಿ ಖಾಲಿ ಕುರ್ಚಿ ಇರಿಸಿ ನಿಷ್ಠೆ ತೋರಿಸಿದ ದೆಹಲಿ ಸಿಎಂ ಆತಿಶಿ
ಭರತ ರಾಮನ ಪಾದುಕೆ ಇಟ್ಟಂತೆ ನಾನು ಆಳ್ವಿಕೆ ಮಾಡುತ್ತೇನೆ ಎಂದ ಆತಿಶಿ
Team Udayavani, Sep 23, 2024, 2:25 PM IST
ಹೊಸದಿಲ್ಲಿ: ಎಎಪಿ ನಾಯಕಿ ಅತಿಶಿ (Atishi) ಸೋಮವಾರ ದೆಹಲಿಯ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು. ಸಿಎಂ ಕಚೇರಿಯಲ್ಲಿ ಅವರ ಕುರ್ಚಿಯ ಪಕ್ಕದಲ್ಲಿ ಖಾಲಿ ಕುರ್ಚಿ ಇರಿಸಿ ನಿಕಟಪೂರ್ವ ಸಿಎಂ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರಿಗೆ ನಿಷ್ಠೆ ತೋರಿಸಿದ್ದಾರೆ.
43 ವರ್ಷದ, ದೆಹಲಿಯ ಕಿರಿಯ ಮುಖ್ಯಮಂತ್ರಿ ಆತಿಶಿ ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ತನ್ನನ್ನು ರಾಮಾಯಣ ಮಹಾಕಾವ್ಯದ ಭರತನಿಗೆ ಹೋಲಿಸಿಕೊಂಡರು. ಶ್ರೀರಾಮನ ಅನುಪಸ್ಥಿತಿಯಲ್ಲಿ ಭರತ ಸಿಂಹಾಸನದ ಮೇಲೆ ರಾಮನ ಪಾದುಕೆಯಟ್ಟು ಆಳ್ವಿಕೆ ನಡೆಸಿದ್ದರು.
“ಇಂದು, ನಾನು ಭರತ ಹೊತ್ತ ಅದೇ ಹೊರೆಯನ್ನು ಹೊತ್ತಿದ್ದೇನೆ. ಅವರು ಸಿಂಹಾಸನದ ಮೇಲೆ ಶ್ರೀರಾಮನ ಪಾದುಕೆಯನ್ನಿಟ್ಟು ಆಳ್ವಿಕೆ ಮಾಡಿದಂತೆಯೇ, ಮುಂದಿನ ನಾಲ್ಕು ತಿಂಗಳ ಕಾಲ ನಾನು ಅದೇ ಉತ್ಸಾಹದಿಂದ ದೆಹಲಿಯನ್ನು ಆಳುತ್ತೇನೆ” ಎಂದು ಅತಿಶಿ ಹೇಳಿದರು.
Taking charge as the Chief Minister of Delhi. LIVE https://t.co/AvLpC8u1f6
— Atishi (@AtishiAAP) September 23, 2024
ಮುಂಬರುವ ಚುನಾವಣೆಯಲ್ಲಿ ದೆಹಲಿಯ ಜನರು ಅರವಿಂದ್ ಕೇಜ್ರಿವಾಲ್ ಅವರನ್ನು ಶೀಘ್ರದಲ್ಲೇ ಅಧಿಕಾರಕ್ಕೆ ತರಲಿದ್ದಾರೆ ಎಂದು ಅತಿಶಿ ಹೇಳಿದ್ದಾರೆ.
“ಈ ಕುರ್ಚಿ ಅರವಿಂದ್ ಕೇಜ್ರಿವಾಲ್ ಅವರಿಗೆ ಸೇರಿದ್ದು, ಫೆಬ್ರವರಿ ಚುನಾವಣೆಯಲ್ಲಿ ದೆಹಲಿಯ ಜನರು ಮತ್ತೊಮ್ಮೆ ಅವರನ್ನು ತಮ್ಮ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡುತ್ತಾರೆ ಎಂದು ನನಗೆ ಖಾತ್ರಿಯಿದೆ. ಅಲ್ಲಿಯವರೆಗೆ, ಈ ಕುರ್ಚಿ ಈ ಕಚೇರಿಯಲ್ಲಿ ಉಳಿಯುತ್ತದೆ, ಅವರು ಹಿಂದಿರುಗುವವರೆಗೆ ಕಾಯುತ್ತದೆ” ಎಂದು ದೆಹಲಿ ನೂತನ ಸಿಎಂ ಹೇಳಿದರು.
ಅತಿಶಿ ಅವರು ಕೇಜ್ರಿವಾಲ್ ಸರ್ಕಾರದಲ್ಲಿ ಶಿಕ್ಷಣ, ಆದಾಯ, ಹಣಕಾಸು, ವಿದ್ಯುತ್ ಮತ್ತು ಪಿಡ್ಲ್ಯೂಡಿ ಸೇರಿದಂತೆ 13 ಖಾತೆಗಳನ್ನು ಉಳಿಸಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Old cars ಬಿಕರಿಗೆ ಶೇ.18 ಜಿಎಸ್‌ಟಿ! ; ವಿತ್ತ ಸಚಿವೆ ನೇತೃತ್ವದ ಜಿಎಸ್‌ಟಿ ಸಭೆ ತೀರ್ಮಾನ
Maharashtra; ಫಡ್ನವೀಸ್ ಬಳಿ ಗೃಹ, ಶಿಂಧೆಗೆ ನಗರಾಭಿವೃದ್ಧಿ ಸೇರಿ 3 ಪ್ರಮುಖ ಖಾತೆ!
Mumbai; ಚುನಾವಣೆಗೆ ಏಕಾಂಗಿ ಸ್ಪರ್ಧೆ: ಉದ್ಧವ್ ಶಿವಸೇನೆ ಇಂಗಿತ!
Kota; ಮತ್ತೊಬ್ಬ ವಿದ್ಯಾರ್ಥಿ ಆತ್ಮಹ*ತ್ಯೆ: ವರ್ಷದ 17ನೇ ಕೇಸು
Ambedkar; ಅವಮಾನ ಖಂಡಿಸಿ ಕಾಂಗ್ರೆಸ್ ಆಂದೋಲನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Vijayapura: ವೃಕ್ಷಥಾನ್ ಹೆರಿಟೇಜ್ ರನ್‌ಗೆ ಸ್ಪೀಕರ್ ಯು.ಟಿ.ಖಾದರ್ ಚಾಲನೆ
Sullia: ಬಸ್ ನಿಲ್ದಾಣದಲ್ಲಿ ಮಲಗಿದ್ದ ಪ್ರಯಾಣಿಕನ ಬ್ಯಾಗ್, ಶೂ ಕಳವು
Old cars ಬಿಕರಿಗೆ ಶೇ.18 ಜಿಎಸ್‌ಟಿ! ; ವಿತ್ತ ಸಚಿವೆ ನೇತೃತ್ವದ ಜಿಎಸ್‌ಟಿ ಸಭೆ ತೀರ್ಮಾನ
Maharashtra; ಫಡ್ನವೀಸ್ ಬಳಿ ಗೃಹ, ಶಿಂಧೆಗೆ ನಗರಾಭಿವೃದ್ಧಿ ಸೇರಿ 3 ಪ್ರಮುಖ ಖಾತೆ!
BJP; ಬಣ ರಾಜಕೀಯ ತಪ್ಪಿಸಲು ತೃತೀಯ ಬಣ ಸಭೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.