8 ತಿಂಗಳಲ್ಲಿ 46 ಕೆಜಿ ತೂಕ ಇಳಿಸಿಕೊಂಡ ಪೊಲೀಸ್ ಅಧಿಕಾರಿ!
Team Udayavani, Dec 29, 2022, 7:25 AM IST
ಹೊಸದಿಲ್ಲಿ: ದಿಲ್ಲಿಯ ಪೊಲೀಸ್ ಅಧಿಕಾರಿಯೊಬ್ಬರು ಸೂಕ್ತ ಜೀವನ ಕ್ರಮ, ಆಹಾರ ಪದ್ಧತಿ ಪಾಲನೆ ಮತ್ತು ವ್ಯಾಯಾಮ ದಿಂದ 8 ತಿಂಗಳ ಅವಧಿಯಲ್ಲಿ ಬರೋಬ್ಬರಿ 46 ಕೆಜಿ ತೂಕ ಇಳಿಸಿಕೊಂಡಿದ್ದಾರೆ. ಇದಕ್ಕಾಗಿ ಅವರಿಗೆ ದಿಲ್ಲಿ ಪೊಲೀಸ್ ಆಯುಕ್ತರಿಂದ ಪ್ರಶಂಸೆ ವ್ಯಕ್ತವಾಗಿದೆ.
ಡಿಸಿಪಿ ಜಿತೇಂದ್ರ ಮಣಿ ಅವರ 130 ಕೆಜಿ ತೂಕವಿದ್ದರು. ಜತೆಗೆ ಮಧುಮೇಹ, ಅತಿ ರಕ್ತದೊತ್ತಡ ಮತ್ತು ಅಧಿಕ ಕೊಲೆಸ್ಟ್ರಾಲ್ ಕಾರಣ ದಿಂದ ಬಳಲುತ್ತಿದ್ದರು.
ಜೀವನದಲ್ಲಿ ಬದಲಾವಣೆ ಬಯಸಿದ ಅವರು, ಜೀವನ ಕ್ರಮ ದಲ್ಲಿ ಸಂಪೂರ್ಣ ಶಿಸ್ತು ಪಾಲಿಸಿ ದರು. ಎಂಟು ತಿಂಗಳ ಕಾಲ ಪ್ರತೀ ದಿನ 15,000 ಮೆಟ್ಟಿಲುಗಳನ್ನು ಹತ್ತುವುದು – ಇಳಿಯುವುದು ಮಾಡಿದರು. ಚಪಾತಿ, ಅನ್ನ ತಿನ್ನುವ ಬದಲಾಗಿ ಸೂಪ್, ತರಕಾರಿ, ಹಣ್ಣುಗಳನ್ನು ತಿನ್ನಲು ಆರಂಭಿಸಿದರು. ಈ ನಿಯಮಗಳ ಕಠಿನ ಪಾಲನೆಯಿಂದಾಗಿ ಎಂಟು ತಿಂಗಳಲ್ಲಿ ಅವರ ಸೊಂಟದ ಸುತ್ತಳತೆ 12 ಇಂಚು ಕಡಿಮೆಯಾಯಿತು. ಈಗ ಅವರು 84 ಕೆಜಿ ತೂಕವಿದ್ದಾರೆ. ಈ ಕಾರ್ಯಕ್ಕೆ ಜಿತೇಂದ್ರ ಅವರನ್ನು ದಿಲ್ಲಿ ಪೊಲೀಸ್ ಆಯುಕ್ತರು ಪ್ರಶಂಸಾ ಪತ್ರ ನೀಡಿ ಗೌರವಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
New Delhi: 5ಜಿ ಸೇವೆಗಾಗಿ ಬಿಎಸ್‌ಎನ್ಎಲ್‌ನಿಂದ ಟೆಂಡರ್ ಆಹ್ವಾನ
J&K: ವಾಜಪೇಯಿ ಬದುಕಿದ್ದರೆ ಜಮ್ಮು ಕಾಶ್ಮೀರ ಕೇಂದ್ರಾಡಳಿತ ಪ್ರದೇಶವಾಗುತ್ತಿರಲಿಲ್ಲ: ಒಮರ್
Session:ನ.25- ಡಿ.20- ಸಂಸತ್ ಚಳಿಗಾಲದ ಅಧಿವೇಶನ;ಒಂದು ದೇಶ, ಒಂದು ಚುನಾವಣೆ ಮಸೂದೆ ಮಂಡನೆ?
DGP: ಮಹಾರಾಷ್ಟ್ರದ ನೂತನ ಡಿಜಿಪಿ ಆಗಿ ಐಪಿಎಸ್ ಅಧಿಕಾರಿ ಸಂಜಯ್ ವರ್ಮಾ ನೇಮಕ
Threat: ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ
MUST WATCH
ಹೊಸ ಸೇರ್ಪಡೆ
Davanagere: ಇನ್ಶೂರೆನ್ಸ್ ಹಣಕ್ಕಾಗಿ ಸಂಬಂಧಿಯ ಕೊಲೆ; 24 ಗಂಟೆಯೊಳಗೆ ನಾಲ್ವರ ಬಂಧನ
Udupi: ನ. 9-11ರ ವರೆಗೆ 3 ದಿನಗಳ ಹರಿದಾಸ ಸಾಹಿತ್ಯ ಅಂತಾರಾಷ್ಟ್ರೀಯ ಸಮ್ಮೇಳನ
Commonwealth ಸಂಸದೀಯ ಸಭೆ; ಸ್ಪೀಕರ್ ಯು.ಟಿ. ಖಾದರ್ ಭಾಗಿ
Salman Khan: ಕ್ಷಮೆ ಕೇಳಿ ಇಲ್ಲವೇ 5 ಕೋಟಿ ಕೊಡಿ: ನಟ ಸಲ್ಮಾನ್‌ಗೆ ಮತ್ತೂಂದು ಬೆದರಿಕೆ
Mangaluru: ಎಡನೀರು ಶ್ರೀಗಳ ಕಾರಿನ ಮೇಲೆ ದಾಳಿ ಖಂಡನೀಯ; ಪುಂಡರ ತಕ್ಷಣವೇ ಬಂಧಿಸಿ: ಕ್ಯಾ.ಚೌಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.