ಟ್ಯಾಕ್ಸ್ ಏಜೆಂಟ್ ನನ್ನು ಕಿಡ್ನಾಪ್ ಮಾಡಿದ ಪೊಲೀಸರು 1.5 ಲಕ್ಷ ಸುಲಿಗೆ ಮಾಡಿದರು!
Team Udayavani, Oct 16, 2022, 1:37 PM IST
ಹೊಸದಿಲ್ಲಿ: ಸೇಲ್ಸ್ ಟ್ಯಾಕ್ಸ್ ಏಜೆಂಟ್ ನನ್ನು ಅಪಹರಿಸಿ 1.5 ಲಕ್ಷ ಸುಲಿಗೆ ಮಾಡಿದ ಆರೋಪದ ಮೇಲೆ ದೆಹಲಿಯ ಇಬ್ಬರು ಪೊಲೀಸರನ್ನು ಬಂಧಿಸಲಾಗಿದೆ.
ದೆಹಲಿಯ ಮೂವರು ಪೊಲೀಸರು ಶನಿವಾರ ಶಾಹದಾರದ ಜಿಟಿಬಿ ಎನ್‌ಕ್ಲೇವ್‌ನಿಂದ ವ್ಯಕ್ತಿಯೊಬ್ಬನನ್ನು ಅಪಹರಿಸಿ, ಹಣ ನೀಡದಿದ್ದರೆ ಸುಳ್ಳು ಪ್ರಕರಣದಲ್ಲಿ ಸಿಲುಕಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ಅಲ್ಲದೆ ಪೊಲೀಸರು ಆತನಿಗೆ ಥಳಿಸಿದ್ದಾರೆ ಎಂದು ಹೇಳಲಾಗಿದೆ.
1.5 ಲಕ್ಷ ರೂ. ಹಣ ಪಡೆದ ನಂತರ ಆರೋಪಿಗಳು ಆತನನ್ನು ಬಿಡುಗಡೆ ಮಾಡಿದ್ದಾರೆ. ಬಳಿಕ ಆತ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ತನಿಖೆ ನಡೆಸಿದ ಜಿಟಿಬಿ ಎನ್ಕ್ಲೇವ್ ಪೊಲೀಸರು, ಆರೋಪಿ ಪೊಲೀಸರ ವಿರುದ್ಧ ಅಪಹರಣ ಮತ್ತು ಸುಲಿಗೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಶನಿವಾರ ಸಂಜೆ ಸೀಮಾಪುರಿ ಪೊಲೀಸ್ ಠಾಣೆಯ ಇಬ್ಬರು ಕಾನ್‌ಸ್ಟೆಬಲ್‌ಗಳಾದ ಸಂದೀಪ್ ಮತ್ತು ರಾಬಿನ್ ಹಾಗೂ ವಾಹಿದ್ ಎಂಬ ಇನ್ನೊಬ್ಬ ವ್ಯಕ್ತಿಯನ್ನು ಈ ಪ್ರಕರಣದಲ್ಲಿ ಬಂಧಿಸಿದ್ದಾರೆ. ಇನ್ನೋರ್ವ ಕಾನ್‌ಸ್ಟೆಬಲ್ ಅಮಿತ್ ಮತ್ತು ಸೀಮಾಪುರಿಯ ವಂಚಕ ಗೌರವ್ ಅಲಿಯಾಸ್ ಅಣ್ಣಾ ಪರಾರಿಯಾಗಿದ್ದಾರೆ.
ಸಂತ್ರಸ್ತ ವ್ಯಕ್ತಿ ತನ್ನ ಕುಟುಂಬದೊಂದಿಗೆ ಜಿಟಿಬಿ ಎನ್‌ಕ್ಲೇವ್‌ನಲ್ಲಿ ವಾಸಿಸುತ್ತಿದ್ದರು. ಆದಾಯ ತೆರಿಗೆ ಇಲಾಖೆ ಕಚೇರಿಯಲ್ಲಿ ಮಾರಾಟ ತೆರಿಗೆ ಏಜೆಂಟ್ ಆಗಿ ಕೆಲಸ ಮಾಡುವ. ಅವರು ಅ.11 ರ ರಾತ್ರಿ ತಮ್ಮ ಕಾರಿನಲ್ಲಿ ಮನೆಗೆ ಹಿಂದಿರುಗುತ್ತಿದ್ದರು. ಶಹದಾರಾ ಮೇಲ್ಸೇತುವೆಯನ್ನು ದಾಟಿದಾಗ, ಬಿಳಿ ಬಣ್ಣದ ಕಾರು ಅವರನ್ನು ಅಡ್ಡ ಹಾಕಿತು. ವಾಹನದಲ್ಲಿ ಮೂವರಿದ್ದರು ಎಂದು ಆತ ದೂರಿನಲ್ಲಿ ಹೇಳಿದ್ದು, ಆರೋಪಿಗಳು ಥಳಿಸಿದ್ದಾರೆ. ನಂತರ ಆರೋಪಿಗಳು ಆತನನ್ನು ತನ್ನ ಕಾರಿನ ಹಿಂದಿನ ಸೀಟಿನಲ್ಲಿ ಕುಳಿತುಕೊಳ್ಳುವಂತೆ ಸೂಚಿಸಿದರು.
ತಾವು ಅಪರಾಧ ವಿಭಾಗದವರು ಎಂದು ಪೊಲೀಸರಲ್ಲಿ ಒಬ್ಬರು ಹೇಳಿದರು. ಮತ್ತೊಬ್ಬ ಆರೋಪಿ ತನ್ನ ಎದೆಯ ಮೇಲೆ ಪಿಸ್ತೂಲ್ ಎಳೆದುಕೊಂಡು ಜೇಬಿನಲ್ಲಿಟ್ಟಿದ್ದ 35 ಸಾವಿರವನ್ನು ಹೊರತೆಗೆದಿದ್ದಾನೆ. ನಂತರ ಅವರು ಐದು ಲಕ್ಷಕ್ಕೆ ಬೇಡಿಕೆಯಿಟ್ಟಿದ್ದರು. ನಂತರ ಅವರನ್ನು ಶಹದಾರ ಜಿಲ್ಲೆಯ ವಿಶೇಷ ಸಿಬ್ಬಂದಿಯ ಕಚೇರಿಗೆ ಕರೆದೊಯ್ಯಲಾಯಿತು ಎಂದು ದೂರಿನಲ್ಲಿ ಹೇಳಿದ್ದಾರೆ.
ಇದನ್ನೂ ಓದಿ:ಲಂಕಾಗೆ ಆಘಾತ: ಟಿ20 ವಿಶ್ವಕಪ್ ಆರಂಭಿಕ ಪಂದ್ಯದಲ್ಲೇ ನಮೀಬಿಯಾ ವಿರುದ್ಧ ಸೋಲು
ಅಲ್ಲಿ ಅಧಿಕಾರಿಯೊಂದಿಗೆ ಮಾತನಾಡಿದ ಬಳಿಕ ಆರೋಪಿಗಳು ಅವರನ್ನು ಬಲವಂತವಾಗಿ ಮತ್ತೆ ಕಾರಿನಲ್ಲಿ ಕೂರಿಸಿದ್ದಾರೆ. ಆತನಿಗೆ ವೈದ್ಯಕೀಯ ಚಿಕಿತ್ಸೆ ಕೊಡಿಸುವುದಾಗಿ ಹೇಳಿಕೊಂಡು ಆರೋಪಿಗಳು ಸಂತ್ರಸ್ತನನ್ನು ಜಿಟಿಬಿ ಆಸ್ಪತ್ರೆಯ ಸರ್ವೀಸ್ ಲೇನ್ ಗೆ ಕರೆದೊಯ್ದಿದ್ದಾರೆ. ಅಲ್ಲಿ ಮತ್ತೆ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.
ನಂತರ ಸಂತ್ರಸ್ತ ವ್ಯಕ್ತಿ ಆರೋಪಿಗಳನ್ನು ಆತನ ಮನೆಗೆ ಕರೆದೊಯ್ದು ಸುಮಾರು 50,000 ರೂ ಹಣ ನೀಡಿದ್ದಾರೆ. ಸ್ನೇಹಿತನಿಂದ ಸಾಲ ಪಡೆದು ಸುಮಾರು 70 ಸಾವಿರ ರೂ ಹಣವನ್ನು ಗೌರವ್ ಅಲಿಯಾಸ್ ಅಣ್ಣ ಎಂಬಾತನ ಪತ್ನಿ ಖಾತೆಗೆ ವರ್ಗಾಯಿಸಿದ್ದಾನೆ. ಆ ಬಳಿಕ ಆರೋಪಿಗಳು ಆತನನ್ನು ಬಿಡುಗಡೆ ಮಾಡಿದರು.
ತನಿಖೆಯ ವೇಳೆ 6ನೇ ಬೆಟಾಲಿಯನ್‌ನಲ್ಲಿರುವ ಕಾನ್‌ಸ್ಟೆಬಲ್ ಅಮಿತ್ ಈ ಸಂಪೂರ್ಣ ಸಂಚು ರೂಪಿಸಿರುವುದು ಪತ್ತೆಯಾಗಿದೆ. ಆರೋಪಿ ವಾಹಿದ್ ಕಾರನ್ನು ಬಳಸಿಕೊಂಡಿದ್ದು, ಗೌರವ್ ಕೂಡ ಅಪರಾಧಕ್ಕೆ ಸೇರಿಕೊಂಡಿದ್ದಾನೆ. ಇದರಲ್ಲಿ ಒಬ್ಬ ಸಬ್ ಇನ್ಸ್ ಪೆಕ್ಟರ್ ಕೂಡ ಭಾಗಿಯಾಗಿರುವ ಶಂಕೆ ಇದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jammu – Kashmir: ಮುಂದುವರೆದ ಉಗ್ರರ ದಾಳಿ… ಇಬ್ಬರು ವಲಸೆ ಕಾರ್ಮಿಕರಿಗೆ ಗಾಯ
Congress ಬಣ್ಣ ಕೆಟ್ಟದಾಗಿ ಬಹಿರಂಗವಾಗಿದೆ: ಖರ್ಗೆ ಹೇಳಿಕೆ ಕುರಿತು ಪ್ರಧಾನಿ ಮೋದಿ ಲೇವಡಿ
Delhi pollution; ಹಾಳಾದ ರಸ್ತೆಗಳನ್ನು ಸರಿಪಡಿಸುವಲ್ಲಿ ಆಪ್ ವಿಫಲ: ಬಿಜೆಪಿ ವಾಗ್ದಾಳಿ
Poll promises; ಖರ್ಗೆ, ರಾಹುಲ್ ಗಾಂಧಿ ಕ್ಷಮೆಗೆ ಒತ್ತಾಯಿಸಿದ ಬಿಜೆಪಿ
Kakinada: ಹಳೆ ವೈಷಮ್ಯ; ಒಂದೇ ಕುಟುಂಬದ ಮೂವರ ಹ*ತ್ಯೆ
MUST WATCH
ಹೊಸ ಸೇರ್ಪಡೆ
Online Trading: ಆನ್‌ಲೈನ್ ಲಿಂಕ್ ಅಪ್ಲಿಕೇಶನ್ ಬಳಸಿ 27 ಲಕ್ಷ ರೂ. ಕಳೆದುಕೊಂಡ ವ್ಯಕ್ತಿ
Panambur: ಬೀಚ್ ಬಳಿ ನಿಲ್ಲಿಸಿದ್ದ ಕಾರಿನಿಂದ ಚಿನ್ನಾಭರಣ, ನಗದು ಕಳವು
India A vs Australia A: ಸುದರ್ಶನ್ 96, ಪಡಿಕ್ಕಲ್ 80, ಆಸೀಸ್‌ಗೆ ಭಾರತ ತಿರುಗೇಟು
Jammu – Kashmir: ಮುಂದುವರೆದ ಉಗ್ರರ ದಾಳಿ… ಇಬ್ಬರು ವಲಸೆ ಕಾರ್ಮಿಕರಿಗೆ ಗಾಯ
BJP ಸ್ನೇಹಿತರಿಗೆ ಕೈ ಜೋಡಿಸಿ ಮನವಿ ಮಾಡಿಕೊಳ್ಳುವೆ, ದಾರಿ ತಪ್ಪಿಸಬೇಡಿ: ಜಮೀರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.