ಸಿಡಿದೆದ್ದ ರೈತರ ಜತೆ ಇಂದು ಸಭೆ; ಕೇಂದ್ರ ಹಿರಿಯ ಸಚಿವರ ನಿಯೋಗ ಸಂಧಾನ
Team Udayavani, Dec 3, 2020, 6:20 AM IST
ಹೊಸದಿಲ್ಲಿ: ಮೂರು ಕೃಷಿ ಕಾಯ್ದೆಗಳ ವಿರುದ್ಧ ಮುನಿದು, ರಾಜಧಾನಿ ಮುತ್ತಿಕ್ಕಿರುವ ರೈತ ಸಂಘಟನೆಗಳ ಜತೆ ಕೇಂದ್ರ ಸರಕಾರ ಅಧಿಕೃತವಾಗಿ ಗುರು ವಾರ ಮಾತುಕತೆಗೆ ಕೂರಲಿದೆ. ಕೇಂದ್ರ ರಕ್ಷಣ ಸಚಿವ ರಾಜನಾಥ್ ಸಿಂಗ್, ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ರೈಲ್ವೆ ಸಚಿವ ಪಿಯೂಷ್ ಗೋಯಲ್ ಪ್ರಧಾನ ವಾಗಿ ರೈತಮುಖಂಡರ ಜತೆ ಚರ್ಚೆ ನಡೆಸುವ ಸಾಧ್ಯತೆ ಇದೆ.
ಪರಿಷ್ಕರಣೆ ಆಗುತ್ತಾ?: ನೂತನ ಕೃಷಿ ಕಾಯ್ದೆಯ ಎಲ್ಲ ಅಂಶಗಳಿಗೆ ಸರಕಾರ ಬದ್ಧ ವಾಗಿದ್ದರೂ, ರೈತರಿಗೆ ಕಳವಳ ಹುಟ್ಟಿಸಿದಂಥ ಕೆಲವು ಅಂಶಗಳನ್ನು ಪರಿಷ್ಕರಿಸಬೇಕೇ ಎಂದು ಚರ್ಚಿಸಲು ಹಾಗೂ ರೈತರ ಆಕ್ರೋಶ ತಣ್ಣಗಾಗಿಸುವ ಸಂಬಂಧ ಬುಧ ವಾರ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ಈ ಮೇಲಿನ ಸಚಿವರು ಸಭೆ ನಡೆಸಿದ್ದರು. ಗುರುವಾರದ ಮಾತುಕತೆಯಲ್ಲಿ ಸರಕಾರ ಯಾವ ನಿಲುವು ತಾಳಬೇಕು ಎಂಬುದರ ಕುರಿತೂ ಶಾ ತಿಳಿಸಿದ್ದಾರೆ ಎನ್ನಲಾಗಿದೆ.
ಬುಧವಾರ ನಡೆದಿದ್ದ 35 ರೈತ ಮುಖಂಡ ರೊಂದಿಗೆ ವಿಜ್ಞಾನ ಭವನದಲ್ಲಿ ನಡೆದ ಮಾತುಕತೆ ಅಪೂರ್ಣಗೊಂಡ ಹಿನ್ನೆಲೆಯಲ್ಲಿ ಗುರುವಾರದ ಮಾತುಕತೆ ಮಹತ್ವ ಪಡೆದಿದೆ.
“ಕೈ’ ಮೇಲೆ ಜಲಫಿರಂಗಿ: ರೈತರಿಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿ ಹರ್ಯಾಣ ಸಿಎಂ ಮನೋಹರ ಲಾಲ್ ಖಟ್ಟರ್ ನಿವಾಸದ ಮುಂದೆ ಪ್ರತಿಭಟಿಸುತ್ತಿದ್ದ ಪಂಜಾಬ್ ಯುವ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಪೊಲೀಸರು ಬುಧವಾರ ಜಲಫಿರಂಗಿ ನಡೆಸಿದರು. ಬ್ಯಾರಿಕೇಡ್ ತಳ್ಳಿಹಾಕಿ, ಸಿಎಂ ನಿವಾಸಕ್ಕೆ ಮುನ್ನುಗ್ಗಲೆತ್ನಿಸಿದ್ದ ಹಲವು ಕಾರ್ಯಕರ್ತರನ್ನು ಬಂಧಿಸಲಾಗಿದೆ.
ಪ್ರತ್ಯೇಕ “ಅಧಿವೇಶನ’ ಕೂಗು: ನೂತನ ಕೃಷಿ ಕಾಯ್ದೆಗಳ ಚರ್ಚೆಗೆ ಕೇಂದ್ರ ಸರಕಾರ ಪ್ರತ್ಯೇಕ ಸಂಸತ್ ಅಧಿವೇಶನ ಕರೆಯುವಂತೆ ಕ್ರಾಂತಿಕಾರಿ ಕಿಸಾನ್ ಒಕ್ಕೂಟ ಅಧ್ಯಕ್ಷ ದರ್ಶನ್ ಪಾಲ್ ಪಟ್ಟುಹಿಡಿದಿದ್ದಾರೆ. ಒಂದು ವೇಳೆ ತಮ್ಮ ಬೇಡಿಕೆ ಈಡೇರದಿದ್ದರೆ ರಾಜಧಾನಿಯ ಇತರೆ ಪ್ರಮುಖ ರಸ್ತೆಗಳನ್ನೂ ಬಂದ್ ಮಾಡುತ್ತೇವೆ ಎಂದೂ ಎಚ್ಚರಿಸಿದ್ದಾರೆ.
ಇವನಲ್ಲಿ, ಅವಳಿಲ್ಲಿ… ಮದುವೆ ಎಲ್ಲಿ?
ಆತ ದಿಲ್ಲಿಯಲ್ಲಿದ್ದಾನೆ. ಈಕೆ ಪಂಜಾಬ್‌ನಲ್ಲಿದ್ದಾಳೆ. ಡಿಸೆಂಬರ್ 6ಕ್ಕೆ ಪಂಜಾಬ್‌ನ ಭಾಟಿಂಡಾದಲ್ಲಿ ಮದುವೆ ಸಮಾರಂಭಕ್ಕೆ ಭರ್ಜರಿ ತಯಾರಿ ನಡೆದಿದೆ. ಆದರೆ, ವರನಿಗೆ ವಿವಾಹ ಮಂಟಪವನ್ನು ಮುಂಚಿತವಾಗಿ ಸೇರಲು ಹಾದಿಗಳೇ ಸಿಗುತ್ತಿಲ್ಲ! ರೈತರ “ದಿಲ್ಲಿ ಚಲೋ’ ಎಫೆಕ್ಟ್ ಇದು. ರಾಜಧಾನಿಯ ಪ್ರಮುಖ ಗಡಿರಸ್ತೆಗಳು ಬಂದ್ ಆಗಿರುವ ಕಾರಣ, 300 ಕಿ.ಮೀ.ನ ಗುರಿ ಮುಟ್ಟಲೂ, ದಿಲ್ಲಿಯ ರಜೌರಿ ಗಾರ್ಡನ್‌ನಲ್ಲಿರುವ ವರನ ಕಡೆಯವರಿಗೆ ಸಾಧ್ಯವಾಗುತ್ತಿಲ್ಲ. “ದಿಲ್ಲಿಯಿಂದ ಬುಧವಾರ ಹೊರಡಲು ಯೋಜಿಸಿದ್ದೆವು. ಆದರೆ ಸಾಧ್ಯವಾಗಲಿಲ್ಲ. ಅಲ್ಲದೆ, ಪಂಜಾಬ್ ಸರಕಾರ ರಾತ್ರಿ ಕರ್ಫ್ಯೂ ಜಾರಿಮಾಡಿರುವುದು ಮತ್ತಷ್ಟು ತೊಡಕಾಗಿದೆ’ ಎಂದು ವರನ ಕಡೆಯ ವರು ಗೋಳಿಡುತ್ತಿದ್ದಾರೆ.
ದಿಲ್ಲಿ ಸಮೀಪದ ಶಿಂಘೂ ಗಡಿಯಲ್ಲಿ ರೈತರಿಂದ ಬುಧವಾರ ಪ್ರತಿಭಟನೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Notice: ಈ ಆಹಾರ ಪದ್ಧತಿಯಿಂದಲೇ ಪತ್ನಿಯ ಕ್ಯಾನ್ಸರ್ ಗುಣವಾಯಿತೆಂದ ಸಿಕ್ಸರ್ ಸಿಧುಗೆ ನೋಟಿಸ್
Champions Trophy; ಭಾರತ ತಂಡ ಪಾಕಿಸ್ಥಾನಕ್ಕೆ ತೆರಳುವುದು ಅಸಂಭವ: ದೃಢಪಡಿಸಿದ MEA
PM Modi ಭೇಟಿಯಾಗಿ ವಿಶೇಷ ಮನವಿ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ
Maharashtra: ಬೈಕ್ ಸವಾರನನ್ನು ತಪ್ಪಿಸಲು ಹೋಗಿ ಬಸ್ ಪಲ್ಟಿ… 10 ಮಂದಿ ಮೃತ್ಯು
Karnataka ಸೇರಿ 4ರಾಜ್ಯಗಳಿಗೆ ಬೇಕಿದ್ದ ಹಂತಕ ಅರೆಸ್ಟ್, 2000 CCTV ಪರಿಶೀಲಿಸಿದ್ದ ಪೊಲೀಸರು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.