ಹೊಸ ವರ್ಷದ ಪಾರ್ಟಿ: ಮಾಜಿ ಶಾಸಕ ಹಾರಿಸಿದ ಗುಂಡಿಗೆ ಮಹಿಳೆ ಗಂಭೀರ
Team Udayavani, Jan 2, 2019, 5:48 AM IST
ಹೊಸದಿಲ್ಲಿ : ಇಲ್ಲಿನ ಫಾರ್ಮ್ ಹೌಸ್ ನಲ್ಲಿ ನಡೆದ ಹೊಸ ವರ್ಷಾಚರಣೆಯ ಪಾರ್ಟಿಯಲ್ಲಿ ಮಾಜಿ ಜೆಡಿಯು ಶಾಸಕ ರಾಜು ಸಿಂಗ್, ಮಧ್ಯರಾತ್ರಿ ಸಂಭ್ರಮೋಲ್ಲಾಸದ ಪ್ರತೀಕವಾಗಿ ಹಾರಿಸಿದ ಗುಂಡಿಗೆ ಓರ್ವ ಮಹಿಳೆ ಗಂಭೀರವಾಗಿ ಗಾಯಗೊಂಡ ಘಟನೆ ವರದಿಯಾಗಿದೆ.
ಡಿ.31ರ ಸಂಜೆ ಹೊಸ ವರ್ಷಾಚರಣೆಯ ಪ್ರಯುಕ್ತ ಮಹಿಳೆ ಅರ್ಚನಾ ಮತ್ತು ಆಕೆಯ ಪತಿ ವಿಕಾಸ್ ಗುಪ್ತಾ ಅವರು ತಮ್ಮ ಇತರ ಕೆಲವು ಸ್ನೇಹಿತರೊಂದಿಗೆ ಮಾಜಿ ಜೆಡಿಯು ಶಾಸಕ ರಾಜು ಸಿಂಗ್ ಅವರ ಫಾರ್ಮ್ ಹೌಸಿಗೆ ಹೋಗಿದ್ದರು. ಮಾಜಿ ಶಾಸಕ ರಾಜು ಸಿಂಗ್ ಮತ್ತು ವಿಕಾಸ್ ಗುಪ್ತಾ ದೋಸ್ತಿಗಳು.
ಹೊಸ ವರ್ಷಕ್ಕೆ ಸ್ವಾಗತ ಕೋರುವ ಸಂಭ್ರಮೋಲ್ಲಾಸದಲ್ಲಿ ಮಧ್ಯ ರಾತ್ರಿ ಹೊತ್ತಿಗೆ ರಾಜು ಸಿಂಗ್ ಅವರು ತಮ್ಮ ಬಂದೂಕಿನಿಂದ ಎರಡು ಸುತ್ತು ಗುಂಡು ಹಾರಿಸಿದ್ದರು.
ರಾಜು ಹೊಡೆದ ಗುಂಡು ಅರ್ಚನಾ ಅವರ ತಲೆಗೆ ಬಡಿಯಿತು. ಅರ್ಚನಾ ಅವರು ನೆಲಕ್ಕುರುಳಿ ರಕ್ತದ ಮಡುವಿಗೆ ಬಿದ್ದರು. ಒಡನೆಯೇ ಆಕೆಯನ್ನು ವಸಂತ್ ಕುಂಜ್‌ನಲ್ಲಿನ ಫೋರ್ಟಿಸ್ ಆಸ್ಪತ್ರೆಗೆ ಒಯ್ಯಲಾಯಿತು. ಆಕೆಯ ಪರಿಸ್ಥಿತಿ ಈಗಲೂ ಗಂಭೀರವಾಗಿದೆ ಎಂದು ವೈದ್ಯರು ಹೇಳಿದರು.
ಅರ್ಚನಾ ಅವರ ಪತಿ ವಿಕಾಸ್ ಘಟನೆಯ ಬಗ್ಗೆ ಪೊಲೀಸರಲ್ಲಿ ದೂರು ದಾಖಲಿಸಿದರು. ಇಷ್ಟಾಗುವಾಗ ರಾಜು ಭೂಗತರಾದರು. ಪೊಲೀಸರು ಈಗ ಆತನನ್ನು ಹುಡುಕಾಡುತ್ತಿದ್ದಾರೆ. ಪಾರ್ಟಿಯಲ್ಲಿ ಬಹಳಷ್ಟು ಮಂದಿ ಅತಿಥಿಗಳಿದ್ದರೂ ಅವರಲ್ಲಿ ಯಾರೊಬ್ಬರೂ ಘಟನೆಯ ಬಗ್ಗೆ ಪ್ರತ್ಯಕ್ಷದರ್ಶಿ ವಿವರ ನೀಡಲು ಮುಂದಾಗಿಲ್ಲ.
ಎಎನ್‌ಐ ತಾಜಾ ವರದಿಯ ಪ್ರಕಾರ ಪೊಲೀಸರು ಸ್ಥಳದಲ್ಲಿ ಎರಡು ರೈಫಲ್‌ಗಳನ್ನು ಮತ್ತು 800 ಸುತ್ತು ಬುಲೆಟ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ತನಿಖೆ ನಡೆಯುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು
Ambedkar row: ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜಕೀಯ ಬಿಟ್ಟು ಹೋಗಲಿ ಎಂದ ಲಾಲು ಪ್ರಸಾದ್
ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಪೊಲೀಸರು, ಎಲ್ಲಿ…? ಇಲ್ಲಿದೆ ನೋಡಿ ಮಾಹಿತಿ
K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!
MUST WATCH
ಹೊಸ ಸೇರ್ಪಡೆ
BBK11: ಕೊನೆಗೂ ಬಿಗ್ ಬಾಸ್ ಬಿಟ್ಟು ಬಂದಿದ್ದಕ್ಕೆ ಕಾರಣ ಬಹಿರಂಗಪಡಿಸಿದ ಗೋಲ್ಡ್ ಸುರೇಶ್
ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು
Belthangady: ಕುತ್ಲೂರು ನಿವಾಸಿಗಳ ಕೂಗು ಅರಣ್ಯರೋದನ!
Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್
Warner-Ashwin; 2024ರಲ್ಲಿ ವಿದಾಯ ಹೇಳಿದ್ದು ಬರೋಬ್ಬರಿ 28 ಕ್ರಿಕೆಟಿಗರು; ಇಲ್ಲಿದೆ ಪಟ್ಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.