ದಿಲ್ಲಿಗೆ ಬಂತು ಗಾಳಿ ಶುದ್ಧೀಕರಣ ಟವರ್
Team Udayavani, Jan 3, 2020, 7:46 PM IST
ನವದೆಹಲಿ: ಗ್ಯಾಸ್ ಚೇಂಬರ್‌ನಂತಾಗಿರುವ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಗಾಳಿ ಶುದ್ಧೀಕರಣಕ್ಕೆ ಇದೇ ಮೊದಲ ಬಾರಿಗೆ ಟವರ್ ನಿರ್ಮಿಸಲಾಗಿದೆ.
ಲಜಪತ್ ನಗರದ ಕೇಂದ್ರೀಯ ಮಾರುಕಟ್ಟೆಯಲ್ಲಿ 7 ಲಕ್ಷ ರೂ. ವೆಚ್ಚದ 20 ಅಡಿ ಎತ್ತರವಿರುವ ಗಾಳಿ ಶುದ್ಧೀಕರಣ ಟವರ್ ಸ್ಥಾಪಿಸಲಾಗಿದೆ.
ಜನನಿಬಿಡ ಪ್ರದೇಶ ಇದಾಗಿದ್ದು, ನಿತ್ಯ 15 ಸಾವಿರ ಮಂದಿ ಇಲ್ಲಿ ಸಂಚರಿಸುತ್ತಾರೆ. ಲಜಪತ್ ನಗರದ ವರ್ತಕರ ಸಂಘವು ಸಂಸದ ಗೌತಮ್ ಗಂಭೀರ್ ಸಹಕಾರದೊಂದಿಗೆ ಈ ಟವರ್ ಅಳವಡಿಸಿದೆ. ಈ ಟವರ್ ನಿರ್ವಹಣೆಗೆ ವಾರ್ಷಿಕ 30 ಸಾವಿರ ರೂ. ಆಗಲಿದ್ದು, ವರ್ತಕರ ಸಂಘವು ಈ ವೆಚ್ಚವನ್ನು ಭರಿಸಲಿದೆ. ಗಾಳಿ ಗುಣಮಟ್ಟ ಸೂಚ್ಯಂಕ ಪ್ರಕಾರ, ಈ ಪ್ರದೇಶದಲ್ಲಿ ವಾಯು ಮಾಲಿನ್ಯ ಪ್ರಮಾಣ ವಿಪರೀತವಾಗಿತ್ತು.
ಕಾರ್ಯನಿರ್ವಹಣೆ ಹೇಗೆ?:
ಈ ಟವರ್ ಶೇ.80ರಷ್ಟು ವಾಯುಮಾಲಿನ್ಯ ನಿವಾರಿಸಲಿದೆ. ಇದರ ಸುತ್ತಲಿನ 500-750 ಮೀಟರ್ ವ್ಯಾಪ್ತಿಯವರೆಗೆ ವಾಯು ಮಾಲಿನ್ಯ ನಿಯಂತ್ರಿಸುವ ಸಾಮರ್ಥ್ಯ ಈ ಟವರ್‌ಗಿದೆ. ಪ್ರತಿದಿನ 2.50 ಲಕ್ಷದಿಂದ 6 ಲಕ್ಷ ಕ್ಯೂಬಿಕ್ ಗಾಳಿಯನ್ನು ಶುದ್ಧೀಕರಿಸಲಿದೆ.
ಟವರ್ ನಿರ್ಮಾಣ ವೆಚ್ಚ- 7 ಲಕ್ಷ ರೂ.
ದಿನಕ್ಕೆ ಎಷ್ಟು ಗಾಳಿ ಶುದ್ಧೀಕರಣ?- 2.50 ಲಕ್ಷದಿಂದ 6 ಲಕ್ಷ ಕ್ಯೂಬಿಕ್ ಗಾಳಿ
ಟವರ್‌ನ ಎತ್ತರ- 20 ಅಡಿ (ನೆಲ ಮಟ್ಟದಿಂದ 24 ಅಡಿ)
ನಿರ್ವಹಣೆ ವೆಚ್ಚ- ವಾರ್ಷಿಕ 30 ಸಾವಿರ ರೂ.
ಟವರ್ ನಿರ್ವಹಣೆ ವ್ಯಾಪ್ತಿ-500ರಿಂದ 750 ಮೀಟರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Himachal Pradesh; ಸಿಎಂಗೆ ತಂದಿದ್ದ ಸಮೋಸಾ ಮಾಯ: ಸಿಐಡಿ ತನಿಖೆ?
Minister Sudhakar: ಸೀಟ್ ಬ್ಲಾಕಿಂಗ್ ದಂಧೆ ವಿರುದ್ಧ ಕ್ರಿಮಿನಲ್ ಕೇಸ್ ಅಸ್ತ್ರ
Trump ಗೆಲ್ಲುತ್ತಿದ್ದಂತೆ ಅಮೆರಿಕ ತೊರೆಯಲು ಜನರಿಂದ ಭರದ ಸಿದ್ಧತೆ
Yogi ‘ಬಟೇಂಗೆ’ಹೇಳಿಕೆ ಒಪ್ಪಲ್ಲ ಎಂದ ಅಜಿತ್: ಮಹಾಯುತೀಲಿ ಬಿರುಕು?
Canada; ನಮ್ಮಲ್ಲಿರುವ ಎಲ್ಲ ಹಿಂದೂಗಳು ಮೋದಿ ಬೆಂಬಲಿಗರಲ್ಲ: ಟ್ರಾಡೋ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.