Delhi ಗಟಾರವಾಗಿದೆ..ಎಚ್ಚೆತ್ತುಕೊಳ್ಳಿ ಜನರೇ : ಸಂಸದ ಗಂಭೀರ್
ಯಾವುದೂ ಉಚಿತವಲ್ಲ...ಆಪ್ ಸರಕಾರದ ವಿರುದ್ಧ ಆಕ್ರೋಶ
Team Udayavani, Jul 13, 2023, 4:22 PM IST
ಹೊಸದಿಲ್ಲಿ: ಐಟಿಒ ಮತ್ತು ಸಿವಿಲ್ ಲೈನ್‌ಗಳಂತಹ ಪ್ರದೇಶಗಳಿಗೆ ಗುರುವಾರ ಯಮುನಾ ನೀರು ನುಗ್ಗಿದ ಬಳಿಕ ‘ನಗರವು ಗಟಾರವಾಗಿ ಮಾರ್ಪಟ್ಟಿದೆ’ ಎಂದು ಹೇಳುವ ಮೂಲಕ ದೆಹಲಿ ಬಿಜೆಪಿ ಕೇಜ್ರಿವಾಲ್ ಸರಕಾರದ ವಿರುದ್ಧ ತನ್ನ ವಾಗ್ದಾಳಿಯನ್ನು ತೀವ್ರಗೊಳಿಸಿದೆ.
ಸಂಸದ ಗೌತಮ್ ಗಂಭೀರ್ ಆಪ್ ಸರ್ಕಾರದ ಉಚಿತ ವಿದ್ಯುತ್ ಮತ್ತು ನೀರು ಸರಬರಾಜು ಯೋಜನೆಗಳನ್ನು ಉಲ್ಲೇಖಿಸಿ, ”ಏನೂ ಉಚಿತ ಅಲ್ಲದ ಕಾರಣ ಎಚ್ಚರಗೊಳ್ಳಲು ಇದು ಸಕಾಲ” ಎಂದು ದೆಹಲಿಯ ಜನರನ್ನು ಕೇಳಿಕೊಂಡಿದ್ದಾರೆ. “ದೆಹಲಿಯ ಜನರೇ ಎದ್ದೇಳಿ. ದೆಹಲಿ ಗಟಾರವಾಗಿ ಮಾರ್ಪಟ್ಟಿದೆ. ಯಾವುದೂ ಉಚಿತವಾಗಿಲ್ಲ, ಇದಕ್ಕೆ ಬೆಲೆ ನೀಡಬೇಕು!!” ಎಂದು ಟ್ವೀಟ್ ಮಾಡಿದ್ದಾರೆ.
Wake up Delhiites
Delhi has become a gutter
Nothing is for free, this is the PRICE!!— Gautam Gambhir (@GautamGambhir) July 13, 2023
”ಅಭಿವೃದ್ಧಿ ಕಾಮಗಾರಿಗಳ ಹಣ ಪ್ರಚಾರಕ್ಕೆ ವ್ಯಯಿಸಿದ ಕಾರಣ ದೆಹಲಿ ಪ್ರವಾಹದಲ್ಲಿ ಕೊಚ್ಚಿ ಹೋಗಿದೆ! ನಾನು ನಿರಂತರವಾಗಿ ಪರಿಹಾರ ಕಾರ್ಯವನ್ನು ಮೇಲ್ವಿಚಾರಣೆ ಮಾಡುತ್ತಿದ್ದೇನೆ ಮತ್ತು ಪ್ರತಿದಿನವೂ ನಮ್ಮ ಜನ್ ರಸೋಯಿಯಿಂದ ಎಲ್ಲಾ ಸಂತ್ರಸ್ತರಿಗೆ ಆಹಾರವನ್ನು ತಲುಪಿಸಲಾಗುವುದು!” ಎಂದು ಸಂಸದ ಗಂಭೀರ್ ಟ್ವೀಟ್ ಮಾಡಿದ್ದಾರೆ.
ಪ್ರವಾಹ ಬಯಲು ಪ್ರದೇಶದಿಂದ ಸ್ಥಳಾಂತರಿಸಲ್ಪಟ್ಟ ಜನರ ಭೇಟಿ ಸಂದರ್ಭದಲ್ಲಿ ಬುಧವಾರ ಕೇಜ್ರಿವಾಲ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದ ಗಂಭೀರ್, ಆಪ್ ಸರಕಾರ ಒಂಬತ್ತು ವರ್ಷಗಳಲ್ಲಿ ಕೇವಲ ಆರೋಪಗಳ ರಾಜಕಾರಣ ಹೊರತುಪಡಿಸಿ ಮೂಲಸೌಕರ್ಯಕ್ಕಾಗಿ ಒಂದು ಪೈಸೆ ಸಹ ಖರ್ಚು ಮಾಡಿಲ್ಲಕೇವಲ ಬಿಟ್ಟಿ ರಾಜಕೀಯ ಮಾಡಿ ಜನರನ್ನು ಮೂರ್ಖರನ್ನಾಗಿಸಿದ್ದಾರೆ ಎಂದು ಆರೋಪಿಸಿದ್ದರು.
ಹರಿಯಾಣದ ಹತ್ನಿಕುಂಡ್ ಬ್ಯಾರೇಜ್ ನದಿಗೆ ನೀರು ಬಿಡುತ್ತಿರುವುದರಿಂದ ಗುರುವಾರ ಮಧ್ಯಾಹ್ನ 1 ಗಂಟೆಗೆ ಯಮುನಾದಲ್ಲಿ ನೀರಿನ ಮಟ್ಟ 208.62 ಮೀಟರ್ ಆಗಿತ್ತು. ಪ್ರಸ್ತುತ ನೀರಿನ ಮಟ್ಟ ಅಪಾಯದ ಮಟ್ಟಕ್ಕಿಂತ ಮೂರು ಮೀಟರ್‌ಗಳಷ್ಟು ಹೆಚ್ಚಿದೆ.
ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯ ನಂತರ, ಮುಖ್ಯಮಂತ್ರಿ ಕೇಜ್ರಿವಾಲ್ ಅವರು ಭಾನುವಾರದವರೆಗೆ ಎಲ್ಲಾ ಶಾಲಾ-ಕಾಲೇಜುಗಳನ್ನು ಮುಚ್ಚುವಂತೆ ಆದೇಶಿಸಿದ್ದಾರೆ. ತುರ್ತು ಸೇವೆಯಲ್ಲಿರುವವರನ್ನು ಹೊರತುಪಡಿಸಿ ಸರ್ಕಾರಿ ನೌಕರರಿಗೆ ಮನೆಯಿಂದಲೇ ಕೆಲಸ ಮಾಡಲು ತಿಳಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Belthangady: ಬೈಕ್ ಸವಾರ ಸಾವು ಪ್ರಕರಣ; ಸರಕಾರಿ ಬಸ್ ಚಾಲಕನಿಗೆ ಶಿಕ್ಷೆ;ದಂಡ
Egg Thrown: ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆತ: ಬಿಜೆಪಿ ನಾಯಕರು ಗರಂ
New Products KMF: ಮಾರುಕಟ್ಟೆಗೆ ಬಂತು “ನಂದಿನಿ’ ಇಡ್ಲಿ, ದೋಸೆ ಹಿಟ್ಟು
GST: ಖರೀದಿ, ಮಾರಾಟ ದರದ ವ್ಯತ್ಯಾಸಕ್ಕಷ್ಟೇ 18% ಜಿಎಸ್‌ಟಿ
Pro Kabaddi League-11: ಇಂದು ಎಲಿಮಿನೇಟರ್ ಸ್ಪರ್ಧೆ ಸೋತವರು ಮನೆಗೆ, ಗೆದ್ದವರು ಸೆಮಿಗೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.