LG ಕಚೇರಿಯಲ್ಲಿ ಕೇಜ್ರಿವಾಲ್‌ಗೆ ಧರಣಿ ಕೂರಲು ಬಿಟ್ಟವರು ಯಾರು ?
Team Udayavani, Jun 18, 2018, 1:15 PM IST
ಹೊಸದಿಲ್ಲಿ : ದಿಲ್ಲಿ ಲೆಫ್ಟಿನೆಂಟ್ ಗವರ್ನರ್ ಕಚೇರಿಯಲ್ಲಿ ಧರಣಿ ಕೂರುವುದಕ್ಕೆ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮತ್ತು ಅವರ ಕೆಲವು ಸಂಪುಟ ಸದಸ್ಯರಿಗೆ ಅನುಮತಿ ಕೊಟ್ಟವರು ಯಾರು ಎಂದು ದಿಲ್ಲಿ ಹೈಕೋರ್ಟ್ ಇಂದು ದಿಲ್ಲಿ ಸರಕಾರಕ್ಕೆ ಖಡಕ್ ಪ್ರಶ್ನೆ ಕೇಳಿದೆ.
“ಸಾಮಾನ್ಯವಾಗಿ ಯಾವುದೇ ರೀತಿಯ ಪ್ರತಿಭಟನೆಗಳನ್ನು ಕಚೇರಿ ಕಟ್ಟಡಗಳ ಹೊರಗೆ ನಡೆಸಲಾಗುತ್ತದೆಯೇ ಹೊರತು ಒಳಗಲ್ಲ” ಎಂದು ದಿಲ್ಲಿ ಹೈಕೋರ್ಟ್ ಹೇಳಿತು.
ದಿಲ್ಲಿ ಸರಕಾರದ ಐಎಎಸ್ ಅಧಿಕಾರಿಗಳ ಆರೋಪಿತ ಮುಷ್ಕರದ ವಿರುದ್ಧ ಆಪ್ ನಾಯಕ ಅರವಿಂದ ಕೇಜ್ರಿವಾಲ್ ಮತ್ತು ಇತರರು ಎಲ್‌ಜಿ ಕಾರ್ಯಾಲಯದಲ್ಲಿ ಧರಣಿ ಕೂರಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಎರಡು ಅರ್ಜಿಗಳನ್ನು ಇಂದು ದಿಲ್ಲಿ ಹೈಕೋರ್ಟಿನ ಜಸ್ಟಿಸ್ ಎ ಕೆ ಚಾವ್ಲಾ ಮತ್ತು ಜಸ್ಟಿಸ್ ನವೀನ್ ಚಾವ್ಲಾ ಅವರನ್ನು ಒಳಗೊಂಡ ಪೀಠವು ವಿಚಾರಣೆಗೆ ಎತ್ತಿಕೊಂಡಿತು.
“ಎಲ್‌ಜಿ ಕಾರ್ಯಾಲಯದ ಒಳಗೆ ಧರಣಿ ಕೂರುವುದಕ್ಕೆ ಅರವಿಂದ ಕೇಜ್ರಿವಾಲ್ ಮತ್ತು ಅವರ ಸಂಪುಟದ ಕೆಲವರಿಗೆ ಅವಕಾಶ ಕೊಟ್ಟವರು ಯಾರು ? ಒಂದು ವೇಳೆ ಇದು ಧರಣಿ ಮುಷ್ಕರ ಎಂದಾದರೆ ಅದನ್ನು ಕಟ್ಟಡದ ಹೊರಗೆ ನಡೆಸಬೇಕೇ ಹೊರತು ಒಳಗಲ್ಲ’ ಎಂದು ಎರಡು ವಿಷಯಗಳಿಗೆ ಸಂಬಂಧಿಸಿ ಕೋರ್ಟಿನಲ್ಲಿ ದಿಲ್ಲಿ ಸರಕಾರದ ಪರವಾಗಿ ಹಾಜರಿದ್ದ ವಕೀಲರನ್ನು ನ್ಯಾಯಾಧೀಶರು ಕಟುವಾಗಿ ಪ್ರಶ್ನಿಸಿದರು.
ದಿಲ್ಲಿ ಲೆ| ಗವರ್ನರ್ ಅನಿಲ್ ಬೈಜಾಲ್ ಅವರ ಕಾರ್ಯಾಲಯದಲ್ಲಿ ಕೇಜ್ರಿವಾಲ್ ಮತ್ತು ಇತರರು ಧರಣಿ ಕೂರಿರುವುದನ್ನು ಪ್ರಶ್ನಿಸಿ ದಿಲ್ಲಿ ವಿಧಾನ ಸಭೆಯ ವಿಪಕ್ಷ ನಾಯಕ ವಿಜೇಂದ್ರ ಗುಪ್ತಾ ಅವರು ಕೂಡ ಅರ್ಜಿ ಸಲ್ಲಿಸಿದ್ದಾರೆ.
ಈ ಎಲ್ಲ ಅರ್ಜಿಗಳ ಮುಂದಿನ ವಿಚಾರಣೆಯನ್ನು ನ್ಯಾಯಾಲಯ ಜೂ.22ಕ್ಕೆ ನಿಗದಿಸಿತು.
ಈ ವಿಷಯಕ್ಕೆ ಸಂಬಂಧಿಸಿ ಐಎಎಸ್ ಅಧಿಕಾರಿಗಳನ್ನು ಪ್ರತಿನಿಧಿಸುವ ಸಂಘವನ್ನು ಕೂಡ ಕಕ್ಷಿದಾರನನ್ನಾಗಿ ಮಾಡಬೇಕು ಎಂದು ಕೋರ್ಟ್ ಹೇಳಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
By Election: ಚನ್ನಪಟ್ಟಣದಲ್ಲಿ ಎಚ್.ಡಿ.ದೇವೇಗೌಡ Vs ಡಿ.ಕೆ.ಶಿವಕುಮಾರ್ ಮೇಕೆದಾಟು ಜಟಾಪಟಿ
Active Politics: ನಾನು ಎಂದೂ ಮಂಡ್ಯ ಕ್ಷೇತ್ರ ಬಿಡುವುದಿಲ್ಲ: ಮಾಜಿ ಸಂಸದೆ ಸುಮಲತಾ
Golden Jubliee: ಪತ್ರಿಕೆಯ ಓದು ಪ್ರತಿಯೊಬ್ಬರಿಗೂ ಆಹಾ! ಎನಿಸುವಂತಿರಲಿ
By Election: ಸಿದ್ದರಾಮಯ್ಯ ಸರಕಾರ ಕಿತ್ತೊಗೆಯುವವರೆಗೂ ಹೋರಾಟ ನಿಲ್ಲಲ್ಲ: ಎಚ್.ಡಿ.ದೇವೇಗೌಡ
High Court: ʼಅಪರಾಧಿ ಪತಿಯೊಂದಿಗೆ ನೆಲೆಸಿದ ಮಾತ್ರಕ್ಕೆ ಪತ್ನಿಯನ್ನೂ ಅಪರಾಧಿ ಮಾಡಲಾಗದುʼ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.