Delhi; ಕೆಡವಲಾದ ಅಖೂಂಡ್ಜಿ ಮಸೀದಿ ಬಳಿ ಪ್ರಾರ್ಥನೆಗೆ ಅವಕಾಶವಿಲ್ಲವೆಂದ ಹೈಕೋರ್ಟ್
600 ವರ್ಷಗಳಷ್ಟು ಹಳೆಯದೆಂದು ನಂಬಲಾದ ಮಸೀದಿ ಅಕ್ರಮ ಕಟ್ಟಡವಾಗಿತ್ತು...
Team Udayavani, Feb 23, 2024, 5:30 PM IST
ಹೊಸದಿಲ್ಲಿ: ಶಬ್-ಎ-ಬರಾತ್ ಸಂದರ್ಭದಲ್ಲಿ ಇತ್ತೀಚೆಗೆ ಕೆಡವಲಾದ ಮೆಹ್ರೌಲಿಯಲ್ಲಿನ ‘ಅಖೂಂಡ್ಜಿ ಮಸೀದಿ’ ಮತ್ತು ಹತ್ತಿರದ ಕಬರಸ್ಥಾನದಲ್ಲಿ ಪ್ರಾರ್ಥನೆಗೆ ಅನುಮತಿ ನೀಡಲು ದೆಹಲಿ ಹೈಕೋರ್ಟ್ ಶುಕ್ರವಾರ ನಿರಾಕರಿಸಿದೆ.
ದೆಹಲಿ ವಕ್ಫ್ ಮಂಡಳಿಯ ವ್ಯವಸ್ಥಾಪಕ ಸಮಿತಿಯ ಅರ್ಜಿಯನ್ನು ವ್ಯವಹರಿಸುವಾಗ ನ್ಯಾಯಮೂರ್ತಿ ಪುರುಷೇಂದ್ರ ಕುಮಾರ್ ಕೌರವ್, ದೆಹಲಿ ಅಭಿವೃದ್ಧಿ ಪ್ರಾಧಿಕಾರದ (ಡಿಡಿಎ) ಸ್ವಾಧೀನದಲ್ಲಿರುವ ಸ್ಥಳದಲ್ಲಿ ಯಥಾಸ್ಥಿತಿಗೆ ನಿರ್ದೇಶಿಸಿ, ಈ ಹಂತದಲ್ಲಿ, ನ್ಯಾಯಾಲಯವು ಯಾವುದೇ ನಿರ್ದೇಶನಗಳನ್ನು ರವಾನಿಸಲು ಒಲವು ಹೊಂದಿಲ್ಲ.ಅರ್ಜಿಯನ್ನು ವಜಾಗೊಳಿಸಲಾಗಿದೆ’ ಎಂದು ಆದೇಶಿಸಿದ್ದಾರೆ.
600 ವರ್ಷಗಳಷ್ಟು ಹಳೆಯದೆಂದು ನಂಬಲಾದ ಸಂಜಯ್ ವನ್‌ನಲ್ಲಿನ ‘ಅಖೂಂಡ್ಜಿ ಮಸೀದಿ’ ಹಾಗೂ ಅಲ್ಲಿರುವ ಬೆಹ್ರುಲ್ ಉಲೂಮ್ ಮದರಸಾವನ್ನು ಅಕ್ರಮ ಕಟ್ಟಡಗಳೆಂದು ಘೋಷಿ ಸಿದ ಬಳಿಕ ಜನವರಿ 30 ರಂದು ಡಿಡಿಎಯಿಂದ ಕೆಡವಲಾಗಿತ್ತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.