ಎಚ್‌ಐವಿ ಪೀಡಿತ ನಡೆಸುವ ಲೈಂಗಿಕ ಕ್ರಿಯೆಯನ್ನು”ಕೊಲೆ ಯತ್ನ’ ಎಂದು ಪರಿಗಣಿಸಲಾಗದು: ಕೋರ್ಟ್
Team Udayavani, Nov 30, 2020, 7:52 AM IST
ಹೊಸದಿಲ್ಲಿ: ಎಚ್‌ಐವಿ ಪಾಸಿವಿಟ್ ವ್ಯಕ್ತಿಯೊಬ್ಬ ಮಹಿಳೆಯ ಸಮ್ಮತಿಯೊಂದಿಗೆ ಲೈಂಗಿಕ ಕ್ರಿಯೆ(ಸಂಭೋಗ) ನಡೆಸಿದರೆ, ಅದನ್ನು “ಕೊಲೆ ಯತ್ನ’ ಎಂದು ಪರಿಗಣಿಸಿ ಆತನನ್ನು ವಿಚಾರಣೆಗೆ ಒಳಪಡಿಸಲು ಸಾಧ್ಯವಿಲ್ಲ ಎಂದು ದಿಲ್ಲಿ ಹೈಕೋರ್ಟ್ ಹೇಳಿದೆ.
ಮಲಮಗಳನ್ನೇ ಅತ್ಯಾಚಾರ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಏಡ್ಸ್ ಪೀಡಿತ ವ್ಯಕ್ತಿಯೊಬ್ಬನನ್ನು ಸೆಕ್ಷನ್ 307 (ಕೊಲೆ ಯತ್ನ)ರ ಅನ್ವಯ ಅಪರಾಧಿ ಎಂದು ಘೋಷಿಸಿ ನೀಡಿದ ತೀರ್ಪನ್ನು ನ್ಯಾಯಾಲಯ ವಜಾ ಮಾಡಿದೆ. ಯಾವುದೇ ಮಹಿಳೆಯ ಒಪ್ಪಿಗೆ ಇದ್ದು, ಆಕೆಯೊಂದಿಗೆ ಎಚ್‌ಐವಿ ಪೀಡಿತ ವ್ಯಕ್ತಿ ಸಂಭೋಗ ನಡೆಸಿದರೆ ಆತ “ಕೊಲೆ ಯತ್ನ’ (ತನ್ನ ಸೋಂಕನ್ನು ಆಕೆಗೆ ಹರಡಿ ಆಕೆಯ ಸಾವಿಗೆ ಕಾರಣವಾಗುವ ಕೃತ್ಯ) ನಡೆಸಿದ್ದಾನೆ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ನ್ಯಾ| ವಿಭು ಬಖ್ರು ನೇತೃತ್ವದ ನ್ಯಾಯಪೀಠ ಹೇಳಿದೆ.
ಆದರೆ, ಈ ಪ್ರಕರಣದಲ್ಲಿ ವ್ಯಕ್ತಿಯು ತಮ್ಮ ಮಲಮಗಳ ಮೇಲೆಯೇ ಅತ್ಯಾಚಾರ ಮಾಡಿರುವ ಕಾರಣ, ಆತನನ್ನು ಸೆಕ್ಷನ್ 376(ಅತ್ಯಾಚಾರ)ರಡಿ ಅಪರಾಧಿ ಎಂದು ಘೋಷಿಸಿ, ನ್ಯಾಯಪೀಠ ಶಿಕ್ಷೆಯನ್ನು ಎತ್ತಿಹಿಡಿದಿದೆ.
“ಒಂದು ವೇಳೆ ಪಾಸಿಟಿವ್ ವ್ಯಕ್ತಿ ತನ್ನ ಸ್ಥಿತಿಯ ಅರಿವಿದ್ದೂ, ಅಸುರಕ್ಷಿತ ಲೈಂಗಿಕತೆಗೆ ಮುಂದಾದರೆ ಸೆಕ್ಷನ್ 270ರ ಅಡಿಯಲ್ಲಿ ಸೋಂಕನ್ನು ಉದ್ದೇಶಪೂರ್ವಕವಾಗಿ ಹರಡಲೆತ್ನಿಸಿದ ಆರೋಪ ದಡಿಯಲ್ಲಿ ಆತನನ್ನು ಶಿಕ್ಷೆಗೆ ಗುರಿಪಡಿಸಬಹುದು’ ಎಂದು ಈ ಪ್ರಕರಣದ ವಿಚಾರಣೆ ವೇಳೆ ಕೋರ್ಟ್ ಅಭಿಪ್ರಾಯಪಟ್ಟಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Goa ಕರಾವಳಿಯಲ್ಲಿ ನೌಕಾಪಡೆಯ ಸಬ್ ಮರೈನ್ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
MUST WATCH
ಹೊಸ ಸೇರ್ಪಡೆ
ಬೆಳಗಾವಿ: ಸಿಎಂ ಸಿದ್ದರಾಮಯ್ಯಗೆ ಬೆಳಗಾವಿ ಅಧಿವೇಶನವೇ ಕೊನೆ-ಬಿ.ವೈ ವಿಜಯೇಂದ್ರ
Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ
Chikkamagaluru: ಅಪರಿಚಿತ ವಾಹನ ಡಿಕ್ಕಿಯಾಗಿ ಕಂಡಕ್ಟರ್ ಸಾವು
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
ನವೆಂಬರ್ 26-30: ಧರ್ಮಸ್ಥಳ ಲಕ್ಷದೀಪೋತ್ಸವ ಸಂಭ್ರಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.