Delhi ಆಸ್ಪತ್ರೆಯಲ್ಲಿ ಬಲಿಯಾದದ್ದು ಅಮಾಯಕ ರೋಗಿ: ಗ್ಯಾಂಗ್ ಸ್ಟರ್ ನಿಜವಾದ ಗುರಿಯಾಗಿದ್ದ
Team Udayavani, Jul 15, 2024, 9:24 PM IST
ಹೊಸದಿಲ್ಲಿ: ಇತ್ತೀಚೆಗೆ ಗುರು ತೇಗ್ ಬಹದ್ದೂರ್ ಆಸ್ಪತ್ರೆಯೊಳಗೆ ಮಾರಣಾಂತಿಕ ಗುಂಡಿನ ದಾಳಿ ನಡೆಸಿ 32 ವರ್ಷದ ರೋಗಿಯೊಬ್ಬನನ್ನು ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಸೋಮವಾರ ಇಬ್ಬರನ್ನು ಬಂಧಿಸಿದ್ದಾರೆ.
ಪ್ರಾಥಮಿಕ ತನಿಖೆಯ ನಂತರ ಆಸ್ಪತ್ರೆಯ ವಾರ್ಡ್ ಸಂಖ್ಯೆ 24 ರೊಳಗೆ ಹತ್ಯೆಗೀಡಾದ ರೋಗಿಯ ಮೇಲೆ ‘ಗುರಿ ತಪ್ಪಿ ‘ ದಾಳಿ ಮಾಡಲಾಗಿದೆ ಎಂದು ಪೊಲೀಸರು ಕಂಡುಕೊಂಡಿದ್ದಾರೆ. ದಾಳಿಕೋರರು ಒಬ್ಬ ಗ್ಯಾಂಗ್ ಸ್ಟರ್ ನನ್ನು ಕೊಲ್ಲಲೆಂದು ಆಸ್ಪತ್ರೆಗೆ ಬಂದಿದ್ದು, ಹಸೀಂ ಬಾಬಾ ಗ್ಯಾಂಗ್ನ ಪ್ರತಿಸ್ಪರ್ಧಿಗಳು ಸ್ವಲ್ಪ ಸಮಯದವರೆಗೆ ಅದೇ ವಾರ್ಡ್ಗೆ ದಾಖಲಾಗಿ ಗುಂಡು ಹಾರಿಸಿದ್ದು, ಆದರೆ ಅವರು ಗುರಿ ತಪ್ಪಿ ಹಾಸಿಗೆಯ ಮೇಲೆ ಮಲಗಿದ್ದ ರಿಯಾಜುದ್ದೀನ್ಗೆ ಗುಂಡು ಹಾರಿಸಿ ಹತ್ಯೆಗೈದಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಬಂಧಿತ ಇಬ್ಬರು ಆರೋಪಿಗಳನ್ನು ಕ್ರಮವಾಗಿ ಉತ್ತರ ಪ್ರದೇಶ ಮತ್ತು ದೆಹಲಿಯ ಫೈಜ್ (20) ಮತ್ತು ಫರ್ಹಾನ್ ಎಂದು ಗುರುತಿಸಲಾಗಿದೆ. ಆಸ್ಪತ್ರೆಯ ಸಿಸಿಟಿವಿ ದೃಶ್ಯಾವಳಿಗಳು ಮತ್ತು ತಾಂತ್ರಿಕ ಕಣ್ಗಾವಲು ನಾಲ್ವರು ಆರೋಪಿಗಳು ಆಸ್ಪತ್ರೆಗೆ ಪ್ರವೇಶಿಸುವುದನ್ನು ತೋರಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಹತ್ಯೆಯ ಮಾಸ್ಟರ್ ಮೈಂಡ್ ಫಹೀಂ ಅಲಿಯಾಸ್ ಬಾದ್ ಶಾ ಖಾನ್ ಮತ್ತು ಆಸ್ಪತ್ರೆಯಲ್ಲಿ ಗುಂಡು ಹಾರಿಸಿದ 18 ವರ್ಷದ ಯುವಕ ಇನ್ನೂ ತಲೆಮರೆಸಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Mohan Bhagwat; ತಿಳುವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.