Tragedy: ಬೆಳ್ಳಂಬೆಳಗ್ಗೆ ಬಾಡಿಗೆ ಮನೆಯಲ್ಲಿ ನಾಲ್ವರು ಹೆಣ್ಣುಮಕ್ಕಳ ಜೊತೆ ತಂದೆಯ ಶವ ಪತ್ತೆ

Team Udayavani, Sep 28, 2024, 9:23 AM IST

Tragedy: ಬಾಡಿಗೆ ಮನೆಯಲ್ಲಿ ನಾಲ್ವರು ಹೆಣ್ಣುಮಕ್ಕಳು ಸೇರಿ ಒಂದೇ ಕುಟುಂಬದ ಐವರ ಶವ ಪತ್ತೆ…

ನವದೆಹಲಿ: ಬೆಳ್ಳಂಬೆಳಗ್ಗೆ ದೆಹಲಿಯಲ್ಲಿ ಘೋರ ದುರಂತವೊಂದು ನಡೆದಿದೆ, ಇಲ್ಲಿನ ಬಾಡಿಗೆ ಮನೆಯೊಂದರಲ್ಲಿ ತಂದೆ ಹಾಗೂ ನಾಲ್ವರು ಹೆಣ್ಣು ಮಕ್ಕಳು ಶವವಾಗಿ ಪತ್ತೆಯಾಗಿರುವ ಘಟನೆಯೊಂದು ಶುಕ್ರವಾರ ಮುಂಜಾನೆ ಬೆಳಕಿಗೆ ಬಂದಿದೆ.

ದೆಹಲಿಯ ರಂಗಪುರಿ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು ಮೃತರನ್ನು ತಂದೆ ಹೀರಾ ಲಾಲ್ (೫೦) ಮತ್ತು ಅವರ ಪುತ್ರಿಯರಾದ ನೀತು (18), ನಿಶಿ (15), ನೀರು (10), ಮತ್ತು ನಿಧಿ (8) ಎಂದು ಗುರುತಿಸಲಾಗಿದೆ.

ಪೊಲೀಸರ ಮಾಹಿತಿಯ ಪ್ರಕಾರ ಕಾರ್ಪೆಂಟರ್ ವೃತ್ತಿ ಮಾಡುತ್ತಿರುವ ಹೀರಾ ಲಾಲ್ ಅವರ ಹೆಂಡತಿ ಕಳೆದ ಒಂದು ವರ್ಷದ ಹಿಂದೆ ಮರಣಹೊಂದಿದ್ದರು ಇದಾದ ಬಳಿಕ ತನ್ನ ನಾಲ್ವರು ಹೆಣ್ಣುಮಕ್ಕಳೊಂದಿಗೆ ಒಂಟಿಯಾಗಿ ವಾಸಿಸುತ್ತಿದ್ದರು. ನಾಲ್ವರೂ ಹೆಣ್ಣುಮಕ್ಕಳೂ ಅಂಗವೈಕಲ್ಯದಿಂದ ಬಳಲುತ್ತಿದ್ದರು ಎನ್ನಲಾಗಿದೆ ಅದರಲ್ಲೂ ನೀತುಗೆ ದೃಷ್ಟಿದೋಷ, ನಿಶಿಗೆ ನಡೆಯಲು ತೊಂದರೆ ಎಂದು ಹೇಳಲಾಗಿದೆ.

ಸೆಪ್ಟಂಬರ್ 24 ರಂದು ಹೀರಾ ಲಾಲ್ ಮನೆಗೆ ಪ್ರವೇಶಿಸಿದ್ದನ್ನು ಕೊನೆಯದಾಗಿ ಸಿಸಿಟಿವಿ ದೃಶ್ಯಾವಳಿಗಳು ತೋರಿಸಿವೆ. ಅದರ ನಂತರ, ಯಾರೂ ಒಳಗೆ ಪ್ರವೇಶಿಸುವುದು ಅಥವಾ ಹೊರಹೋಗುವುದು ಕಂಡುಬಂದಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ದುರ್ವಾಸನೆ ಬರುತ್ತಿದ್ದ ಹಿನ್ನೆಲೆಯಲ್ಲಿ ನೆರೆಮನೆಯವರು ನೀಡಿದ ದೂರಿನ ಪ್ರಕಾರ ಸ್ಥಳಕ್ಕಾಗಮಿಸಿದ ಪೊಲೀಸರು ತಪಾಸಣೆ ನಡೆಸಿದ ವೇಳೆ ಮನೆಯ ಒಳಭಾಗದಿಂದ ಚಿಲಕ ಹಾಕಿರುವುದು ಕಂಡು ಬಂದಿದ್ದು ಬಾಗಿಲು ಒಡೆದು ಒಳ ಪ್ರವೇಶಿಸಿದಾಗ ನಾಲ್ವರು ಪುತ್ರಿಯರ ಜೊತೆ ತಂದೆ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆ ನಡೆಸಲು ಆಸ್ಪತ್ರೆಗೆ ಸಾಗಿಸಿದ್ದಾರೆ, ಮೇಲ್ನೋಟಕ್ಕೆ ಆತ್ಮಹತ್ಯೆ ಎಂದು ತಿಳಿದುಬಂದಿದ್ದು ತನಿಖೆಯಿಂದ ಸತ್ಯಂಶ ಹೊರಬರಲಿದೆ.

ಟಾಪ್ ನ್ಯೂಸ್

Shimoga; ಸಿದ್ದರಾಮಯ್ಯಗೆ ನ್ಯಾಯಾಧೀಶರ ಮೇಲೂ ನಂಬಿಕೆ ಇಲ್ಲ: ಶಾಸಕ ಚನ್ನಬಸಪ್ಪ

Shimoga; ಸಿದ್ದರಾಮಯ್ಯಗೆ ನ್ಯಾಯಾಧೀಶರ ಮೇಲೂ ನಂಬಿಕೆ ಇಲ್ಲ: ಶಾಸಕ ಚನ್ನಬಸಪ್ಪ

Shimoga; ಮಂಗಳೂರಿಗೆ ಗೋಸಾಗಾಟ; ಬಜರಂಗದಳ ಕಾರ್ಯಕರ್ತರಿಂದ ದಾಳಿ

Shimoga; ಮಂಗಳೂರಿಗೆ ಗೋಸಾಗಾಟ; ಬಜರಂಗದಳ ಕಾರ್ಯಕರ್ತರಿಂದ ದಾಳಿ

Sanju Movie Review

Sanju Movie Review: ಪ್ರೀತಿ ಪಯಣದಲ್ಲೊಂದು ವಿಷ ಘಳಿಗೆ

Tragedy: ಬಾಡಿಗೆ ಮನೆಯಲ್ಲಿ ನಾಲ್ವರು ಹೆಣ್ಣುಮಕ್ಕಳು ಸೇರಿ ಒಂದೇ ಕುಟುಂಬದ ಐವರ ಶವ ಪತ್ತೆ…

Tragedy: ಬೆಳ್ಳಂಬೆಳಗ್ಗೆ ಬಾಡಿಗೆ ಮನೆಯಲ್ಲಿ ನಾಲ್ವರು ಹೆಣ್ಣುಮಕ್ಕಳ ಜೊತೆ ತಂದೆಯ ಶವ ಪತ್ತೆ

2-bng

Bengaluru: ಹೂಡಿಕೆ ನೆಪದಲ್ಲಿ 6 ಕೋಟಿ ವಂಚನೆ: 10 ಜನ ಸೆರೆ

Porsche Crash: ಆ ಒಂದು ಘಟನೆಯಿಂದ ಬಾಲಕನಿಗೆ ಯಾವುದೇ ಕಾಲೇಜಿನಲ್ಲಿ ಸೀಟು ಸಿಕ್ತಿಲ್ಲ

Porsche Crash: ಆ ಒಂದು ಘಟನೆಯಿಂದ ಬಾಲಕನಿಗೆ ಯಾವುದೇ ಕಾಲೇಜಿನಲ್ಲಿ ಸೀಟು ಸಿಕ್ತಿಲ್ಲ

Udupi: ರಸ್ತೆ ಮಾರ್ಜಿನ್‌ ಮಾಹಿತಿ ಇಲ್ಲದೆ ಸಂಕಷ್ಟ: ನಗರಕ್ಕೆ 21ಮೀ.,ಗ್ರಾಮಾಂತರಕ್ಕೆ 40 ಮೀ.

Udupi: ರಸ್ತೆ ಮಾರ್ಜಿನ್‌ ಮಾಹಿತಿ ಇಲ್ಲದೆ ಸಂಕಷ್ಟ: ನಗರಕ್ಕೆ 21ಮೀ.,ಗ್ರಾಮಾಂತರಕ್ಕೆ 40 ಮೀ.

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Porsche Crash: ಆ ಒಂದು ಘಟನೆಯಿಂದ ಬಾಲಕನಿಗೆ ಯಾವುದೇ ಕಾಲೇಜಿನಲ್ಲಿ ಸೀಟು ಸಿಕ್ತಿಲ್ಲ

Porsche Crash: ಆ ಒಂದು ಘಟನೆಯಿಂದ ಬಾಲಕನಿಗೆ ಯಾವುದೇ ಕಾಲೇಜಿನಲ್ಲಿ ಸೀಟು ಸಿಕ್ತಿಲ್ಲ

Andhra-Kalyan–Khandre

Significant Agreement: ವನ-ವನ್ಯಜೀವಿ ಸಂರಕ್ಷಣೆಗೆ ಯತ್ನ: ಸಚಿವ ಈಶ್ವರ ಖಂಡ್ರೆ

1-fores

India’s forex fund 57.4 ಲಕ್ಷ ಕೋಟಿಗೇರಿಕೆ! : ಇದು ಸಾರ್ವಕಾಲಿಕ ಗರಿಷ್ಠ

1-jagan

Tirupati ಭೇಟಿ; ಜಗನ್‌ vs ಚಂದ್ರಬಾಬು: ನನ್ನ ”ಧರ್ಮ” ಮಾನವೀಯತೆ

indian-flag

India;ಏಷ್ಯಾ-ಪೆಸಿಫಿಕ್‌ ವಲಯದಲ್ಲಿ 3ನೇ ಶಕ್ತಿಶಾಲಿ ದೇಶ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Shimoga; ಸಿದ್ದರಾಮಯ್ಯಗೆ ನ್ಯಾಯಾಧೀಶರ ಮೇಲೂ ನಂಬಿಕೆ ಇಲ್ಲ: ಶಾಸಕ ಚನ್ನಬಸಪ್ಪ

Shimoga; ಸಿದ್ದರಾಮಯ್ಯಗೆ ನ್ಯಾಯಾಧೀಶರ ಮೇಲೂ ನಂಬಿಕೆ ಇಲ್ಲ: ಶಾಸಕ ಚನ್ನಬಸಪ್ಪ

4-dandeli

Dandeli: ಕಾಳಿ ನದಿಗೆ ಜಿಗಿದ ಮಹಿಳೆಯ ಮೃತದೇಹ ಪತ್ತೆ

Shimoga; ಮಂಗಳೂರಿಗೆ ಗೋಸಾಗಾಟ; ಬಜರಂಗದಳ ಕಾರ್ಯಕರ್ತರಿಂದ ದಾಳಿ

Shimoga; ಮಂಗಳೂರಿಗೆ ಗೋಸಾಗಾಟ; ಬಜರಂಗದಳ ಕಾರ್ಯಕರ್ತರಿಂದ ದಾಳಿ

3-aland

Aland: ಆಟೋ ಪಲ್ಟಿಯಾಗಿ ಚಾಲಕ ಸ್ಥಳದಲ್ಲೇ ಸಾವು

Sanju Movie Review

Sanju Movie Review: ಪ್ರೀತಿ ಪಯಣದಲ್ಲೊಂದು ವಿಷ ಘಳಿಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.