Tragedy: ವಾಕಿಂಗ್ ಮುಗಿಸಿ ಬರುವಷ್ಟರಲ್ಲಿ ತಂದೆ, ತಾಯಿ, ಸಹೋದರಿಯ ಬರ್ಬರ ಹತ್ಯೆ
Team Udayavani, Dec 4, 2024, 2:52 PM IST
ನವದೆಹಲಿ: ದಕ್ಷಿಣ ದೆಹಲಿಯಲ್ಲಿ ಬುಧವಾರ(ಡಿ.4) ಬೆಳ್ಳಂಬೆಳಗ್ಗೆ ತಂದೆ, ತಾಯಿ, ಸಹೋದರಿ ಸೇರಿದಂತೆ ಮೂವರನ್ನು ಹತ್ಯೆ ನಡೆಸಿರುವ ಭಯಾನಕ ಘಟನೆಯೊಂದು ನಡೆದಿದೆ.
ಮೃತರನ್ನು ರಾಜೇಶ್ ಕುಮಾರ್ (51), ಅವರ ಪತ್ನಿ ಕೋಮಲ್ (46) ಮತ್ತು ಅವರ ಪುತ್ರಿ ಕವಿತಾ (23) ಎನ್ನಲಾಗಿದ್ದು ಮಗ ಅರ್ಜುನ್ ಬೆಳಿಗ್ಗೆ ಎದ್ದು ವಾಕಿಂಗ್ ಹೋಗಿ ಬರುವಷ್ಟರಲ್ಲಿ ಈ ಘಟನೆ ನಡೆದಿದ್ದು ಮೂವರು ಮನೆಯೊಳಗೆ ರಕ್ತದ ಮಾಡುವಲ್ಲಿ ಬಿದ್ದಿದ್ದರು ಎನ್ನಲಾಗಿದೆ.
ಮೂವರಿಗೂ ಚಾಕುವಿನಿಂದ ಇರಿದು ಹತ್ಯಗೈಯಲಾಗಿದ್ದು ಅಲ್ಲದೆ ಮನೆಯಲ್ಲಿ ಯಾವುದೇ ವಸ್ತುಗಳು ಕಳ್ಳತನವಾಗಿಲ್ಲ ಎನ್ನಲಾಗಿದ್ದು ಯಾವುದೇ ಕಳ್ಳತನದ ಉದ್ದೇಶದಿಂದ ಕೊಲೆ ನಡೆದಿಲ್ಲ ಎನ್ನಲಾಗಿದೆ.
ಮಗ ಅರ್ಜುನ್ ಹೇಳಿಕೆ ಪ್ರಕಾರ ಇಂದು ಅಪ್ಪ ಅಮ್ಮನ ಮದುವೆ ವಾರ್ಷಿಕೋತ್ಸವ ಹಾಗಾಗಿ ಬೆಳಿಗ್ಗೆ ಎದ್ದವನೇ ಅಪ್ಪ ಅಮ್ಮನಿಗೆ ಶುಭಾಶಯ ತಿಳಿಸಿ ಬಳಿಕ ವಾಕಿಂಗ್ ತೆರಳಿದ್ದೆ ಆದರೆ ವಾಕಿಂಗ್ ಮುಗಿಸಿ ಹಿಂತಿರುಗುವಷ್ಟರಲ್ಲಿ ದುಷ್ಕರ್ಮಿಗಳು ಚಾಕು ಇರಿದು ಹೋಗಿದ್ದಾರೆ ಎಂದು ಮಾಹಿತಿ ನೀಡಿದ್ದಾನೆ.
ಘಟನಾ ಸ್ಥಳಕ್ಕೆ ಪೊಲೀಸರು ಬಂದು ಸ್ಥಳ ಪರಿಶೀಲನೆ ನಡೆಸಿ, ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಕೊಲೆ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
ಇದನ್ನೂ ಓದಿ: Ali Khan Tughlaq: ಮಾದಕ ವಸ್ತು ಕಳ್ಳಸಾಗಣೆ ಪ್ರಕರಣ; ಖ್ಯಾತ ನಟ ಮನ್ಸೂರ್ ಅಲಿ ಪುತ್ರ ಬಂಧನ
ಕೇಂದ್ರದ ವಿರುದ್ಧ ಮುಖ್ಯಮಂತ್ರಿ ಅತಿಶಿ ವಾಗ್ದಾಳಿ:
ಇನ್ನು ದೆಹಲಿಯಲ್ಲಿ ನಡೆದ ತ್ರಿವಳಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ದೆಹಲಿ ಮುಖ್ಯಮಂತ್ರಿ ಅತಿಶಿ ಕೇಂದ್ರ ಸರಕಾರದ ವಿರುದ್ಧ ಟ್ವಿಟರ್ X ನಲ್ಲಿ ವಾಗ್ದಾಳಿ ನಡೆಸಿದ್ದು, “ಇಂದು ಬೆಳಿಗ್ಗೆ ನೆಬ್ ಸರಾಯ್‌ನಲ್ಲಿ ತ್ರಿವಳಿ ಕೊಲೆಯಾಗಿದೆ, ದೆಹಲಿಯಲ್ಲಿ ಹಗಲು ಕೊಲೆಗಳು ನಡೆಯುತ್ತಿವೆ, ಗುಂಡುಗಳನ್ನು ಹಾರಿಸಲಾಗುತ್ತಿದೆ,ಅಷ್ಟು ಮಾತ್ರವಲ್ಲದೆ ಮಾದಕ ವಸ್ತುಗಳನ್ನು ಬಹಿರಂಗವಾಗಿ ಮಾರಾಟ ಮಾಡಲಾಗುತ್ತಿದೆ. ಜನರಿಗೆ ಭದ್ರತೆ ಒದಗಿಸುವಲ್ಲಿ ಕೇಂದ್ರ ಸರಕಾರ ವಿಫಲವಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.