ಅಮಾನವೀಯ! ದೆಹಲಿಯಲ್ಲಿ ನಾಯಿ, ಮಾಲಕಿಗೆ ಕಬ್ಬಿಣದ ರಾಡ್‌ನಿಂದ ಥಳಿತ
ವಿಡಿಯೋ ವೈರಲ್, ವ್ಯಾಪಕ ಆಕ್ರೋಶ
Team Udayavani, Jul 4, 2022, 9:24 PM IST
ನವದೆಹಲಿ: ಪಶ್ಚಿಮ್ ವಿಹಾರ್‌ನಲ್ಲಿ ನಡೆದ ಆಘಾತಕಾರಿ ಘಟನೆಯೊಂದರಲ್ಲಿ, ನಾಯಿ ಬೊಗಳಿತು ಮತ್ತು ಕಚ್ಚಿದೆ ಎಂದು ಆರೋಪಿಸಿ ವ್ಯಕ್ತಿಯೊಬ್ಬ ಕುಟುಂಬದ ಮೂವರು ಸದಸ್ಯರು ಮತ್ತು ಅವರ ಸಾಕು ನಾಯಿಯ ಮೇಲೆ ದಾಳಿ ಮಾಡಿದ್ದಾನೆ. ವರದಿಗಳ ಪ್ರಕಾರ, ವ್ಯಕ್ತಿ ಕಬ್ಬಿಣದ ರಾಡ್‌ನಿಂದ ಹೊಡೆದಿದ್ದರಿಂದ ಮಾಲಕಿ ಮತ್ತು ನಾಯಿಗೆ ಗಾಯಗಳಾಗಿವೆ.
ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈ ವಿಡಿಯೋವನ್ನು ಇಂದು ಬೆಳಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ನೆಟಿಜನ್‌ಗಳ ಆಕ್ರೋಶಕ್ಕೆ ಕಾರಣವಾಗಿದೆ.
ಧರ್ಮವೀರ್ ದಹಿಯಾ ಎಂದು ಗುರುತಿಸಲಾದ ವ್ಯಕ್ತಿ ಮೊದಲು ಮಹಿಳೆಯನ್ನು ಥಳಿಸಿ ನಂತರ ನಾಯಿ ಮತ್ತು ವ್ಯಕ್ತಿಯನ್ನು ರಾಡ್‌ನಿಂದ ಹೊಡೆಯುತ್ತಿರುವುದು ಕಂಡುಬಂದಿದೆ.
ಮಾಧ್ಯಮ ವರದಿಗಳ ಪ್ರಕಾರ, ದಹಿಯಾ ಅವರು ಬೀದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ನಾಯಿಯು ಬೊಗಳಿದಾಗ ಅದರ ಬಾಲವನ್ನು ಹಿಡಿದು ನಾಯಿಯನ್ನು ಎಸೆದಿದ್ದಾನೆ. ನಂತರ, ನಾಯಿಯನ್ನು ಸಾಕಿದ್ದ ರಕ್ಷಿತ್ ನಾಯಿಯನ್ನು ರಕ್ಷಿಸಲು ಮಧ್ಯದಲ್ಲಿ ಬಂದಿದ್ದು, ಈ ಜಗಳದ ವೇಳೆ ದಹಿಯಾಗೆ ನಾಯಿ ಕಚ್ಚಿದೆ ಎನ್ನಲಾಗಿದೆ.
ನಂತರ, ದಹಿಯಾ ನಾಯಿ ಮಾಲೀಕರ ಮನೆಗೆ ಮರಳಿದ್ದು, ಗದ್ದಲ ಏನೆಂದು ನೋಡಲು ನೆರೆಹೊರೆಯವರು ಶೀಘ್ರದಲ್ಲೇ ಹೊರಬಂದರು. ನಾಯಿಯ ಮಾಲೀಕರು ಎಫ್‌ಐಆರ್ ದಾಖಲಿಸಿದ್ದಾರೆ. ಘಟನೆಯಲ್ಲಿ ಗಾಯಗೊಂಡಿರುವ ಮಹಿಳೆಯ ಆರೋಗ್ಯ ಸ್ಥಿರವಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ನಾಯಿಯ ತಲೆಯಲ್ಲಿ ಹೆಪ್ಪುಗಟ್ಟುವಿಕೆ ಇದೆ ಮತ್ತು ಪಶುವೈದ್ಯರ ಬಳಿಗೆ ಕರೆದೊಯ್ಯಲಾಗುತ್ತದೆ ಎಂದು ತಿಳಿದು ಬಂದಿದೆ.
#WATCH | Delhi: 3 members of a family&their pet dog injured after being hit by a neighbor with an iron rod in Paschim Vihar. It happened after the dog allegedly barked at him. FIR lodged.
Injured stable. Dog’s owner says it has a clot in its head & will be taken to veterinarian. pic.twitter.com/YAa1QdduzB
— ANI (@ANI) July 4, 2022
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Threat: ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ
Maharashtra poll ; ಕಣದಲ್ಲಿ ಉಳಿದಿದ್ದು 4,140 ಅಭ್ಯರ್ಥಿಗಳು
DMK ನಾಶವೇ ಹೊಸ ಪಕ್ಷದ ಉದ್ದೇಶ: ವಿಜಯ್ ವಿರುದ್ಧ ಸ್ಟಾಲಿನ್ ಕಿಡಿ
WhatsApp ನಲ್ಲಿ ಧರ್ಮ ಆಧರಿತ ಗುಂಪು: ಕೇರಳ ಐಎಎಸ್ ಅಧಿಕಾರಿ ದೂರು
Elephants; ಮಧ್ಯಪ್ರದೇಶ ಬಳಿಕ ಒಡಿಶಾದಲ್ಲಿ 7 ತಿಂಗಳಿನಲ್ಲಿ 50 ಆನೆಗಳ ಸಾವು
MUST WATCH
ಹೊಸ ಸೇರ್ಪಡೆ
Bantwal: ತುಂಬೆ ಶ್ರೀಮಹಾಲಿಂಗೇಶ್ವರ ದೇವಸ್ಥಾನಕ್ಕೆ ಕನ್ನ; ಲಕ್ಷಾಂತರ ಮೌಲ್ಯದ ನಗನಗದು ಲೂಟಿ
Threat: ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ
ಅಂಗಡಿಯಲ್ಲಿ ಬಿಟ್ಟು ಹೋಗಿದ್ದ 1.20 ಲ.ರೂ ಹಿಂದಿರುಗಿಸಿ ಮಾನವೀಯತೆ ಮೆರೆದ ಶಾಸಕ ಬಸವಂತಪ್ಪ
Kavoor: ಎಡನೀರು ಮಠದ ಶ್ರೀಗಳ ಮೇಲೆ ಹಲ್ಲೆ… ಶಾಸಕ ಡಾ.ಭರತ್ ಶೆಟ್ಟಿ ವೈ. ಖಂಡನೆ
ಅಕ್ರಮ ಮರಳುಗಾರಿಕೆ ಕುರಿತು ಮಾಹಿತಿ ನೀಡಿದ ಆರೋಪ… ವ್ಯಕ್ತಿಗೆ ಹಲ್ಲೆ ನಡೆಸಿ ಇರಿಯಲು ಯತ್ನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.