Shocking: ದೀಪಾವಳಿ ಸಂಭ್ರಮದಲ್ಲಿದ್ದ ಚಿಕ್ಕಪ್ಪ- ಸೋದರಳಿಯನನ್ನು ಗುಂಡಿಕ್ಕಿ ಹತ್ಯೆ…
Team Udayavani, Nov 1, 2024, 2:54 PM IST
ನವದೆಹಲಿ: ದೀಪಾವಳಿ ದಿನದಂದೇ ದೆಹಲಿಯಲ್ಲೊಂದು ಬೆಚ್ಚಿ ಬೀಳಿಸುವ ಘಟನೆ ನಡೆದಿದೆ, ಗುರುವಾರ(ಅ.31) ರಾತ್ರಿ ಶಹದಾರಾ ಪ್ರದೇಶದಲ್ಲಿ ತಂದೆ, ಪುತ್ರ ಹಾಗೂ ಸೋದರಳಿಯ ಸೇರಿ ಮನೆಯ ಮುಂದೆ ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸುತ್ತಿದ್ದ ವೇಳೆ ಇಬ್ಬರು ದುಷ್ಕರ್ಮಿಗಳು ಸೋದರಳಿಯ ಹಾಗೂ ಚಿಕ್ಕಪ್ಪನ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆಗೈದಿರುವ ಘಟನೆ ನಡೆದಿದೆ.
ಮೃತರನ್ನು ಆಕಾಶ್ (40) ಮತ್ತು ಅವರ ಸೋದರಳಿಯ ರಿಷಭ್ (16) ಎಂದು ಗುರುತಿಸಲಾಗಿದೆ. ಗುಂಡಿನ ದಾಳಿಯಲ್ಲಿ ಆಕಾಶ ಅವರ 10 ವರ್ಷದ ಮಗ ಕ್ರಿಶ್ ಗಾಯಗೊಂಡಿದ್ದಾನೆ.
ಏನಿದು ಪ್ರಕರಣ:
ದೆಹಲಿಯ ಈಶಾನ್ಯ ಭಾಗದ ಶಾಹಾದಾರ ಪ್ರದೇಶದಲ್ಲಿ ತಮ್ಮ ಮನೆಯ ಮುಂದೆ ಆಕಾಶ್ ಮಗ ಕಿಶ್ ಹಾಗೂ ಸೋದರಳಿಯ ದೀಪಾವಳಿಯ ಸಂಭ್ರಮಾಚರಣೆಯಲ್ಲಿ ತೊಡಗಿದ್ದರು ಅದರಂತೆ ಮನೆಯ ಮುಂದೆ ಪಟಾಕಿ ಸಿಡಿಸುತ್ತಿದ್ದರು ಸುಮಾರು ಒಂಬತ್ತು ಗಂಟೆಯ ಸುಮಾರಿಗೆ ಸ್ಕೂಟಿಯಲ್ಲಿ ಬಂದ ಇಬ್ಬರು ಅಪರಿಚಿತರು ಮಾತನಾಡುವ ನೆಪದಲ್ಲಿ ಆಕಾಶ್ ಅವರ ಮೇಲೆ ಗುಂಡು ಹಾರಿಸಿದ್ದಾರೆ ಇದಾದ ಬಳಿಕ ಸೋದರಳಿಯನ ಮೇಲೆ ಗುಂಡು ಹಾರಿಸಿ ಪರಾರಿಯಾಗಲು ಯತ್ನಿಸಿದ್ದಾರೆ ಈ ವೇಳೆ ತಡೆಯಲು ಹೋದ ಆಕಾಶ್ ಅವರ ಮಗ ಕ್ರಿಶ್ ಮೇಲು ಗುಂಡಿನ ದಾಳಿ ನಡೆಸಿದ್ದಾರೆ.
दिल्ली के दिवाली के दिन डबल मर्डर।
शाहदरा इलाके में चाचा भतीजे की गोली मारकर हत्या। @DelhiPolice @DCP_SHAHDARA#DelhiPolice #Crime #BREAKING
घटना का CCTV 👇 👇 👇 pic.twitter.com/BJxoU3Jwx0
— Sonu Kumar (@Sonu_indiatv) November 1, 2024
ಮೂವರು ಗಂಭೀರ ಗಾಯಗೊಂಡಿದ್ದು ಕೂಡಲೇ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲು ಕರೆದೊಯ್ಯುವ ವೇಳೆ ಆಕಾಶ್ ಹಾಗೂ ರಿಷಬ್ ಕೊನೆಯುಸಿರೆಳೆದಿದ್ದಾರೆ, ಕ್ರಿಶ್ ಗೆ ಗಾಯವಾಗಿದ್ದು ಆತನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ದೀಪಾವಳಿಯ ಸಂಭ್ರಮದಲ್ಲಿದ್ದ ಮನೆಯಲ್ಲಿ ಸ್ಮಶಾನ ಮೌನ ಆವರಿಸಿದೆ.
#WATCH | Delhi | Two died and one was injured in a firing incident under the Farsh Bazar police station area in Shahdara. A PCR call regarding a firing was received in PS Farsh Bazar around 8.30 pm. Witnesses informed that Akash (40) and Rishabh (16) lost their lives and Krish… pic.twitter.com/z9h3HFM6dn
— ANI (@ANI) October 31, 2024
ಘಟನೆ ನಡೆದ ವಿಚಾರ ಗೊತ್ತಾಗುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಪೊಲೀಸರು ದೂರು ದಾಖಲಿಸಿಕೊಂಡು ದುಷ್ಕರ್ಮಿಗಳ ಪತ್ತೆಗೆ ಬಲೆ ಬೀಸಿದ್ದಾರೆ ಅಲ್ಲದೆ ಘಟನೆಯ ದೃಶ್ಯ ಅಲ್ಲಿನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
#WATCH | Delhi: DCP Shahdara Prashant Gautam says, “At around 8.30 pm, we received a PCR call informing that there had been firing in the Bihari Colony and some people were injured. Upon reaching the spot, it was known that Akash (40) his nephew Rishab (16) and his son Krish (10)… https://t.co/BqAwGVwH9E pic.twitter.com/swBryX1AXc
— ANI (@ANI) October 31, 2024
ಇದನ್ನೂ ಓದಿ: Belagavi; ಎಂಇಎಸ್ ನಿಷೇಧಕ್ಕಿಂತ ನಿರ್ಲಕ್ಷ್ಯ ಮಾಡುವುದು ಉತ್ತಮ: ಸತೀಶ್ ಜಾರಕಿಹೊಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!
Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು
Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್ ಬುಕ್ಕಿಂಗ್ ತಾತ್ಕಾಲಿಕ ರದ್ದು
Old cars ಬಿಕರಿಗೆ ಶೇ.18 ಜಿಎಸ್‌ಟಿ! ; ವಿತ್ತ ಸಚಿವೆ ನೇತೃತ್ವದ ಜಿಎಸ್‌ಟಿ ಸಭೆ ತೀರ್ಮಾನ
Maharashtra; ಫಡ್ನವೀಸ್ ಬಳಿ ಗೃಹ, ಶಿಂಧೆಗೆ ನಗರಾಭಿವೃದ್ಧಿ ಸೇರಿ 3 ಪ್ರಮುಖ ಖಾತೆ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.