ಬಾಗಿಲು ತೆರೆದುಕೊಂಡೇ ಚಲಿಸಿದ ದಿಲ್ಲಿ ಮೆಟ್ರೋ ರೈಲು, Watch
Team Udayavani, Sep 12, 2017, 11:10 AM IST
ಹೊಸದಿಲ್ಲಿ : ದಿಲ್ಲಿ ಮೆಟ್ರೋ ಯೆಲ್ಲೋ ಲೈನ್‌ನಲ್ಲಿ ನಿನ್ನೆ ಸೋಮವಾರ ಪ್ರಯಾಣಿಸುತ್ತಿದ್ದವರಿಗೆ ಜೀವವೇ ಬಾಯಿಗೆ ಬಂದಂತಹ ಭಯಾನಕ ಅನುಭವ ಉಂಟಾದ ಘಟನೆ ವರದಿಯಾಗಿದೆ.
ಪ್ರಯಾಣಿಕರಿಂದ ಕಿಕ್ಕಿರಿದು ತುಂಬಿದ್ದ ದಿಲ್ಲಿ ಮೆಟ್ರೋ ಎರಡು ಸ್ಟೇಶನ್‌ಗಳ ನಡುವೆ ಚಲಿಸುತ್ತಿದ್ದಾಗ ಅದರ ಒಂದು ಬಾಗಿಲು ತೆರೆದುಕೊಂಡೇ ಇದ್ದದ್ದು ಪ್ರಯಾಣಿಕರಲ್ಲಿ ತೀವ್ರ ಭಯ, ಆತಂಕವನ್ನು ಉಂಟುಮಾಡಿತು.
ವರದಿಗಳ ಪ್ರಕಾರ ಈ ಘಟನೆ ನಡೆದದ್ದು ಸೋಮವಾರ ರಾತ್ರಿ 10 ಗಂಟೆಯ ವೇಳೆ. ಆಗ ಮೆಟ್ರೋ ರೈಲು ಚೌರಿ ಬಜಾರ್ ಮತ್ತು ಕಶ್‌ಮೇರೆ ಗೇಟ್ ಸ್ಟೇಶನ್ ನಡುವೆ ಓಡುತ್ತಿತ್ತು. ಈ ಮಾರ್ಗವು ಉತ್ತರ ದಿಲ್ಲಿಯನ್ನು ಗುರುಗ್ರಾಮದೊಂದಿಗೆ ಜೋಡಿಸುತ್ತದೆ.
ಮೆಟ್ರೋ ವಕ್ತಾರ ಮಾಧ್ಯಮದೊಂದಿಗೆ ಈ ವಿಲಕ್ಷಣಕಾರಿ ಘಟನೆಯ ಬಗ್ಗೆ ಮಾತನಾಡುತ್ತಾ, “ಸಮಸ್ಯೆ ಕೇವಲ ಒಂದು ಬಾಗಿಲಿಗೆ ಸಂಬಂಧ ಪಟ್ಟು ಮಾತ್ರವೇ ಇತ್ತು. ಅದನ್ನು ಆ ಸಂದರ್ಭದಲ್ಲಿ ಡಿಎಂಆರ್‌ಸಿ ಸಿಬಂದಿ ಕಾವಲು ಕಾದಿದ್ದಾರೆ. ಘಟನೆಯ ಬಳಿಕ ರೈಲನ್ನು ವಿಶ್ವವಿದ್ಯಾಲಯ ಸ್ಟೇಶನ್‌ಗೆ ಒಯ್ಯಲಾಗಿ ಯಾವುದೇ ಸಂಭಾವ್ಯ ವಿಬಂಬ ಅಥವಾ ನೂಕುನುಗ್ಗಲನ್ನು ನಿವಾರಿಸಲಾಯಿತು’ ಎಂದು ಹೇಳಿದ್ದಾರೆ.
2014ರ ಜುಲೈ ತಿಂಗಳಲ್ಲೂ ಒಮ್ಮೆ ಇದೇ ರೀತಿಯ ಘಟನೆ ಸಂಭವಿಸಿತ್ತು. ಆಗ ಮೆಟ್ರೋ ರೈಲು ತೋರ್‌ನೀ ಮತ್ತು ಅರ್ಜನ್‌ಗಢ ನಡುವೆ ಓಡುತ್ತಿತ್ತು ಮತ್ತು ಯೆಲ್ಲೋ ಲೈನ್‌ನಲ್ಲಿ ಅದರ ಎಲ್ಲ ಬಾಗಿಲುಗಳು ತೆರೆದುಕೊಂಡಿದ್ದವು. ಈ ಘಟನೆಯ ಬೆನ್ನಿಗೇ ಸುರಕ್ಷೆಯ ಲೋಪಕ್ಕಾಗಿ ಮೆಟ್ರೋ ಚಾಲಕನನ್ನು ಅಮಾನತು ಮಾಡಲಾಗಿತ್ತು.
ದಿಲ್ಲಿ ಮೆಟ್ರೋದ ಯೆಲ್ಲೋ ಲೈನ್ ಗುರ್ಗಾಂವ್‌ನ ಹುದಾ ನಗರ ಕೇಂದ್ರವನ್ನು ಉತ್ತರ ದಿಲ್ಲಿಯ ಸಮಯ್‌ಪುರ್ ಬದ್ಲಿ ಜತೆಗೆ ಜೋಡಿಸುತ್ತದೆ.
#WATCH: At around 10 pm #Delhi Metro ran with its doors open between Chawri Bazar & Kashmiri Gate stations on the yellow line.(Mobile Video) pic.twitter.com/ciwH0ckyEF
— ANI (@ANI) September 11, 2017
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.