ದಿಲ್ಲಿಯಲ್ಲಿ ರಿವರ್ಸ್ ಲವ್ ಜಿಹಾದ್: ಹಿಂದೂ ಪ್ರಿಯಕರನ ಹತ್ಯೆ
Team Udayavani, Feb 3, 2018, 4:44 PM IST
ಹೊಸದಿಲ್ಲಿ : ದಿಲ್ಲಿಯಲ್ಲಿ ರಿವರ್ಸ್ ಲವ್ ಜಿಹಾದ್ ಪ್ರಕರಣವೊಂದು ವರದಿಯಾಗಿದೆ.
ಇಲ್ಲಿನ ಓರ್ವ ವೃತ್ತಿಪರ ಫೋಟೋಗ್ರಾಫರ್‌ನನ್ನು ಆತನ ಮುಸ್ಲಿ ಗರ್ಲ್ ಫ್ರೆಂಡ್ ಮನೆಯವರು ಇರಿದು ಕೊಂದಿರುವುದಾಗಿ ವರದಿಯಾಗಿದೆ. ಈ ಕೊಲೆ ಪ್ರಕರಣದಿಂದಾಗಿ ಇಲ್ಲೀಗ ಕೋಮು ಉದ್ರಿಕ್ತತೆ ತಲೆದೋರಿದ್ದು ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲು ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದಾರೆ.
ಪೊಲೀಸರು ಕೊಲೆ ಪ್ರಕರಣವನ್ನು ದಾಖಲಿಸಿಕೊಂಡು ಮುಸ್ಲಿಂ ಮಹಿಳೆಯ ತಾಯಿ, ತಂದೆ, ಅಣ್ಣ ಮತ್ತು ಚಿಕ್ಕಪ್ಪನನ್ನು ಕೊಲೆ ಆರೋಪದಲ್ಲಿ ಬಂಧಿಸಿದ್ದಾರೆ.
20 ವರ್ಷದ ತನ್ನ ಮುಸ್ಲಿಂ ಗರ್ಲ್ ಫ್ರೆಂಡ್ ಶೆಹಾಜಾದಿ ಯೊಂದಿಗೆ 23ರ ಹರೆಯದ ಅಂಕಿತ್ ಸಕ್ಸೇನಾ ನಿಗೆ ಕಳೆದ ಮೂರು ವರ್ಷಗಳಿಂದಲೂ ಪ್ರೇಮ ಸಂಬಂಧವಿತ್ತು. ಇವರಿಬ್ಬರೂ ನೆರಕರೆಯವರಾಗಿದ್ದು ಡೇಟಿಂಗ್ ನಡೆಸುತ್ತಿದ್ದರು. ಇವರ ಪ್ರೇಮ ಸಂಬಂಧಕ್ಕೆ ಹುಡುಗಿಯ ಮನೆಯವರ ತೀವ್ರ ವಿರೋಧವಿತ್ತು.
ಗುರುವಾರ ರಾತ್ರಿ 9 ಗಂಟೆಯ ಸುಮಾರಿಗೆ ಶೆಹಜಾದಿ ಮನೆಯವರು ಅಂಕಿತ್ ಮನೆ ಮುಂದೆ ಜಮಾಯಿಸಿ ಆತನನ್ನು ಹೊರಗೆ ಬರುವಂತ ಕೂಗಿದರು. ಅಂತೆಯೇ ಆತ ಹೊರ ಬಂದಾಗ ಶೆಹಜಾದಿ ಮನೆಯವರು ಆತನ ಮೇಲೆ ಮಾರಣಾಂತಿ ಹಲ್ಲೆ ಮಾಡಿದರು; ಚೂರಿಯಿಂದ ಆತನ ಕತ್ತು ಸೀಳಿದರು ಎಂದು ಆತನ ಕುಟುಂಬದವರು ಹೇಳಿದ್ದಾರೆ.
ಮಗನನ್ನು ಪಾರು ಮಾಡಲು ಅಂಕಿತ್ ತಾಯಿ ಮನೆಯಿಂದ ಹೊರಗೋಡಿ ಬಂದಾಗ ಅಂಕಿತ್ ರಕ್ತದ ಮಡುವಿನಲ್ಲಿ ಬಿದ್ದಿದ್ದ. ರಸ್ತೆ ತುಂಬ ರಕ್ತ ಕೋಡಿ ಹರಿದಿತ್ತು.
ಆ ಹೊತ್ತಿಗೆ ಶೆಹಜಾದಿ, ಅಂಕಿತ್ ಗಾಗಿ ಪಶ್ಚಿಮ ದಿಲ್ಲಿಯ ಮೆಟ್ರೋ ಸ್ಟೇಶನ್ ಬಲಿ ಕಾಯುತ್ತಿದ್ದಳು ಎನ್ನಲಾಗಿದೆ.
ಅಂಕಿತ್ ಸಕ್ಸೇನಾ ಕೊಲೆಯಿಂದಾಗಿ ಈ ಪ್ರದೇಶದಲ್ಲೀಗ ಉದ್ರಿಕ್ತತೆ ತಲೆದೋರಿದೆ. ಪೊಲೀಸರು ಬಿಗಿ ಬಂದೋಬಸ್ತು ಏರ್ಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi: ಬಿಗಡಾಯಿಸಿದ ವಾಯುಮಾಲಿನ್ಯ… ಕೃತಕ ಮಳೆಗೆ ಅನುಮತಿ ಕೋರಿ ಕೇಂದ್ರಕ್ಕೆ ಪತ್ರ
Dense Smog: ಸರಣಿ ಅಪಘಾತ… ಇಬ್ಬರು ಮೃತ್ಯು, ಹಲವು ಮಂದಿಗೆ ಗಾಯ
Video: ಮದುವೆ ಸಂಭ್ರಮದಲ್ಲಿದ್ದ ವರನಿಗೆ ಹೃದಯಾಘಾತ… ಆಸ್ಪತ್ರೆ ದಾರಿ ಮಧ್ಯೆ ಮೃತ್ಯು
Maharastra: ಕಾರಿನ ಮೇಲೆ ಕಲ್ಲು ತೂರಾಟ… ಮಾಜಿ ಸಚಿವ ಅನಿಲ್ ದೇಶಮುಖ್ ಹಣೆಗೆ ಗಾಯ
Assembly Election: ಮಹಾರಾಷ್ಟ್ರ ಕದನದಲ್ಲಿ ಘಟಾನುಘಟಿಗಳ ಭವಿಷ್ಯ ಪಣಕ್ಕೆ
MUST WATCH
ಹೊಸ ಸೇರ್ಪಡೆ
Canada: ವಾಲ್‌ಮಾರ್ಟ್ ಓವನ್‌ನಲ್ಲಿ ಭಾರತೀಯ ಮೂಲದ ಯುವತಿಯ ಶವ: ಕೆನಡಾ ಪೊಲೀಸರು ಹೇಳಿದ್ದೇನು?
IFFI Goa 2024: ಚಿತ್ರ ನವಿಲಿಗೆ ಹೊಸ ಬಣ್ಣ; ಬೆಳಗ್ಗೆ ಚಿತ್ರಾವತಿ ಕಣ್ಣು ತೆರೆಯುವುದಣ್ಣ!
Mangaluru: ರಾಜ್ಯದ 2ನೇ ಐಟಿ ಕೇಂದ್ರವಾಗಿ ಅಭಿವೃದ್ಧಿಗೆ ಅವಕಾಶ ಇದ್ದರೂ ಆದ್ಯತೆ ನೀಡದ ಸರಕಾರ
Lockdown Days: ಲಾಕ್‌ಡೌನ್ ಎಂಬ ದಪ್ಪಕ್ಷರದಲ್ಲಿ ಬರೆದ ಇತಿಹಾಸ!
UV Fusion: ಮಾತಲ್ಲಿರಲಿ ಗಮ್ಮತ್ತು; ಅಳತೆ ಮೀರಿದರೆ ಆಪತ್ತು…
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.