NCW ಮುಖ್ಯಸ್ಥೆ ವಿರುದ್ಧ ಅವಹೇಳನಕಾರಿ ಪದ: ಮಹುವಾ ಮೊಯಿತ್ರಾ ವಿರುದ್ಧ ಎಫ್‌ಐಆರ್
Team Udayavani, Jul 7, 2024, 6:45 PM IST
ಹೊಸದಿಲ್ಲಿ: ರಾಷ್ಟ್ರೀಯ ಮಹಿಳಾ ಆಯೋಗದ (NCW) ಮುಖ್ಯಸ್ಥೆ ರೇಖಾ ಶರ್ಮ ಅವರ ವಿರುದ್ಧ ಟೀಕೆಗಳ ಕುರಿತು ಕೃಷ್ಣನಗರ ಸಂಸದೆ ಮತ್ತು ತೃಣಮೂಲ ಕಾಂಗ್ರೆಸ್ ನಾಯಕಿ ಮಹುವಾ ಮೊಯಿತ್ರಾ ವಿರುದ್ಧ ದೆಹಲಿ ಪೊಲೀಸ್ ಐಎಫ್‌ಎಸ್‌ಒ ಘಟಕ ಭಾನುವಾರ ಎಫ್‌ಐಆರ್ ದಾಖಲಿಸಿದೆ.
ಮೊಯಿತ್ರಾ ಅವರ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 79 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ, (ಇದು ಮಹಿಳೆಯ ನಮ್ರತೆಯನ್ನು ಆಕ್ರೋಶಗೊಳಿಸುವ ಉದ್ದೇಶದ ಕೆಲಸ, ಸನ್ನೆ ಅಥವಾ ಕೃತ್ಯಕ್ಕೆ ಸಂಬಂಧಿಸಿದೆ)
ಇದಕ್ಕೂ ಮೊದಲು, ಎನ್‌ಸಿಡಬ್ಲ್ಯು ಮೊಯಿತ್ರಾ ಅವರ ಹೇಳಿಕೆಗಳನ್ನು ಸ್ವಯಂಪ್ರೇರಿತವಾಗಿ ಪರಿಗಣಿಸಿತ್ತು ಮತ್ತು ಅವರ ವಿರುದ್ಧ ಎಫ್‌ಐಆರ್ ಅನ್ನು ಕೋರಿತ್ತು.
ಜುಲೈ 4 ರಂದು, ಉತ್ತರ ಪ್ರದೇಶದ ಹಥರಸ್‌ನಲ್ಲಿ ಕಾಲ್ತುಳಿತದ ದುರ್ಘಟನಾ ಸ್ಥಳಕ್ಕೆ ರೇಖಾ ಶರ್ಮಅವರು ಆಗಮಿಸುತ್ತಿರುವುದನ್ನು ತೋರಿಸುವ ವಿಡಿಯೋವನ್ನು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದ ಮೊಯಿತ್ರಾ, “ತನ್ನ ಬಾಸ್‌ನ ಪೈಜಾಮಾವನ್ನು ಹಿಡಿದುಕೊಳ್ಳುವಲ್ಲಿ ನಿರತಳಾಗಿದ್ದಾರೆ” ಎಂದು ಬರೆದಿದ್ದರು. ಆಕ್ರೋಶದ ನಂತರ ತಮ್ಮ ಪೋಸ್ಟ್ ಅನ್ನು ಅಳಿಸಿದ್ದರು. ಮೂಲ ಪೋಸ್ಟ್‌ನಲ್ಲಿ ಒಬ್ಬ ವ್ಯಕ್ತಿ ಕೊಡೆ ಹಿಡಿದುಕೊಂಡು ರೇಖಾ ಶರ್ಮ ಅವರ ಹಿಂದೆ ನಡೆಯುವುದನ್ನು ಕಾಣಬಹುದಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Threat Call: ಸಲ್ಮಾನ್ ಖಾನ್ ಬಳಿಕ ಬಾಲಿವುಡ್ ನಟ ಶಾರುಖ್ ಖಾನ್ ಗೂ ಜೀವ ಬೆದರಿಕೆ
Jammu-Kashmir: ಕುಪ್ವಾರದಲ್ಲಿ ಸೇನಾ ಕಾರ್ಯಾಚರಣೆ… ಉಗ್ರನ ಹ*ತ್ಯೆ, ಶಸ್ತ್ರಾಸ್ತ್ರ ವಶ
Supreme court: ರಾಜಿ ಮಾಡಿಕೊಂಡರೂ ಲೈಂ*ಗಿಕ ಕಿರುಕುಳ ಪ್ರಕರಣ ರದ್ದುಪಡಿಸಲು ಸಾಧ್ಯವಿಲ್ಲ…
LMV ಲೈಸನ್ಸ್ ಇದ್ದರೆ ಸರಕು ವಾಹನ ಚಲಾಯಿಸಿ… 7.5 ಟನ್‌ವರೆಗಿನ ವಾಹನ ಓಡಿಸಲು ಅನುಮತಿ
Jammu and Kashmir Assembly: ಕಾಶ್ಮೀರ ವಿಶೇಷ ಸ್ಥಾನಮಾನ ಕೋರಿ ಅಸೆಂಬ್ಲಿಯಲ್ಲಿ ಗಲಾಟೆ
MUST WATCH
ಹೊಸ ಸೇರ್ಪಡೆ
Kota: ಪಾದಚಾರಿ ಮಾರ್ಗದಲ್ಲೂ ಹೊಂಡ!
Muddebihal: ಅತ್ಯಾಚಾರ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಲು ಆಗ್ರಹಿಸಿ ಪ್ರತಿಭಟನೆ
Hagaribommanahalli: ಹಳಿ ದಾಟುತ್ತಿರುವಾಗ ರೈಲು ಡಿಕ್ಕಿ ಹೊಡೆದು ವ್ಯಕ್ತಿ ಸಾವು
Mangalore: ಲೋವರ್ ಬೆಂದೂರ್‌ವೆಲ್-ಕರಾವಳಿ ವೃತ್ತ ರಸ್ತೆ ಅವ್ಯವಸ್ಥೆ
Waqf issue: ಬಿಜೆಪಿ ಅಧಿಕಾರದಲ್ಲಿದ್ದಾಗ ಕತ್ತೆ ಕಾಯಿತಿದ್ದರಾ?: ಪ್ರಿಯಾಂಕ್ ಖರ್ಗೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.