
ದಿಲ್ಲಿಯಲ್ಲಿ ಭಾರೀ ಶೂಟೌಟ್: ಇನಾಮು ಹೊಂದಿದ್ದ ಗ್ಯಾಂಗ್‌ಸ್ಟರ್ ಸೆರೆ
Team Udayavani, Feb 6, 2017, 10:59 AM IST

ಹೊಸದಿಲ್ಲಿ : ಇಂದು ಬೆಳಿಗ್ಗೆ ಇಲ್ಲಿನ ನೆಹರೂ ಪ್ಲೇಸ್ ಸಮೀಪ ದಿಲ್ಲಿ ಪೊಲೀಸರು ಮತ್ತು ಕ್ರಿಮಿನಲ್‌ಗಳ ನಡುವೆ ಭಾರೀ ಗುಂಡಿನ ಕಾಳಗ ನಡೆದಿದೆ. ಪೊಲೀಸರಿಂದ ಸೆರೆ ಹಿಡಿಯಲ್ಪಟಿಟರುವ ಗ್ಯಾಂಗ್‌ಸ್ಟರ್ ಒಬ್ಟಾತನ ಮೇಲೆ ಈ ಹಿಂದೆ 25,000 ರೂ.ಗಳ ಇನಾಮು ಘೋಷಿಸಲಾಗಿತ್ತು.
ಮಾಧ್ಯಮಗಳ ವರದಿಯ ಪ್ರಕಾರ ಈ ಎನ್‌ಕೌಂಟರ್‌ನಲ್ಲಿ ಸುಮಾರು 13 ಸುತ್ತಗಳ ಗುಂಡಿನ ಹಾರಾಟ ನಡೆದಿದೆ. ಇಬ್ಬರು ಪೊಲೀಸರು ಗಾಯಗೊಂಡಿದ್ದಾರೆ.
ಇಬ್ಬರು ಕ್ರಿಮಿನಲ್‌ಗಳು ಎಂಟು ಸುತ್ತುಗಳ ಗುಂಡಿನ ಹಾರಾಟ ನಡೆಸಿದ್ದಾರೆ. ಇದನ್ನು ಅನುಸರಿಸಿ ಪೊಲೀಸರು ಐದು ಸುತ್ತುಗಳ ಗುಂಡು ಹಾರಾಟ ನಡೆಸಿದ್ದಾರೆ. ತಾವು ಬುಲೆಟ್ ಪ್ರೂಫ್ ಜ್ಯಾಕೆಟ್ ತೊಟ್ಟಿದ್ದರಿಂದ ಪ್ರಾಣಾಪಾಯವಾಗುವುದು ತಪ್ಪಿತೆಂದು ಪೊಲೀಸರು ಹೇಳಿದ್ದಾರೆ.
ಗುಂಡು ಹಾರಾಟದಲ್ಲಿ ಭಾಗಿಯಾಗಿಉವ ಇಬ್ಬರು ಕ್ರಿಮಿನಲ್‌ಗಳನ್ನು ಅನುಕ್ರಮವಾಗಿ ಅಕ್‌ಬರ್ ಮತ್ತು ಶಾಹಿದ್ ಎಂದು ಗುರುತಿಸಲಾಗಿದೆ. ಇವರಲ್ಲಿ 25,000 ರೂ.ಗಳ ಇನಾಮು ಹೊಂದಿದ್ದ ಕ್ರಿನಿನಲ್ ಅಕ್‌ಬರ್‌ನನ್ನು ಪೊಲೀಸರು ಸೆರೆ ಹಿಡಿದಿದ್ದಾರೆ. ಶಾಹೀದ್ ತಪ್ಪಿಸಿಕೊಂಡಿದ್ದಾನೆ.
ಅಕ್‌ಬರ್, ಕೊಲೆ, ದರೋಡೆ, ಕಳವು, ಕೊಲೆ ಯತ್ನ ಮುಂತಾದ ಅಪರಾಧಗಳಲ್ಲಿ ಪೊಲೀಸರಿಗೆ ಬೇಕಾದವನಾಗಿದ್ದಾನೆ.
ಟಾಪ್ ನ್ಯೂಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ambedkar Remarks: ಕನಸಲ್ಲೂ ಅಂಬೇಡ್ಕರ್‌ರನ್ನು ಅವಮಾನಿಸಿಲ್ಲ: ಅಮಿತ್ ಶಾ

Hydarabad: ಪುಷ್ಪ-2 ಚಿತ್ರದ ಪ್ರದರ್ಶನ ವೇಳೆ ಗಾಯಗೊಂಡಿದ್ದ ಬಾಲಕನ ಸ್ಥಿತಿ ಗಂಭೀರ

ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್

Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ

Mumbai: ಗೇಟ್‌ವೇ ಆಫ್ ಇಂಡಿಯಾ ಬಳಿ ಮುಳುಗಿದ 67 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು
MUST WATCH
ಹೊಸ ಸೇರ್ಪಡೆ

Mangaluru: ಇನ್ನು ಯುಪಿಐ ಮೂಲಕವೂ ಟ್ರಾಫಿಕ್ ದಂಡ ಪಾವತಿ

Sri Krishnadevaraya ವಿ.ವಿ.ಗೆ ಮಂಗಳಮುಖಿ ಅತಿಥಿ ಉಪನ್ಯಾಸಕಿ; ರಾಜ್ಯದಲ್ಲೇ ಮೊದಲು

Mangaluru: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: 1.15 ಕೋ.ರೂ. ಚಿನ್ನ, ಕೇಸರಿ ಪತ್ತೆ

Winter Session: ಬಾಣಂತಿ ಸಾವು: ನ್ಯಾಯಾಂಗ ತನಿಖೆಗೆ ಬಿಜೆಪಿ ಪಟ್ಟು

United Nations: ನಾಡಿದ್ದು ವಿಶ್ವ ಧ್ಯಾನ ದಿನ: ಶ್ರೀ ರವಿಶಂಕರ್ ನೇತೃತ್ವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.