ದಿಲ್ಲಿ ವಿವಿ:ಸ್ನೇಹಿತರಿಂದಲೇ ವಿದ್ಯಾರ್ಥಿನಿಯ ಮೇಲೆ ಗ್ಯಾಂಗ್ ರೇಪ್
Team Udayavani, Feb 26, 2017, 3:11 PM IST
ಹೊಸದಿಲ್ಲಿ: ರಾಷ್ಟ್ರ ರಾಜಧಾನಿಯಲ್ಲಿ ಮಹಿಳೆಯರ ಮೇಲೆ ಅಮಾನುಷವಾಗಿ ನಡೆಯುತ್ತಿರುವ ಲೈಂಗಿಕ ದೌರ್ಜನ್ಯ ಪ್ರಕರಣಗಳು ಮುಂದುವರಿದಿದ್ದು, ಹೊಸ ಸೇರ್ಪಡೆ ಎಂಬಂತೆ ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯೊಬ್ಬಳ ಮೇಲೆ ಆಕೆಯ ಪರಿಚತರೆ ಆದ 6 ಮಂದಿ ಗ್ಯಾಂಗ್ ರೇಪ್ ಎಸಗಿರುವ ಘಟನೆ ನಡೆದಿದೆ.
ಫೆಬ್ರವರಿ 3 ರಂದು ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. 20 ವರ್ಷ ಪ್ರಾಯದ ಸಂತ್ರಸ್ತ ಪಿಜಿಡಿಎವಿ ವಿದ್ಯಾರ್ಥಿನಿ ಸ್ನೇಹಿತರೆ ಆಗಿದ್ದ 6 ಮಂದಿ ವಿದಾರ್ಥಿಗಳು ಫರಿದಾಬಾದ್ನಲ್ಲಿ ಗ್ಯಾಂಗ್ ರೇಪ್ ನಡೆಸಿರುವ ಬಗ್ಗೆ ನೆಹರೂ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.
ಗೌರವ್ ಮತ್ತು ಸನ್ನಿ ಎಂಬ ಇಬ್ಬರು ಸ್ನೇಹಿತರು ಸಂತ್ರಸ್ತೆಯನ್ನು ಪಾರ್ಟಿಗೆಂದು ಕೆರೆಸಿಕೊಂಡು ಇನ್ನೋರ್ವ ಗೆಳೆಯ ಸಚಿನ್ನ ಬೈಕ್ನಲ್ಲಿ ಫರೀದಾಬಾದ್ಗೆ ಬಂದು ಅಲ್ಲಿ ಇನ್ನೋರ್ವ ಸ್ನೇಹಿತ ರೋಹ್ತಾಶ್ ಎಂಬಾತನ ಮನೆಯಲ್ಲಿ ಐವರು ಗ್ಯಾಂಗ್ ರೇಪ್ ಎಸಗಿದ್ದು, ಬಳಿಕ ಕಾರ್ ಪಾರ್ಕಿಂಗ್ನಲ್ಲಿ ವಿನೋದ್ ಎಂಬಾತ ರೇಪ್ ನಡೆಸಿರುವ ಬಗ್ಗೆ ಪೊಲೀಸರು ತಿಳಿಸಿದ್ದಾರೆ.
ಕಾರ್ಯಾಚರಣೆ ನಡೆಸಿರುವ ಪೊಲೀಸರು ಆರೋಪಿಗಳಾದ 6 ಮಂದಿ ವಿದ್ಯಾರ್ಥಿಗಳನ್ನೂ ವಶಕ್ಕೆ ಪಡೆದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.