ಡೆಲ್ಟಾ ರೂಪಾಂತರಿಯೇ ಮುಂದೆ ದೊಡ್ಡ ಸವಾಲು
Team Udayavani, Jul 2, 2021, 6:10 AM IST
ಹೊಸದಿಲ್ಲಿ/ವಿಶ್ವಸಂಸ್ಥೆ: ಕೊರೊನಾದ ಹೊಸ ರೂಪಾಂತರಿ ಡೆಲ್ಟಾ ಮುಂದಿನ ದಿನಗಳಲ್ಲಿ ಪ್ರಧಾನ ಸಮಸ್ಯೆಯಾಗಿ ಪರಿಣಮಿಸಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ. ಜೂ.29ಕ್ಕೆ ಕೊನೆಗೊಂಡ ಮಾಹಿತಿ ಪ್ರಕಾರ ಡೆಲ್ಟಾ ರೂಪಾಂತರಿ ಸೋಂಕು 96 ದೇಶಗಳಲ್ಲಿ ದೃಢಪಟ್ಟಿದೆ.
ಮುಂದಿನ ದಿನಗಳಲ್ಲಿ ಈ ರೂಪಾಂತರಿಯೇ ಅತ್ಯಂತ ಹೆಚ್ಚು ಪ್ರಮಾಣದಲ್ಲಿ ಹಬ್ಬುವ ಸೋಂಕಾಗಿ ಪರಿಣಮಿಸಲಿದೆ. ಇದರಿಂದಾಗಿ ಹೆಚ್ಚಿನ ಸಂಖ್ಯೆಯ ಜನ ಸೋಂಕಿತರಾಗಿ ಆಸ್ಪತ್ರೆಗಳಲ್ಲಿ ದಾಖಲಾಗುವವರ ಸಂಖ್ಯೆಯೂ ಹೆಚ್ಚಾಗಲಿದೆ. ಈಗಿನ ಪ್ರಮಾಣವನ್ನು ಊಹಿಸಿಕೊಂಡರೆ, ಹಾಲಿ ಇರುವ ರೂಪಾಂತರಿ ಸೋಂಕುಗಳಿಗಿಂತ ಡೆಲ್ಟಾ ಮಾದರಿಯೇ ಹೆಚ್ಚು ಅನಾಹುತಕಾರಿಯಾಗಿ ಪರಿಣಮಿಸಲಿದೆ ಎಂದಿದೆ.
ಮತ್ತೆ ಹೆಚ್ಚಳ: ಐರೋಪ್ಯ ಒಕ್ಕೂಟದ ರಾಷ್ಟ್ರಗಳಲ್ಲಿ ಎರಡು ತಿಂಗಳುಗಳಿಂದ ಕಡಿಮೆ ಹಂತದಲ್ಲಿದ್ದ ಕೊರೊನಾ ಸೋಂಕು ಪ್ರಕರಣಗಳ ಸಂಖ್ಯೆ ಗುರುವಾರ ಹೆಚ್ಚಾಗಿದೆ. ಕಳೆದ ವಾರಕ್ಕೆ ಹೋಲಿಕೆ ಮಾಡಿದರೆ, ಈ ವಾರ ಸೋಂಕು ಪ್ರಕರಣ ಶೇ.10ರಷ್ಟು ಹೆಚ್ಚಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ಇದೇ ವೇಳೆ, ಭಾರತದಲ್ಲಿ ಬುಧವಾರದಿಂದ ಗುರುವಾರಕ್ಕೆ 24 ಗಂಟೆಗಳಲ್ಲಿ 48,786 ಪ್ರಕರಣಗಳು ಪತ್ತೆಯಾಗಿ, 1005 ಮಂದಿ ಅಸುನೀಗಿದ್ದಾರೆ. ಗುಣಮುಖ ಪ್ರಮಾಣ ಶೇ.96.97ಕ್ಕೇರಿಕೆಯಾಗಿದೆ.
ಅನುಮತಿಗೆ ಝೈಡಸ್ ಅರ್ಜಿ :
ಝೈಡಸ್ ಕ್ಯಾಡಿಲಾ ಕಂಪೆನಿಯು ತನ್ನ ಲಸಿಕೆಗೆ ತುರ್ತು ಬಳಕೆಗೆ ಅನುಮತಿ ಕೋರಿ ಭಾರತೀಯ ಔಷಧ ಮಹಾನಿರ್ದೇಶನಾಲಯ(ಡಿಸಿಜಿಐ)ಕ್ಕೆ ಅರ್ಜಿ ಸಲ್ಲಿಸಿದೆ. ಈವರೆಗೆ ಭಾರತದ 50 ಕೇಂದ್ರಗಳಲ್ಲಿ ಅತೀ ದೊಡ್ಡ ಕ್ಲಿನಿಕಲ್ ಟ್ರಯಲ್ ಅನ್ನು ಕೈಗೊಂಡಿರುವುದಾಗಿ ಕಂಪೆನಿ ತಿಳಿಸಿದೆ. ಇದೇ ವೇಳೆ, ಭಾರತದಲ್ಲಿ ರಷ್ಯಾದ ಸಿಂಗಲ್ ಡೋಸ್ ಲಸಿಕೆ ಸ್ಪುಟ್ನಿಕ್ ಲೈಟ್ ಅನ್ನು 3ನೇ ಹಂತದ ಪ್ರಯೋಗಕ್ಕೆ ಒಳಪಡಿಸಲು ಡಾ| ರೆಡ್ಡೀಸ್ ಲ್ಯಾಬೊರೇಟರೀಸ್‌ಗೆ ಕೇಂದ್ರ ಸರಕಾರದ ವಿಷಯ ತಜ್ಞರ ಸಮಿತಿ ಅನುಮತಿ ನಿರಾಕರಿಸಿದೆ.
ಕೆಲವು ಬಡ ದೇಶಗಳಲ್ಲಿ ಇನ್ನೂ ಆರೋಗ್ಯ ಸಿಬಂದಿಗೇ ಲಸಿಕೆ ನೀಡಲಾಗಿಲ್ಲ. ಇಂಥ ಅಸಮಾನತೆ ಕಳವಳಕಾರಿ. ಪ್ರತಿಯೊಂದು ದೇಶದ ಕನಿಷ್ಠ ಶೇ.10ರಷ್ಟು ಜನರಿಗೆ ಸೆಪ್ಟಂಬರ್ ವೇಳೆಗೆ ಲಸಿಕೆ ವಿತರಣೆಯಾಗಬೇಕು. ಏಕೆಂದರೆ ಎಲ್ಲೆಡೆಯೂ ಸೋಂಕು ನಿರ್ನಾಮವಾಗದ ಹೊರತು, ಎಲ್ಲೂ ಸೋಂಕು ನಿರ್ನಾಮವಾಗದು.-ಡಾ| ಟೆಡ್ರೋಸ್ ಘೆಬ್ರೆಯೇಸಸ್, ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು
Tragedy: ರೈಲು ಹಳಿ ಮೇಲೆ ಕೂತು PUBG ಆಡುತ್ತಿದ್ದ ಮೂವರು ಯುವಕರ ದೇಹ ಛಿದ್ರ ಛಿದ್ರ…
Fog: ಉತ್ತರ ಭಾರತದಲ್ಲಿ ದಟ್ಟ ಮಂಜು, ಶೂನ್ಯ ಗೋಚರತೆ: ವಿಮಾನ, ರೈಲು ಸಂಚಾರದ ಮೇಲೆ ಪರಿಣಾಮ
Video: ವೇದಿಕೆ ಮೇಲಿಂದ ಕೆಳಗೆ ಬಿದ್ದ ಕೇರಳ ಶಾಸಕಿ ಉಮಾ ಥಾಮಸ್… ಸ್ಥಿತಿ ಗಂಭೀರ
Fraud; ಯುವಕರು, ಸ್ತ್ರೀಯರನ್ನು ಗುರಿಯಾಗಿಸಿ ಹೂಡಿಕೆ ವಂಚನೆ: ಕೇಂದ್ರ ಎಚ್ಚರಿಕೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Congress; ಔತಣಕೂಟದ ಸಭೆಗೆ ರಾಜಕೀಯ ಮಹತ್ವ ಬೇಕಿಲ್ಲ: ಸತೀಶ್ ಜಾರಕಿಹೊಳಿ
Udupi: ಬೀದಿ ನಾಯಿಗಳಿಗೆ 29.13 ಲಕ್ಷ ರೂ. ವೆಚ್ಚ!
Hubli; ಅಧಿಕಾರಕ್ಕಾಗಿ ಕಾಂಗ್ರೆಸ್ ಯಾವ ಕೀಳು ಮಟ್ಟಕ್ಕೆ ಇಳಿಯಲು ಹೇಸಲ್ಲ: ಪ್ರಹ್ಲಾದ ಜೋಶಿ
Mangaluru: ಪಿಎಂ ಸ್ವನಿಧಿ ಯೋಜನೆ; ನಗರದಲ್ಲಿ 17.87 ಕೋ.ರೂ. ಸಾಲ ವಿತರಣೆ
Shimoga; ಕಾಂಗ್ರೆಸ್ ಸರಕಾರ ಹಿಂದೂ ಸಮಾಜದ ತಾಳ್ಮೆ ಪರೀಕ್ಷೆ ಮಾಡುತ್ತಿದೆ: ಈಶ್ವರಪ್ಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.