ವಿವಿಗಳಿಗೆ ನಿಧಿ ಸಂಗ್ರಹ ಸ್ವಾತಂತ ನೀಡಲು ಆಗ್ರಹ
Team Udayavani, Jan 17, 2018, 6:15 AM IST
ನವದೆಹಲಿ: ವಿಶ್ವವಿದ್ಯಾಲಯಗಳು ಇತರ ಮಾದರಿಯಲ್ಲಿ ನಿಧಿ ಸಂಗ್ರಹಿಸಲು ಕೇಂದ್ರ ಅನುವು ಮಾಡಿಕೊಡಬೇಕು. ಜತೆಗೆ ಉನ್ನತ ಶಿಕ್ಷಣದಲ್ಲಿ ಲಾಭದ ಉದ್ದೇಶವಿಲ್ಲದ ಕಂಪನಿಗಳ ಮೂಲಕ ಹಣ ಸಂಗ್ರಹಿಸಲು ಅನುಮತಿ ನೀಡಬೇಕು ಎಂದು ಕರ್ನಾಟಕ ಸರ್ಕಾರ ಒತ್ತಾಯಿಸಿದೆ. ನವದೆಹಲಿಯಲ್ಲಿ ಮಂಗಳವಾರ ಮುಕ್ತಾಯವಾದ ಶಿಕ್ಷಣಕ್ಕಾಗಿ ಕೇಂದ್ರ ಸಲಹಾ ಮಂಡಳಿ (ಸಿಎಬಿಇ)ಸಭೆಯಲ್ಲಿ ಕರ್ನಾಟಕದ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಈ ಒತ್ತಾಯ ಮಾಡಿದ್ದಾರೆ. ಜತೆಗೆ ದೇಶದ ಪ್ರತಿ ರಾಜ್ಯದಲ್ಲಿಯೂ ಕೌಶಲ ವಿಶ್ವವಿದ್ಯಾನಿಲಯ (ಸ್ಕಿಲ್ ಯುನಿವರ್ಸಿಟಿ) ಆರಂಭಿಸುವ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಸಲಹೆ ಮಾಡಿದ್ದಾರೆ.
ಉನ್ನತ ಶಿಕ್ಷಣಕ್ಕೆ ನೀಡುತ್ತಿರುವ ಹಣಕಾಸಿನ ನೆರವನ್ನು ಮುಂದಿನ ದಿನಗಳಲ್ಲಿ ಹೆಚ್ಚಿಸಬೇಕು. ವಿವಿಗಳಿಗೆ ಹಾಲಿ ಇರುವ ಹಣಕಾಸಿನ ಸ್ವಾತಂತ್ರ್ಯದ ಮಿತಿಯನ್ನು ಹೆಚ್ಚಿಸಬೇಕು ಎಂಬ ಅಂಶವನ್ನು ರಾಯರೆಡ್ಡಿ ಪ್ರತಿಪಾದಿಸಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನೆರವು ನೀಡುವ ವಿವಿಗಳ ನಡುವೆ ಯಾವುದೇ ರೀತಿಯಲ್ಲಿ ತಾರತಮ್ಯ ಉಂಟಾಗಬಾರದು ಎಂದು ಸಲಹೆ ನೀಡಿದ್ದಾರೆ.
ಆನ್‌ಲೈನ್ ಕೋರ್ಸ್‌ಗಳು: ಈ ನಡುವೆ ಮತ್ತೂಂದು ಮಹತ್ವದ ಬೆಳವಣಿಗೆಯಲ್ಲಿ ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತಾ ಮಂಡಳಿ (ನ್ಯಾಕ್)ಯಿಂದ ಎ ಪ್ಲಸ್ ಮತ್ತು ಎ ಪ್ಲಸ್ ಪ್ಲಸ್ ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಗಳು ಮೂರು ವರ್ಷಗಳ ಪದವಿ ಶಿಕ್ಷಣವನ್ನು ಆನ್‌ಲೈನ್‌ನಲ್ಲಿ ನೀಡಲಿವೆ. ಅವುಗಳನ್ನು ಇತರ ಸಾಮಾನ್ಯ ಪದವಿಯಂತೆಯೇ ಪರಿಗಣಿಸಲಾಗುತ್ತದೆ. ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಈ ಬಗ್ಗೆ ನಿಯಮಗಳನ್ನು ಸಿದ್ಧಪಡಿಸುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi ಮಿತಿ ಮೀರಿದ ವಾಯು ಮಾಲಿನ್ಯ: ಸರಕಾರಿ ಕಚೇರಿಗಳ 50% ಸಿಬಂದಿಗಳಿಗೆ ಮನೆಯಿಂದಲೇ ಕೆಲಸ
TTD Resolution: ಇನ್ನು ಹಿಂದೂಯೇತರರಿಂದ ತಿರುಮಲ ತಿರುಪತಿ ದೇವಸ್ಥಾನ ಮುಕ್ತ!
Order: ಬಾಕಿ ಹಣ ಕೊಡದ್ದಕ್ಕೆ ದಿಲ್ಲಿಯ ಹಿಮಾಚಲ ಭವನ ಹರಾಜು: ʼಕೈʼ ಸರಕಾರಕ್ಕೆ ಹಿನ್ನಡೆ
TTD: ತಿರುಪತಿ ದರ್ಶನ ಕಾಯುವಿಕೆ ಅವಧಿ ಇಳಿಕೆಗೆ ಕೃತಕ ಬುದ್ಧಿಮತ್ತೆ ಬಳಕೆ?
Pilot: ಕೆಲಸದ ಟೈಂ ಮುಗೀತು ಎಂದು ವಿಮಾನ ಹಾರಿಸದ ಏರ್ ಇಂಡಿಯಾ ಪೈಲಟ್!
MUST WATCH
ಹೊಸ ಸೇರ್ಪಡೆ
Football;ಕೇರಳದಲ್ಲಿ ಅಂತಾರಾಷ್ಟ್ರೀಯ ಪಂದ್ಯ ಆಡಲಿರುವ ದಿಗ್ಗಜ ಲಿಯೋನೆಲ್ ಮೆಸ್ಸಿ
Delhi ಮಿತಿ ಮೀರಿದ ವಾಯು ಮಾಲಿನ್ಯ: ಸರಕಾರಿ ಕಚೇರಿಗಳ 50% ಸಿಬಂದಿಗಳಿಗೆ ಮನೆಯಿಂದಲೇ ಕೆಲಸ
Thirthahalli: ಪಾದರಕ್ಷೆ, ಮೊಬೈಲ್ ನದಿ ದಡದಲ್ಲಿಟ್ಟು ವ್ಯಕ್ತಿ ನಾಪತ್ತೆ ಪ್ರಕರಣ; ಶವ ಪತ್ತೆ
Vertex Workspace ಸಂಸ್ಥೆಗೆ ಬೆಸ್ಟ್ ಇನ್ನೋವೇಟಿವ್ ಎಂಟರ್‌ಪೈಸ್ ಅವಾರ್ಡ್
Kulgeri: ಟ್ರ್ಯಾಕ್ಟರ್ ಹಿಂಬದಿಗೆ ಬೈಕ್ ಡಿಕ್ಕಿ; ಸವಾರ ಮೃತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.