ಭಾರತದಲ್ಲಿ ನಿರ್ಬಂಧ; ತೈಲ ಬೇಡಿಕೆಗೆ ಹೊಡೆತ
Team Udayavani, Apr 30, 2021, 7:20 AM IST
ಹೊಸದಿಲ್ಲಿ: ಜಗತ್ತಿನ 3ನೇ ತೈಲ ಆಮದು ರಾಷ್ಟ್ರ ಭಾರತದಲ್ಲಿನ ಕೋವಿಡ್ ನಿರ್ಬಂಧಗಳು, ತೈಲ ಮಾರುಕಟ್ಟೆಯಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಸುವ ಸಾಧ್ಯತೆ ಇದೆ. “ಭಾರತದಲ್ಲಿ ಸೋಂಕು ಹೀಗೆಯೇ ತೀವ್ರಗೊಂಡರೆ, ಜಾಗತಿಕ ತೈಲ ಬೇಡಿಕೆಯೇ ಗಣನೀಯವಾಗಿ ಕುಸಿಯಬಹುದು.
ಅಲ್ಲದೆ ಮಿತಿಮೀರಿದ ದಾಸ್ತಾನಿಗೂ ಇದು ಕಾರಣವಾಗಬಹುದು’ ಎಂದು ತೈಲಮಾರುಕಟ್ಟೆ ವಿಶ್ಲೇಷಕ ಲೂಯೀಸ್ ಡಿಕ್ಸನ್ ಆತಂಕ ವ್ಯಕ್ತಪಡಿಸಿದ್ದಾರೆ. ಭಾರತ ನಿತ್ಯ ಸರಾ ಸರಿ 5,75,000 ಬ್ಯಾರೆಲ್ ತೈಲವನ್ನು ಆಮದು ಮಾಡಿಕೊಳ್ಳುತ್ತಿದೆ. ಆದರೆ ಕಳೆದ ಕೆಲವು ದಿನಗಳಿಂದ ತತ್‌ಕ್ಷಣದ ಮತ್ತು ಕಠಿನ ಸ್ಥಳೀಯ ಲಾಕ್‌ಡೌನ್ ಚಾಲ್ತಿಯಲ್ಲಿರುವುದರಿಂದ ತೈಲ ಬೇಡಿಕೆಗೆ ಭಾರೀ ಹೊಡೆತ ಬಿದ್ದಿದೆ. ಮಾರ್ಚ್ ತಿಂಗಳಿಗೆ ಹೋಲಿಸಿದಲ್ಲಿ, ಎಪ್ರಿಲ್‌ನಲ್ಲಿ ಶೇ.13ರಷ್ಟು ಬೇಡಿಕೆ ಕುಸಿದಿದೆ ಎಂದು ತಿಳಿಸಿದ್ದಾರೆ.
ಇಂದು ಸಚಿವರ ಜತೆ ಮೋದಿ ಸಭೆ :
ದೇಶದ ಕೋವಿಡ್ ಸ್ಥಿತಿ ಕುರಿತು ಚರ್ಚಿಸಲು ಪ್ರಧಾನಿ ಮೋದಿ ಶುಕ್ರವಾರ ಕೇಂದ್ರದ ಸಚಿವರೊಂದಿಗೆ ಸಭೆ ನಡೆಸಲಿದ್ದಾರೆ. ಸೋಂಕಿನ 2ನೇ ಅಲೆ ಅಪ್ಪಳಿಸಿದ ಬಳಿಕ ಸಚಿವರೊಂದಿಗೆ ಮೋದಿ ನಡೆಸುತ್ತಿರುವ ಮೊದಲ ಸಭೆ ಇದಾಗಿದೆ. ಮೇ 1ರಿಂದ ಆರಂಭವಾಗುವ ಲಸಿಕೆ ಅಭಿಯಾನ ಕುರಿತೂ ಚರ್ಚೆ ನಡೆಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Raj Thackeray ಮಹಾ ಫಲಿತಾಂಶದ ನಂತರ ಪ್ರಮುಖ ಪಾತ್ರ ವಹಿಸಲಿದ್ದಾರೆ: ನಂದಗಾಂವ್ಕರ್
Maharastra: ಚುನಾವಣಾ ರ್‍ಯಾಲಿ ರದ್ದುಗೊಳಿಸಿ ದಿಢೀರ್ ದೆಹಲಿಗೆ ವಾಪಸ್ಸಾದ ಸಚಿವ ಅಮಿತ್ ಶಾ
The Sabarmati Report ;ಸಿನಿಮಾವಾಗಿ ಗೋಧ್ರಾ ದುರಂತ: ಸತ್ಯ ಹೊರಬರುತ್ತಿದೆ ಎಂದ ಪ್ರಧಾನಿ
Kailash Gahlot: ಚುನಾವಣೆಗೂ ಮೊದಲೇ ಆಪ್ ತೊರೆದ ಸಚಿವ ಕೈಲಾಶ್ ಗೆಹ್ಲೋಟ್…
Patna: ಆಸ್ಪತ್ರೆಯಲ್ಲಿ ಮೃತಪಟ್ಟ ರೋಗಿಯ ಕಣ್ಣೇ ಮಾಯಾ… ಇಲಿ ತಿಂದಿದೆ ಎಂದ ವೈದ್ಯರು
MUST WATCH
ಹೊಸ ಸೇರ್ಪಡೆ
Pushpa 2 trailer: ಪೈಸಾ ವಸೂಲ್ ಅವತಾರದಲ್ಲಿ ʼಪುಷ್ಪರಾಜ್ʼ; ಅಲ್ಲು ಭರ್ಜರಿ ಆ್ಯಕ್ಷನ್
Chikkamagaluru: ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ
Raj Thackeray ಮಹಾ ಫಲಿತಾಂಶದ ನಂತರ ಪ್ರಮುಖ ಪಾತ್ರ ವಹಿಸಲಿದ್ದಾರೆ: ನಂದಗಾಂವ್ಕರ್
Ration Card: ಅನರ್ಹರಿಗೆ ಬಿಪಿಎಲ್ ಕಾರ್ಡ್ ಕೊಡಲ್ಲ, ಅರ್ಹರಿಗೆ ತಪ್ಪಿಸಲ್ಲ: ಸಿದ್ದರಾಮಯ್ಯ
ಈ ಎಲೆಯಿಂದ ಮಾಡುವ ಖಾದ್ಯ ಆರೋಗ್ಯಕ್ಕೂ ಉತ್ತಮ… ಅದ್ಯಾವ ಎಲೆ ಅಂತೀರಾ ಇಲ್ಲಿದೆ ರೆಸಿಪಿ…
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.