ಧರ್ಮ ಆಧಾರಿತ ಜನಸಂಖ್ಯಾ ಅಸಮತೋಲನವನ್ನು ನಿರ್ಲಕ್ಷಿಸುವಂತಿಲ್ಲ: ಮೋಹನ್ ಭಾಗವತ್
Team Udayavani, Oct 5, 2022, 12:21 PM IST
ನಾಗ್ಪುರ: ಜನಸಂಖ್ಯೆ ನಿಯಂತ್ರಣಕ್ಕಾಗಿ ಭಾರತದಲ್ಲಿ “ಎಲ್ಲರಿಗೂ ಸಮಾನವಾಗಿ ಅನ್ವಯಿಸುವ” ನೀತಿಯ ಅಗತ್ಯವಿದೆ ಎಂದು ಆರ್ ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದರು.
“ಧರ್ಮ ಆಧಾರಿತ ಅಸಮತೋಲನ” ಮತ್ತು “ಬಲವಂತದ ಮತಾಂತರ”ಗಳಿಂದ ದೇಶ ಒಡೆಯುವ ಭೀತಿಯ ಕುರಿತು ಮಾತನಾಡಿದ ಅವರು ಪೂರ್ವ ಟಿಮೋರ್, ಕೊಸೊವೊ ಮತ್ತು ದಕ್ಷಿಣ ಸುಡಾನ್ ಅನ್ನು “ಧಾರ್ಮಿಕ ಸಮುದಾಯ-ಆಧಾರಿತ ಅಸಮತೋಲನದ ಕಾರಣದಿಂದ ಹೊರಹೊಮ್ಮಿದ ಹೊಸ ದೇಶಗಳ” ಉದಾಹರಣೆಗಳಾಗಿ ಉಲ್ಲೇಖಿಸಿದ್ದಾರೆ.
ಆರ್ ಎಸ್‌ಎಸ್ ನ ವಾರ್ಷಿಕ ದಸರಾ ರ್ಯಾಲಿಯಲ್ಲಿ ಮಾತನಾಡಿದ ಅವರು, “ಜನಸಂಖ್ಯೆ ನಿಯಂತ್ರಣದ ಜೊತೆಗೆ ಧಾರ್ಮಿಕ ಆಧಾರದ ಮೇಲೆ ಜನಸಂಖ್ಯೆಯ ಸಮತೋಲನ ಕೂಡಾ ಅಷ್ಟೇ ಮುಖ್ಯವಾದದ್ದು. ಅದನ್ನು ಕಡೆಗಣಿಸುವಂತಿಲ್ಲ. ಜನಸಂಖ್ಯೆಗೆ ಸಂಪನ್ಮೂಲ ಬೇಕಾಗುತ್ತದೆ, ಇಲ್ಲದಿದ್ದರೆ ಅದು ಹೊರೆಯಾಗುತ್ತದೆ. ಜನಸಂಖ್ಯೆಯನ್ನೇ ಆಸ್ತಿ ಮಾಡುವ ದೃಷ್ಟಿಕೋನವೂ ಇದೆ. ಇದೆಲ್ಲವನ್ನೂ ಗಮನದಲ್ಲಿರಿಸಿಕೊಂಡು ಹೊಸ ಪಾಲಿಸಿಯನ್ನು ರೂಪಿಸಬೇಕಿದೆ” ಎಂದರು.
ಜನಸಂಖ್ಯೆಯ ಅಸಮತೋಲನವು ಭೌಗೋಳಿಕ ಗಡಿಗಳಲ್ಲಿ ಬದಲಾವಣೆಗಳಿಗೆ ಕಾರಣವಾಗುತ್ತದೆ. ಜನಸಂಖ್ಯೆ ನಿಯಂತ್ರಣ ಮತ್ತು ಧರ್ಮಾಧಾರಿತ ಜನಸಂಖ್ಯೆಯ ಸಮತೋಲನವು ಇನ್ನು ಮುಂದೆ ನಿರ್ಲಕ್ಷಿಸಲಾಗದ ಪ್ರಮುಖ ವಿಷಯವಾಗಿದೆ. ಆದ್ದರಿಂದ ಸಮಗ್ರ ಜನಸಂಖ್ಯಾ ನೀತಿಯನ್ನು ತರಬೇಕು. ಅದು ಎಲ್ಲರಿಗೂ ಸಮಾನವಾಗಿ ಅನ್ವಯಿಸಬೇಕು ಎಂದು ಮೋಹನ್ ಭಾಗವತ್ ಹೇಳಿದರು.
ಇದನ್ನೂ ಓದಿ:ಬುಮ್ರಾ ಬದಲಿಗೆ ವಿಶ್ವಕಪ್ ನಲ್ಲಿ ಆಡುವುದು ಯಾರು?: ರೋಹಿತ್ ಹೇಳಿದ್ದೇನು?
ಇಂತಹ ನೀತಿ- ನಿಯಮಗಳಲ್ಲಿ ಯಾವಾಗಲೂ ಮಹಿಳೆಯ ಆರೋಗ್ಯವನ್ನು ಗಮನದಲ್ಲಿರಿಸಬೇಕು ಎಂದರು. ಇದೇ ಮೊದಲ ಬಾರಿಗೆ ಆರ್ ಎಸ್ಎಸ್ ದಸರಾ ಕಾರ್ಯಕ್ರಮದಲ್ಲಿ ಮಹಿಳೆಯೊಬ್ಬರು ಪ್ರಮುಖ ಅತಿಥಿಯಾಗಿ ಭಾಗವಹಿಸಿದ್ದಾರೆ. ಪರ್ವಾತಾರೋಹಿ ಸಂತೋಷ್ ಯಾದವ್ ಅವರು ಅತಿಥಿಯಾಗಿ ಭಾಗವಹಿಸಿದ್ದಾರೆ.
#WATCH | Population imbalance leads to changes in geographical boundaries… Population control & religion-based population balance is an imp subject that can no longer be ignored…So a holistic population policy should be brought & should be equally applicable to all: RSS chief pic.twitter.com/hYU6itnO47
— ANI (@ANI) October 5, 2022
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hydarabad: ಪುಷ್ಪ-2 ಚಿತ್ರದ ಪ್ರದರ್ಶನ ವೇಳೆ ಗಾಯಗೊಂಡಿದ್ದ ಬಾಲಕನ ಸ್ಥಿತಿ ಗಂಭೀರ
ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್
Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ
Mumbai: ಗೇಟ್‌ವೇ ಆಫ್ ಇಂಡಿಯಾ ಬಳಿ ಮುಳುಗಿದ 67 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು
Umar Khalid: ದೆಹಲಿ ಗಲಭೆ ಪ್ರಕರಣದ ಆರೋಪಿ ಉಮರ್ ಖಾಲಿದ್‌ಗೆ 7 ದಿನಗಳ ಮಧ್ಯಂತರ ಜಾಮೀನು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.