Demonetisation ಅಮೆರಿಕದ ಪಿತೂರಿ:ಮಾಜಿ ಸಿಎಂ ಚವಾಣ್
Team Udayavani, Sep 27, 2017, 12:40 PM IST
ನಾಗಪುರ: ಹಿರಿಯ ಕಾಂಗ್ರೆಸ್ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಪೃಥ್ವಿರಾಜ್ ಚವಾಣ್ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಪಮೌಲ್ಯ ನಿರ್ಣಯವನ್ನು ಭಾರತದ ಆರ್ಥಿಕತೆ ನಾಶಮಾಡಲು ಅಮೆರಿಕ ನಡೆಸಿದ ಪಿತೂರಿ ಎಂದು ಕರೆದಿದ್ದಾರೆ.
ಅಮೆರಿಕದ ಅರ್ಥವ್ಯವಸ್ಥೆಯನ್ನು ಸುಧಾರಿಸಲು ಹಾಗೂ ಭಾರತದ ಆರ್ಥಿಕತೆಯನ್ನು ನಾಶ ಮಾಡಲು ಅಮೆರಿಕದ ಮಾಜಿ ರಾಷ್ಟ್ರಪತಿ ಬರಾಕ್ ಒಬಾಮಾ ನಡೆಸಿದ ಪಿತೂರಿಗೆ ಸಿಕ್ಕಿಕೊಂಡು ಮೋದಿ ಅವರು ದೇಶದ ಜನರ ಮೇಲೆ ನೋಟುರದ್ದತಿಯ ಪರೀಕ್ಷೆಯನ್ನು ನಡೆಸಿದ್ದು, ಅದರಿಂದಾಗಿ ಭಾರತದ ಆರ್ಥಿಕತೆಯು ಈಗ ಅವಸಾನದ ಅಂಚಿನತ್ತ ಸಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ರವಿವಾರ ಇಲ್ಲಿ ಚರ್ಚಾ ಕಾರ್ಯಕ್ರಮವೊಂದರಲ್ಲಿ ಮಾತ ನಾಡಿದ ಕಾಂಗ್ರೆಸ್ ನಾಯಕ ಚವಾಣ್ ಅವರು, ಪ್ರಧಾನಿ ಮೋದಿ ಅವರಿಗೆ ಅರ್ಥವ್ಯವಸ್ಥೆಯ ಬಗ್ಗೆ ಹೆಚ್ಚಿಗೆ ‰ಜ್ಞಾನ ಇಲ್ಲ. ಇಂಥದರಲ್ಲಿ ಭ್ರಷ್ಟಾಚಾರ ಮುಕ್ತ ಭಾರತದ ಅವರ ಧ್ಯೇಯದ ಅಡಿಯಲ್ಲಿ ಕೆಲವು ಅಧಿಕಾರಿಗಳು ಅವರಿಗೆ ನೋಟು ರದ್ಧತಿಯ ಬಗ್ಗೆ ಸಲಹೆಯನ್ನು ನೀಡಿದ್ದರು.ಆದರೆ, ಪ್ರಧಾನಿ ಅವರು ಅದರ ಬಗ್ಗೆ ಯಾವುದೇ ಯೋಚನೆ ಅಥವಾ ಅರ್ಥವನ್ನು ಮಾಡಿಕೊಳ್ಳದೆ ನೇರವಾಗಿ ನಿರ್ಣಯವನ್ನು ತೆಗೆದುಕೊಂಡರು. ಇದೀಗ ದೇಶದ ಜನರು ಅದರ ಪರಿಣಾಮಗಳನ್ನು ಎದುರಿಸುತ್ತಿದ್ದಾರೆ ಎಂದರು.
ವಿಶ್ವದ್ಯಂತ ರಾಷ್ಟ್ರಗಳ ಪ್ರಮುಖರು ತಮ್ಮ ದೇಶದ ಕೈಗಾರಿಕೋದ್ಯ ಮಿಗಳಿಗೆ ಲಾಭ ನೀಡಲು ಬಂದು-ಹೋಗುತ್ತಿರುತ್ತಾರೆ. ಅದೇ, ಪ್ರಧಾನಿ ಮೋದಿ ಅವರು ಚೆಕ್‌ಬುಕ್ ಹಿಡಿದುಕೊಂಡು ಕೇವಲ ಖರೀದಿ ದಾರನಂತೆ ವಿದೇಶಗಳ ಪ್ರವಾಸ ಮಾಡುತ್ತಾರೆ. ಈ ಕಾರಣದಿಂದಾಗಿ ಅವರಿಗೆ ಎಲ್ಲ ಕಡೆಗಳಲ್ಲೂ ರನ್ನ ಗಂಬಳಿಯ ಸ್ವಾಗತ ಸಿಗುತ್ತದೆ. ಆದರೆ, ದೇಶಕ್ಕೆ ಏನೂ ಸಿಗುವುದಿಲ್ಲ ಎಂದು ಚವಾಣ್ ಕಿಡಿಕಾರಿದ್ದಾರೆ.
ಬುಲೆಟ್ ರೈಲು ವಿರೋಧಿಸಿದ್ದಕ್ಕೆ ಪ್ರಭುವಿನ ಎತ್ತಂಗಡಿ !
ಮಾಜಿ ರೈಲ್ವೇ ಸಚಿವ ಸುರೇಶ್ ಪ್ರಭು ಅವರು ಬುಲೆಟ್ ರೈಲು ಯೋಜನೆಗೆ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಅವರನ್ನು ರೈಲ್ವೇ ಸಚಿವ ಖಾತೆಯಿಂದ ಎತ್ತಂಗಡಿ ಮಾಡಲಾಗಿದೆ. ಅದೇ, ನಿತಿನ್ ಗಡ್ಕರಿ ಅವರ ವರ್ಚಸ್ಸನ್ನು ಕಡಿಮೆ ಮಾಡುವ ಉದ್ದೇಶದಿಂದ ಅವರಿಗೆ ಗಂಗಾ ಶುದ್ಧೀಕರಣದಂತಹ ಸಚಿವಾಲಯದ ಜವಾಬ್ದಾರಿ ವಹಿಸಲಾಗಿದೆ. ಬುಲೆಟ್ ರೈಲು ಯೋಜನೆಯಿಂದ ದೇಶಕ್ಕೆ ಏನೂ ಲಾಭ ಇಲ್ಲ. ಇದರಿಂದ ಕೇವಲ ಜಪಾನ್‌ಗೆ ಲಾಭವಾಗಲಿದೆ ಎಂದೂ ಅವರು ಆರೋಪಿಸಿದ್ದಾರೆ.
ರಾಜ್ಯದ ಭ್ರಷ್ಟ ಸಚಿವರ ವಿರುದ್ಧ ನ್ಯಾಯಾಂಗ ತನಿಖೆಗೆ ಆಗ್ರಹ ಇದೇ ಸಂದರ್ಭದಲ್ಲಿ ದೇವೇಂದ್ರ ಫಡ್ನವೀಸ್ ಸರಕಾರದ ಭ್ರಷ್ಟ ಸಚಿವರು ಹಾಗೂ ಅಧಿಕಾರಿಗಳ ವಿರುದ್ಧ ನ್ಯಾಯಾಂಗ ತನಿಖೆ ನಡೆಸುವಂತೆ ಆಗ್ರಹಿಸಿದ ಚವಾಣ್, ಪ್ರಕಾಶ್ ಮೆಹ್ತಾ, ಸುಭಾಷ್ ದೇಸಾಯಿ ಅವರಿಂದ ಹಿಡಿದು ವಿಶ್ವಾಸ್ ಪಾಟೀಲ್ ವರೆಗಿನ ಭ್ರಷ್ಟಾಚಾರ ಆರೋಪ ಹಾಗೂ ರಾಧೆಶ್ಯಾಮ್ ಮೋಪಲ್ವಾರ್ ಅವರ ವಿರುದ್ಧದ ಅವ್ಯವಹಾರದಂತಹ ಗಂಭೀರ ಪ್ರಕರಣಗಳು ಬಯಲಾ ಗಿರುವ ಹೊರತಾಗಿಯೂ ಸಿಎಂ ಯಾವುದೇ ಕ್ರಮ ಕೈಗೊಳ್ಳದೆ ಸುಮ್ಮನೆ ಕುಳಿತಿದ್ದಾರೆ ಎಂದು ದೂರಿದ್ದಾರೆ. ಚರ್ಚೆಯಲ್ಲಿ ಮಾಜಿ ರಾಜ್ಯಸಚಿವ ರಾಜೇಂದ್ರ ಮುಲಕ್ ಅವರೂ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.