ಆಧಾರ್ ಇಲ್ಲದ ತುಂಬು ಗರ್ಭಿಣಿ ಆಸ್ಪತ್ರೆ ಹೊರಗೇ ಮಗು ಹೆತ್ತಳು !
Team Udayavani, Feb 10, 2018, 4:49 PM IST
ಗುರುಗ್ರಾಮ : ಆಧಾರ್ ಕಾರ್ಡ್ ಇಲ್ಲದ ಕಾರಣಕ್ಕೆ ಇಲ್ಲಿನ ಸರಕಾರಿ ಆಸ್ಪತ್ರೆಯ ಎಮರ್ಜೆನ್ಸಿ ಹೆರಿಗೆ ವಾರ್ಡ್‌ಗೆ ಸೇರ್ಪಡೆ ನಿರಾಕರಿಸಲ್ಪಟ್ಟ ಮಹಿಳೆಯೊಬ್ಬಳು ಆಸ್ಪತ್ರೆಯ ಹೊರಗೆ ಮಗುವಿಗೆ ಜನ್ಮ ನೀಡಿದ ಘಟನೆ ವರದಿಯಾಗಿದೆ.
ಈ ಘಟನೆ ಬೆಳಕಿಗೆ ಬರುತ್ತಲೇ ಗುರುಗ್ರಾಮ ಸರಕಾರಿ ಆಸ್ಪತ್ರೆಯ ಚೀಫ್ ಮೆಡಿಕಲ್ ಆಫೀಸರ್ ಡಾ. ಬಿ ಕೆ ರಾಜೋರಾ ಅವರು ಪ್ರಕರಣಕ್ಕೆ ಸಂಬಂಧಿಸಿದ ಡಾಕ್ಟರ್ ಮತ್ತು ಸ್ಟಾಫ್ ನರ್ಸ್ ಳನ್ನು ಅಮಾನತು ಮಾಡಿದ್ದಾರೆ.
ಆಧಾರ್ ಕಾರ್ಡ್ ಇಲ್ಲದ್ದಕ್ಕೆ ಹೆರಿಗೆ ವಾರ್ಡ್‌ಗೆ ಪ್ರವೇಶ ನಿರಾಕರಿಸಲ್ಪಟ್ಟು ಆಸ್ಪತ್ರೆ ಹೊರಗೆ ಮಗುವಿಗೆ ಜನ್ಮ ನೀಡಿದ ಮಹಿಳೆಯನ್ನು ಮುನ್ನಿ ಕೇವಾತ್ (25) ಎಂದು ಗುರುತಿಸಲಾಗಿದೆ.
ಆಕೆಯನ್ನು ಆಕೆಯ ಪತಿ ಇಂದು ಬೆಳಗ್ಗೆ 9 ಗಂಟೆಗೆ ಹೆರಿಗೆಗಾಗಿ ಆಸ್ಪತ್ರೆಗೆ ಒಯ್ದಿದ್ದರು. ಮಹಿಳೆಗೆ ತೀವ್ರ ಹೆರಿಗೆ ನೋವು ಬಂದಿತ್ತು.
“ಆಗ ನಾವು ಕ್ಯಾಶುವಲ್ಟಿ ವಾರ್ಡ್‌ಗೆ ಹೋದೆವು. ಅಲ್ಲಿನ ಸಿಬಂದಿಗಳು ಹೆರಿಗೆ ವಾರ್ಡ್‌ಗೆ ಹೋಗುವಂತೆ ನಮ್ಮನ್ನು ದಾಟಿಸಿದರು. ನಾವು ಅಲ್ಲಿಗೆ ತಲುಪಿದಾಗ ಅಲ್ಲಿನ ಸಿಬಂದಿ ನನ್ನ ಪತ್ನಿಗೆ ನಿನ್ನ ಬಳಿ ಆಧಾರ್ ಕಾರ್ಡ್ ಇದೆಯಾ ಎಂದು ಪ್ರಶ್ನಿಸಿದರು. ಪತ್ನಿ ಇಲ್ಲವೆಂದು ಉತ್ತರಿಸಿದಳು. ಹಾಗಾದರೆ ಅಡ್ಮಿಶನ್ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಅವರು ಕಡ್ಡಿ ಮುರಿದಂತೆ ಹೇಳಿದರು’ ಎಂದು ಮುನ್ನಿ ಕೇವಾತ್ ಅವರ ಪತಿ ಅರುಣ್ ಕೇವಾತ್ ಮಾಧ್ಯಮಕ್ಕೆ ತಿಳಿಸಿದರು.
ಆಧಾರ್ ಕಾರ್ಡ್ ಫೋಟೋ ಪ್ರತಿ ಸಾಲದು; ಒರಿಜಿನಲ್ ಕಾರ್ಡ್ ಬೇಕು ಎಂದು ಹೆರಿಗೆ ವಾರ್ಡ್‌ನವರು ಹೇಳಿದಾಗ ಮುನ್ನಿಯ ಪತಿ, ಆಕೆಯ ಜವಾಬ್ದಾರಿಯನ್ನು ಅಲ್ಲೇ ಇದ್ದ ತನ್ನ ಮನೆಯವರಿಗೆ ಒಪ್ಪಿಸಿ, ತಾನು ಒರಿಜಿನಲ್ ಕಾರ್ಡ್ ತರಲು ಮನೆಗೆ ಧಾವಿಸಿದರು. ಈ ಇಡಿಯ ಪ್ರಹಸನವನ್ನು ಮನೆಯವರು ತಮ್ಮ ಮೊಬೈಲ್‌ನಲ್ಲಿ ಶೂಟ್ ಮಾಡುತ್ತಿದ್ದರೂ ಆಸ್ಪತ್ರೆ ಸಿಬಂದಿಗಳು ಕ್ಯಾರೇ ಅನ್ನಲಿಲ್ಲ.
ಇಷ್ಟಾಗುವಾಗ ತೀವ್ರ ಹೆರಿಗೆ ನೋವಿಗೊಳಗಾದ ಮುನ್ನಿ ಆಸ್ಪತ್ರೆಯ ಹೊರಗೆ ಜಗುಲಿಯಲ್ಲೇ ಮಗುವಿಗೆ ಜನ್ಮ ನೀಡಿದಳು. ಈ ಪ್ರಸವ ಪ್ರಕ್ರಿಯೆಯಲ್ಲಿ ಜಗುಲಿಯಲ್ಲಿ ರಕ್ತ ಹರಡಿಕೊಂಡಾಗಲೇ ಆಸ್ಪತ್ರೆ ಸಿಬಂದಿಗಳು ಆಕೆಯ ನೆರವಿಗೆ ಬಂದರು. ಅಂತೂ ತಾಯಿ ಮಗು ಬದುಕಿಕೊಂಡಿತು !
ಮುನ್ನಿ ಕುಟುಂಬದವರು ಈ ಘಟನೆಯನ್ನು ಪ್ರತಿಭಟಿಸಿ ಆಸ್ಪತ್ರೆಯ ಮೆಡಿಕಲ್ ಆಫೀಸರ್ ಮುಂದೆ ಧರಣಿ ಕೂತರು. ಒತ್ತಡಕ್ಕೆ ಮಣಿದ ಅವರು ಪ್ರಕರಣಕ್ಕೆ ಸಂಬಂಧಿಸಿದ ಡಾಕ್ಟರ್ ಮತ್ತು ನರ್ಸನ್ನು ಅಮಾನತು ಮಾಡಿದರು. ಹೆಚ್ಚಿನ ತನಿಖೆ ನಡೆಯುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
J&K:ಪಾಕ್ ಮೂಲದ ಎಲ್ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Owaisi; ತಿರುಪತಿಯಲ್ಲಿ ಮುಸ್ಲಿಂ ಸ್ಟಾಫ್ ಇಲ್ಲದಿರುವಾಗ ವಕ್ಫ್ ನಲ್ಲೇಕೆ ಹಿಂದೂಗಳು
Sparks Row; ಉಗ್ರರನ್ನು ಹ*ತ್ಯೆ ಮಾಡಬಾರದು…: ಫಾರೂಕ್ ಅಬ್ದುಲ್ಲಾ ಹೇಳಿಕೆ
INDIA bloc; ಜಾರ್ಖಂಡ್ ಸೀಟು ಹಂಚಿಕೆ ಒಪ್ಪಂದ ಅಂತಿಮ: ಜೆಎಂಎಂಗೆ 43 ಸ್ಥಾನ
Shiv Sena ; ಭಾರೀ ವಿವಾದದ ಬಳಿಕ ಶೈನಾ ಕ್ಷಮೆ ಯಾಚಿಸಿದ ಅರವಿಂದ್ ಸಾವಂತ್
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.