ನರೇಶ್ ಗೋಯೆಲ್ ವಿದೇಶ ಪ್ರಯಾಣಕ್ಕೆ ಕೊಕ್
Team Udayavani, Jul 10, 2019, 5:00 AM IST
ಹೊಸದಿಲ್ಲಿ: ಜೆಟ್ ಏರ್ವೇಸ್ನ ಮಾಜಿ ಮುಖ್ಯಸ್ಥ ನರೇಶ್ ಗೋಯೆಲ್ ವಿದೇಶ ಪ್ರಯಾಣಕ್ಕೆ ಕೋರ್ಟ್ ತಡೆ ಹಾಕಿದೆ. ಕೇಂದ್ರ ಸರಕಾರ ಹೊರಡಿಸಿರುವ ಲುಕ್ಔಟ್ ನೋಟಿಸ್ ಅನ್ನು ವಜಾಗೊಳಿಸುವಂತೆ ನರೇಶ್ ಕೋರ್ಟ್ ಮೊರೆ ಹೋಗಿದ್ದರು. ಈ ಸಂಬಂಧ ದಿಲ್ಲಿ ಹೈಕೋರ್ಟ್ ವಿಚಾರಣೆ ನಡೆಸಿ, ವಿದೇಶಕ್ಕೆ ತೆರಳಬೇಕೆಂದಾದರೆ 18 ಸಾವಿರ ಕೋಟಿ ರೂ. ಸಾಲ ಮರುಪಾವತಿ ಮಾಡಿ ತೆರಳಬಹುದು ಎಂದಿದೆ. ವಿಚಾರಣೆಯನ್ನು ಆ.23 ಕ್ಕೆ ಮುಂದೂಡಿದೆ.
ಮೇ 25 ರಂದು ಜೆಟ್ ಏರ್ವೇಸ್ಗೆ ಸಂಭಾವ್ಯ ಹೂಡಿಕೆ ದಾರರೊಂದಿಗೆ ಮಾತನಾಡಲು ವಿದೇಶಕ್ಕೆ ತೆರಳಲು ಅಣಿ ಯಾಗಿದ್ದೆ. ಆದರೆ ವಿಮಾನದಿಂದ ನನ್ನನ್ನು ಮತ್ತು ನನ್ನ ಪತ್ನಿಯನ್ನು ಕೆಳಗಿಳಿಸಿದರು. ಇದು ನನ್ನ ಮೂಲಭೂತ ಹಕ್ಕಿನ ಉಲ್ಲಂಘನೆ. ನನ್ನ ವಿರುದ್ಧ ಹೊರಡಿಸಿದ ಲುಕ್ಔಟ್ ನೋಟಿಸ್ನ ಪ್ರತಿಯನ್ನೂ ನೀಡಲಿಲ್ಲ ಎಂದು ನರೇಶ್ ದೂರಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಧೀಶ ಸುರೇಶ್ ಕೈತ್, “ನೀವು ವಿದೇಶಕ್ಕೆ ತೆರಳಬೇಕೆಂದಿದ್ದರೆ ಸಾಲದ ಮೊತ್ತ 18 ಸಾವಿರ ಕೋಟಿ ರೂ. ಜಮೆ ಮಾಡಿ ಎಂದಿದ್ದಾರೆ. ಅಲ್ಲದೆ, ಹೂಡಿಕೆದಾರರೊಂದಿಗೆ ಫೋನ್ ಮತ್ತು ಇತರ ಡಿಜಿಟಲ್ ವಿಧಾನದಲ್ಲೂ ಮಾತುಕತೆ ನಡೆಸಬಹುದು’ ಎಂದು ಸೂಚಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra: ಏಕ್ನಾಥ್ ಹೇ ತೋ ಸೇಫ್ ಹೇ: ಶಿಂಧೆ ಶಿವಸೇನೆ ಹೊಸ ಮಂತ್ರ
Old Parliament House: ಭಾರತದ ಸಂವಿಧಾನವು ಜೀವಂತಿಕೆಯ, ಪ್ರಗತಿಪರ ದಾಖಲೆ: ರಾಷ್ಟ್ರಪತಿ
Maharaja: ಬಾಂಧವ್ಯವೃದ್ಧಿ ಬಳಿಕ 29ಕ್ಕೆ ಚೀನಾದಲ್ಲಿ ಮೊದಲ ಬಾರಿಗೆ ತಮಿಳು ಸಿನಿಮಾ ರಿಲೀಸ್!
Actress: ಫ್ರೆಂಚ್ ಗೆಳೆಯನೊಂದಿಗೆ ಬ್ರೇಕ್ಅಪ್ ಆಗಿದೆ: ಮಲ್ಲಿಕಾ ಶೆರಾವತ್
Chhattisgarh: ಹಳಿ ತಪ್ಪಿದ ಗೂಡ್ಸ್ ರೈಲಿನ 20 ಬೋಗಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.